ಸಮಾಚಾರ

ರಕ್ಷಿತ್ ಶೆಟ್ಟಿಯ ಸಿನಿಮಾದಲ್ಲಿ ನಟಿಸಬೇಕಾ? ಇದೋ ಇಲ್ಲಿದೆ ಸುವರ್ಣಾವಕಾಶ.

ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ ತಮ್ಮ ಚಿತ್ರ ನಿರ್ಮಾಣ ಸಂಸ್ಥೆ “ಪರಂವಾ ಸ್ಟುಡಿಯೋ’ ಮೂಲಕ ಅನೇಕ ಸಿನಿಮಾ ನಿರ್ಮಿಸುತ್ತಿದ್ದಾರೆಅವುಗಳಲ್ಲಿ ‘ 777 ಚಾರ್ಲಿ ಎಂಬ ಸಿನಿಮಾ ಕೂಡ ಒಂದು ಎಂಬ ವಿಷಯ ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯವರೇ ನಾಯಕ. ಸದ್ಯ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು ಕಿರಿಕ್ ಪಾರ್ಟಿ ಸಿನಿಮಾ ರೀತಿ ಈ ಚಿತ್ರದಲ್ಲೂ ಹೊಸ ಮುಖಗಳಿಗೆ ಅವಕಾಶ ಕೊಡಲು ನಿರ್ಧರಿಸಿದೆ.

 

 

ಸದ್ಯ ರಕ್ಷಿತ್ ಶೆಟ್ಟಿಯವರು ನಾಯಕಿಯ ಪಾತ್ರದ ಆಯ್ಕೆಗಾಗಿ ಆಡಿಷನ್ ನಡೆಸಲು ಮುಂದಾಗಿದ್ದು ಈ ಬಾರಿಯೂ ಕೊಡ ಎರಡು ಹೊಸಾ ಪ್ರತಿಭೆಗಳಿಗೆ ನಾಯಕಿಯ ಅವಕಾಶ ಕೊಡಲು ತೀರ್ಮಾನ ಮಾಡಿದ್ದಾರೆ. ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವತಿಯರು [email protected] ಎಂಬ ಇ ಮೇಲ್‌ಗೆ ನಿಮ್ಮ ವಿವರಗಳನ್ನು ಕಳಿಸಬಹುದು. ನಿಮ್ಮ ವಿವರಗಳು ಚಿತ್ರತಂಡಕ್ಕೆ ಇಂಪ್ರೆಸ್ ಮಾಡಿದರೆ ನಿಮ್ಮನ್ನು ಆಡಿಷನ್’ಗೆ ಕರೆಯಲಾಗುವುದು.. ಆಡಿಷನ್ನಿಗೆ ವಿವರ ಕಳುಹಿಸುವ ಹುಡುಗಿಯರು ನಟನೆಯ ಬಗ್ಗೆ ಪ್ರಾಥಮಿಕ ಜ್ಞಾನ ಹಾಗೂ ಅತೀವ ಪ್ರೀತಿ ಹೊಂದಿರ ಬೇಕಿರೋದು ಖಡ್ಡಾಯ.

 

 

ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್‌ ರಾಜ್‌ ನಿರ್ದೇಶನದ ಮಾಡಲಿದ್ದಾರೆ.. ನಾಬಿನ್‌ ಪೋಲ್‌ ಸಂಗೀತ, ಮತ್ತು ಅರುಣ್‌ ಕಶ್ಯಪ್‌ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದಂತೆ ಕಲಾವಿದರ ಆಯ್ಕೆ ಇನ್ನು ನಡೆಯಬೇಕಿದ್ದು ಚಿತ್ರಕಥೆ ಫೈನಲ್ ಆದ ಬಳಿಕ ಮಡಿಕೇರಿ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದ ಕಥೆ ಒಂದು ನಾಯಿ ಹಾಗೂ ಹೀರೋ ಸುತ್ತ ಸುತ್ತುತ್ತದೆಯಂತೆ. ‘ಈ ಕಥೆ ರಕ್ಷಿತ್​ಗೆ ತುಂಬ ಇಷ್ಟವಾಗಿತ್ತು. ಅವರೇ ನಟಿಸಬೇಕು ಎಂದುಕೊಂಡಿದ್ದರು ಆದರೆ ಅವರ ಬೇರೆ ಕಮಿಟ್​ವೆುಂಟ್​ಗಳಿಂದ ಈ ಚಿತ್ರ ಮಾಡುವುದಕ್ಕೆ ಸಮಯ ಸಿಕ್ಕಿರಲಿಲ್ಲ… ಆದರೆ ಈಗ ಅದಕ್ಕೆ ಕಾಲ ಕೂಡಿಬಂದಿದೆ. ” ಎನ್ನುತ್ತಾರೆ ನಿರ್ದೇಶಕ ಕಿರಣ್ ರಾಜ್

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top