ಸಮಾಚಾರ

ಇನ್ನು ಮುಂದೆ ಫೇಸ್ಬುಕ್ ನಲ್ಲೆ ಡೇಟಿಂಗ್ ಮಾಡಬಹುದು

ಇಂಟರ್ನೆಟ್ ಜಗತ್ತಿನ ಸಾಮಾಜಿಕ ಜಾಲತಾಣದಲ್ಲಿ ಧೈತ್ಯ ಸಂಸ್ಥೆಯಾಗಿ ಬೆಳೆದಿರುವ ಫೇಸ್ಬುಕ್ ಆಗಾಗ ಹೊಸ ಫೀಚರ್ ಸೇರಿಸುವ ಮೂಲಕ ಫೇಸ್ಬುಕ್ ನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. ಫೇಸ್ಬುಕ್ ಈಗ ಡೇಟಿಂಗ್ ಸೇವೆಯನ್ನು ಬಿಡುಗಡೆಗೊಳಿಸಿದೆ. ಈ ವರ್ಷದ ಅಂತ್ಯಕ್ಕೆ ಫೇಸ್ಬುಕ್ ಈ ಹೊಸ ಫೀಚರ್ ಸೇರಿಸಲಿದೆ ಎಂದು ತಿಳಿದು ಬಂದಿದೆ.

 

 

ಕ್ಯಾಲಿಫೊರ್ನಿಯಾದ ಸ್ಯಾನ್‌ ಜೋಸ್‌ನಲ್ಲಿ ಜರುಗಿದ ‘ಫೇಸ್‌ಬುಕ್ ಎಫ್‌8’ ಡೆವಲಪರ ವಾರ್ಷಿಕ ಸಮ್ಮೇಳನದಲ್ಲಿ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್ ಈ ಮಾಹಿತಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಹೆಚ್ಚಿನ ಯುವಜನರನ್ನು ತಲುಪುವ ಸಲುವಾಗಿ ಈ ಸೇವೆ ಜಾರಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಫೇಸ್‌ಬುಕ್‌ನಲ್ಲಿ ಸುಮಾರು 20 ಕೋಟಿ ಬಳಕೆದಾರರು ಅವಿವಾಹಿತರಿದ್ದಾರೆ. ಇದರಿಂದ ಆದಷ್ಟು ಬೇಗನೆ ಈ ಸೇವೆಯನ್ನು ನಾವು ಜಾರಿಗೆ ತರುತ್ತೇವೆ ಎಂದು ಮಾರ್ಕ್‌ ಜುಕರ್‌ಬರ್ಗ್ ಹೇಳಿಕೆ ನೀಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top