ರಾಜಕೀಯ

ಅಂದು ಮೋದಿ ಮನವೊಲಿಸದೇ ಇದ್ದಿದ್ದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ: ಹೆಚ್ ಡಿ ದೇವೇಗೌಡ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಮೇ 12 ಕ್ಕೆ ಚುನಾವಣೆಗೆ ಮತದಾನ ನಡೆಯಲಿದ್ದು ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ.

 

 

ಬಿಜೆಪಿ ಪ್ರಚಾರ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಿಂದ ರಾಜ್ಯ ಪ್ರವಾಸ ಕೈಗೊಂಡಿದ್ದು ಇಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಎಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ದೇವೇಗೌಡರು ನನ್ನ ಮನೆಗೆ ಬಂದಾಗ ನಾನು ಬಾಗಿಲಿನ ಬಳಿಯೇ ಕಾದಿದ್ದು ಅವರ ಕಾರಿನ ಬಾಗಿಲನ್ನು ತೆರೆದು ಅವರನ್ನು ಬರಮಾಡಿಕೊಂಡಿದ್ದೇನೆ, ವಾಪಾಸ್ಸು ತೆರಳುವಾಗ ನಾನೇ ತೆರಳಿ ಅವರನ್ನು ಕಾರಿನಲ್ಲಿ ಕೂರಿಸಿ ವಿದಾಯ ಹೇಳಿದ್ದೇನೆ ಎಂದು ಹೇಳಿದ್ದರು.

 

 

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಹೊಗಳಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸೌಹಾರ್ದಯುತ ಸ್ನೇಹವನ್ನು ಸ್ಮರಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಹಿಂದೆ 2014 ರಲ್ಲಿ ನಡೆದ ಚುನಾವಣೆಯ ಸಂಧರ್ಭದಲ್ಲಿ ದೇವೇಗೌಡ ತಮ್ಮ ಹೇಳಿಕೆಯಲ್ಲಿ ಮೋದಿ ರವರು ಯಾರ ಬೆಂಬಲವೂ ಇಲ್ಲದೇ ಸರ್ಕಾರ ರಚಿಸುವಂತಾದರೆ ನಾನು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದರು. ಆದರೆ ಸ್ವತಃ ಮೋದಿ ಅವರೇ ದೇವೇಗೌಡರನ್ನು ತಡೆ ಹಿಡಿದಿದ್ದರು ಎಂದು ಈ ಘಟನೆಯನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಮರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top