ದೇವರು

ಕೌರವನಾದ ದುರ್ಯೋಧನ ಮನಸ್ಸು ಮಾಡಿದ್ರೆ ಒಂದೇ ದಿನದಲ್ಲಿ 5 ಜನ ಪಾಂಡವರನ್ನ ಮುಗಿಸಿಬಿಡಬಹುದಿತ್ತು ಆದರೆ ಹಾಗೆ ಮಾಡ್ಲಿಲ್ಲ ಯಾಕೆ ಗೊತ್ತಾ

ಮಹಾ ಮಾಯದ ಮೋಸದ ಜೂಜಿನ ಆಟದಲ್ಲಿ ಸೋತ ಪಾಂಡವರು ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತ ವಾಸವನ್ನು ಮಾಡಬೇಕಾಗಿತ್ತು ,ವನವಾಸವನ್ನು ಮುಗಿಸಿ ಮರಳಿ ಬಂದು ತಮ್ಮ ಸಾಮ್ರಾಜ್ಯವನ್ನು ಹಿಂದಿರುಗಿಸುವಂತೆ ಪಾಂಡವರು ಕೌರವರನ್ನು ಕೇಳಿಕೊಳ್ಳಲು ರಾಯಭಾರಿಯನ್ನು ಕಳುಹಿಸುತ್ತಾರೆ ಆಗ ಕೌರವರು ಇದಕ್ಕೆ ಒಪ್ಪದೆ ಅವಮಾನ ಮಾಡಿ ಕಳುಹಿಸುತ್ತಾರೆ ,ಆ ನಂತರ ಶ್ರೀಕೃಷ್ಣನು ಮಧ್ಯಸ್ಥಿಕೆ ವಹಿಸಿ ಸಾಮ್ರಾಜ್ಯವಲ್ಲ ಬದಲಾಗಿ ಐದು ಊರುಗಳನ್ನು ಪಾಂಡವರಿಗೆ ನೀಡಬೇಕೆಂದು ಕೇಳಿಕೊಳ್ಳುತ್ತಾನೆ ಇದಕು ಕೂಡ ಕೌರವರು ಒಪ್ಪುವುದಿಲ್ಲ .

 

 

ಇದರಿಂದಾಗಿ ಪಾಂಡವರು ಹಾಗೂ ಕೌರವರ ಮಧ್ಯೆ ಕುರುಕ್ಷೇತ್ರ ಯುದ್ಧ ಅನಿವಾರ್ಯವಾಗಿತ್ತು ಕುರುಕ್ಷೇತ್ರ ಯುದ್ಧ ಆರಂಭವಾದ ದಿನದಿಂದಲೂ ಕೌರವರಿಗೆ ಸೋಲೇ ಆಗುತ್ತಿತ್ತು , ಕೌರವರ ಸೇನೆಯನ್ನು ಮುನ್ನಡೆಸುತ್ತಿದ್ದದ್ದು ಭೀಷ್ಮ ಮಹಾರಾಜನು ಆದರೆ ಭೀಷ್ಮ ಮಹಾರಾಜನು ಕೌರವರು ಹಾಗೂ ಪಾಂಡವರಿಗೆ ಇಬ್ಬರಿಗೂ ತಾತನಾಗ ಬೇಕಿತ್ತು ಇಬ್ಬರು ಮೊಮ್ಮಕ್ಕಳೇ ಆದ ಕಾರಣ ಕೌರವರ ಸೇನೆಯನ್ನು ಮುನ್ನಡೆಸಿದ್ದರೂ ಸಹ ಪಾಂಡವರನ್ನು ಭೀಷ್ಮನು ಹತ್ಯೆ ಮಾಡುತ್ತಿರಲಿಲ್ಲ .

ಹೀಗೆ ನಿರಂತರ ಸೋಲಿನಿಂದ ಕಂಗೆಟ್ಟಿದ್ದ ದುರ್ಯೋಧನನ್ನು ಒಂದು ದಿನ ಕೋಪದಿಂದ ಭೀಷ್ಮನ ಶಿಭಿರದೊಳಗೆ ನುಗ್ಗಿ ಪ್ರಶ್ನೆ ಮಾಡುತ್ತಾನೆ ‘ನೀನು ನ್ಯಾಯ ಸಮ್ಮತವಾದ ಯುದ್ಧವನ್ನು ಮಾಡುತ್ತಿಲ್ಲ ನೀನು ಮಹಾ ಮಹಾ ಯೋಧ ಎಂದು ನಾನು ನಂಬಿದ್ದೆ ಆದರೆ ನಮ್ಮ ಜೊತೆಯೇ ಇದ್ದುಕೊಂಡು ನೀನು ಪಾಂಡವರಿಗೆ ಸಹಾಯ ಮಾಡುತ್ತೀಯ ಎಂದು ಅಂದುಕೊಂಡಿರಲಿಲ್ಲ ಮಹಾ ಸೈನಿಕನಾದ ನೀನು ಐದು ಜನ ಪಾಂಡವರನ್ನು ಕೊಲ್ಲಲು ನಿನ್ನ ಕೈಯಲ್ಲಿ ಆಗಲಿಲ್ಲ’ ಎಂದು ನೇರಾನೇರ ಪ್ರಶ್ನೆ ಮಾಡುತ್ತಾನೆ.

 

 

ಇದರಿಂದ ಮನನೊಂದ ಭೀಷ್ಮನು 5 ಬಾಣಗಳನ್ನು ತನ್ನ ಬತ್ತಳಿಕೆಯಿಂದ ತೆಗೆದು ಮನಸ್ಸಿನಲ್ಲಿ ಮಂತ್ರವನ್ನು ಹೇಳಿಕೊಂಡು ನನ್ನ ಎಲ್ಲಾ ಶಕ್ತಿಯನ್ನು ಈ ಐದು ಬಾಣಗಳಲ್ಲಿ ಇರಿಸಿದ್ದೇನೆ ಇದನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ನಾಳೆ ಸಂಹರಿಸಿ ಎಂದು ಹೇಳುತ್ತಾನೆ, ಆದರೆ ರಾತ್ರಿಯಾದ ಕಾರಣ ಈ ಬಾಣಗಳು ನನ್ನ ಬಳಿಯೇ ಇರಲಿ ಬೆಳಗ್ಗೆ ತೆಗೆದುಕೊಂಡು ಹೋಗು ಎಂದು ಭೀಷ್ಮನು ಹೇಳುತ್ತಾನೆ ಆದರೆ ದುರ್ಯೋಧನನನ್ನು ಈ ಬಾಣಗಳಲ್ಲಿ ಭೀಷ್ಮನ ಅತೀವವಾದ ಶಕ್ತಿಯಿದೆ ಇದು ಒಂದು ವೇಳೆ ಪಾಂಡವರಿಗೆ ದೊರೆತರೆ ನಮ್ಮನ್ನೇ ಸಂಹಾರ ಮಾಡಬಹುದು ಎಂದು ಭಾವಿಸಿ ಆ ಬಾಣಗಳನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುತ್ತಾನೆ .

 

 

ಆದರೆ ಭೀಷ್ಮ ಹಾಗೂ ದುರ್ಯೋಧನನ ನಡುವೆ ನಡೆದ ಸಂಭಾಷಣೆಯನ್ನು ಗೂಢಚಾರರ ಮೂಲಕ ಶ್ರೀಕೃಷ್ಣನು ತಿಳಿದುಕೊಂಡ .

ಆಗ ಶ್ರೀಕೃಷ್ಣನು ಒಂದು ವೇಳೆ ಈ ಬಾಣವನ್ನು ದುರ್ಯೋಧನನ್ನು ಪಾಂಡವರ ಮೇಲೆ ಪ್ರಯೋಗ ಮಾಡಿದರೆ ಪಾಂಡವರು ಸಂಪೂರ್ಣವಾಗಿ ನಿರ್ನಾಮವಾಗುತ್ತಾರೆ ಇದನ್ನು ಹೇಗಾದರೂ ತಡೆಯಬೇಕು ಎಂದು ಭಾವಿಸಿ ಒಂದು ಉಪಾಯವನ್ನು ಮಾಡುತ್ತಾನೆ, ಆಗ ಆತನಿಗೆ ಏನೂ ಹೊಳೆದಿತ್ತು ಎಂದರೆ ಈ ಹಿಂದೆ ಪಾಂಡವರು ವನವಾಸದಲ್ಲಿ ಇದ್ದ ಸಮಯದಲ್ಲಿ ದುರ್ಯೋಧನ ಹಾಗೂ ಗಂಧರ್ವರ ಮಧ್ಯೆ ಜಗಳವೊಂದು ನಡೆದಿರುತ್ತದೆ ಗಂಧರ್ವರು ದುರ್ಯೋಧನನ ಮೇಲೆ ಎರಗಿ ಬೀಳುತ್ತಾರೆ ಆ ಸಮಯದಲ್ಲಿ ಅರ್ಜುನನು ದುರ್ಯೋಧನನ್ನು ಕಾಪಾಡುತ್ತಾನೆ .

ದುರ್ಯೋಧನನ್ನು ಕಾಪಾಡಿದ ಅರ್ಜುನನನ್ನು ಕುರಿತು ದುರ್ಯೋಧನ ನಿನಗೆ ಏನು ಬೇಕು ಕೇಳು ನಾನು ಕೊಡುತ್ತೇನೆ ಎಂದು ಹೇಳಿರುತ್ತಾನೆ ಆದರೆ ಅರ್ಜುನ ಸಮಯ ಬಂದಾಗ ಹೇಳುತ್ತೇನೆ ಎಂದು ಸುಮ್ಮನೆ ಬಂದಿರುತ್ತಾನೆ ಆ ಮಾತನ್ನು ಕೃಷ್ಣನು ಇಲ್ಲಿ ನೆನಪಿಸಿಕೊಂಡ.

 

 

ಅರ್ಜುನನಿಗೆ ತಕ್ಷಣವೇ ದುರ್ಯೋಧನನ ಬಳಿ ಹೋಗಿ ಈ ಸಂಗತಿಯನ್ನು ನೆನಪಿಸಿ ವರವೊಂದನ್ನು ಕೇಳು ಎಂದು ಹೇಳುತ್ತಾನೆ .

ಅದಾಗಲೇ ಭೀಷ್ಮನಿಂದ ಐದು ಬಾಣಗಳನ್ನು ಪಡೆದಿದ್ದ ದುರ್ಯೋಧನನು ಯುದ್ಧವನ್ನೇ ಗೆದ್ದಷ್ಟು ಸಂತೋಷದಲ್ಲಿ ಇರುತ್ತಾನೆ ,ಆಗ ಅರ್ಜುನನ್ನು ದುರ್ಯೋಧನನ ಬಳಿ ಹೋಗಿ ತನಗೆ ನೀಡಬೇಕಾದ ವರದ ಬಗ್ಗೆ ಜ್ಞಾಪಿಸುತ್ತಾನೆ ಆಗ ದುರ್ಯೋಧನನಿಗೆ ಒಂದು ನಿಮಿಷ ತಬ್ಬಿಬ್ಬಾಗುತ್ತದೆ .

ಅರ್ಜುನನು ..ದುರ್ಯೋಧನನ ಬಳಿ ಇರುವ ಐದು ಚಿನ್ನದ ಬಾಣಗಳನ್ನು ನೀಡಬೇಕೆಂದು ಕೇಳುತ್ತಾನೆ .

 

 

ಕ್ಷತ್ರಿಯನಾದವನ್ನು ಕೊಟ್ಟ ಮಾತಂತೆ ನಡೆದುಕೊಳ್ಳಬೇಕು ಎಂದು ದುರ್ಯೋಧನನು ತನ್ನ ಬಳಿ ಇದ್ದ ಐದು ಚಿನ್ನದ ಬಾಣಗಳನ್ನು ಅರ್ಜುನನಿಗೆ ನೀಡುತ್ತಾನೆ , ಇದರಿಂದ ಐದು ಜನ ಪಾಂಡವರನ್ನು ಒಂದೇ ದಿನದಲ್ಲಿ ಕೊಲ್ಲಬೇಕು ಎಂದುಕೊಂಡಿದ್ದ ದುರ್ಯೋಧನನ ಕನಸು ಹಾಗೆಯೇ ಉಳಿದುಬಿಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top