ವಿಶೇಷ

ಮೀಟಿಂಗ್ ನಲ್ಲಿದ್ದಾಗ ಪಿರಿಯಡ್ಸ್ ಆದಾಗ ಆ ಪೊಲೀಸ್ ಆಫೀಸರ್ ಅನುಭವಿಸಿದ ಮುಜುಗರ ಎಂಥದ್ದು ಗೊತ್ತಾ

ಪ್ರಕೃತಿ ಸಹಜ ಕ್ರಿಯೆ ಕೆಲವೊಂದರಲ್ಲಿ ಪುರುಷ ಹಾಗೂ ಮಹಿಳೆಯರ ಮಧ್ಯೆ ತಾರತಮ್ಯ ತೋರಿಸಲಾಗುತ್ತದೆ, ಅನೇಕ ದೈನಂದಿನ ಕ್ರಿಯೆಗಳು ಹಾಗೂ ಸಾಮಾನ್ಯ ಕ್ರಿಯೆಗಳಲ್ಲಿ ಅನೇಕ ತಾರತಮ್ಯವನ್ನು ತೋರಿಸಲಾಗುತ್ತದೆ.

 

 

ಹೆಣ್ಣುಮಕ್ಕಳ ಋುತುಕ್ರಿಯೆ, ಗರ್ಭಾವಸ್ಥೆ, ಬಾಣಂತನ ಇನ್ನು ಮುಂತಾದ ಸಮಯಗಳಲ್ಲಿ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿರುತ್ತಾಳೆ ,ಆಕೆಯ ಹಾರ್ಮೋನುಗಳಲ್ಲಿ ಬಹಳಷ್ಟು ವ್ಯತ್ಯಾಸ ಆಗಿರುತ್ತದೆ ಹೀಗಿದ್ದರೂ ಸಹ ನಮ್ಮ ಸಮಾಜದಲ್ಲಿ ಕೆಲವೊಂದು ಜನರು ಈ ಕ್ರಿಯೆ ಬಗ್ಗೆ ಕೆಟ್ಟದ್ದು ಎಂದಂತೆ ಭಾವಿಸುತ್ತಾರೆ, ಹೆಣ್ಣನ್ನು ಮುಜುಗರಕ್ಕೆ ಒಳಪಡಿಸುತ್ತಾರೆ , ಆದರೆ ಈ ಸಾಮಾಜಿಕ ಕಟ್ಟುಪಾಡುಗಳಿಂದ ಹೆಣ್ಣು ಮಕ್ಕಳಿಗೆ ಆಗುವ ನೋವು ಅವರಿಗೆ ಅರ್ಥವಾಗುವುದಿಲ್ಲ.

ಅಂಥದ್ದೇ ಒಂದು ಘಟನೆಯನ್ನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುಜರಾತ್ನ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಮಂಜಿತಾ ಅವರಿಗೆ ಎದುರಾಗಿತ್ತು ಈ ವಿಷಯದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ .

ಮೂಲತಃ ಫ್ಯಾಷನ್ ಡಿಸೈನರ್ ಹಾಗೂ ಇಂಜಿನಿಯರ್ ಆಗಿರುವ ಮಂಜಿತಾ ತಮ್ಮ ಅಧಿಕಾರಿಗಳ ಜೊತೆ ಮೀಟಿಂಗ್ ವೊಂದರಲ್ಲಿ ಭಾಗಿಯಾಗಿದ್ದರು , ಆ ಮೀಟಿಂಗ್ ಅಪರಾಧಿಗಳಿಂದ ನಿಜ ಹೇಗೆ ಬಾಯಿ ಬಿಡಿಸುವುದು ಎಂಬುದರ ಬಗ್ಗೆ ಆಗಿತ್ತಂತೆ, ಮೀಟಿಂಗ್ ಮುಗಿದ ನಂತರ ತಮ್ಮ ಉನ್ನತ ಅಧಿಕಾರಿಗೆ ಎದ್ದು ನಿಂತು ಸೆಲ್ಯೂಟ್ ಹೊಡೆಯ ಬೇಕಿತ್ತಂತೆ ಆದರೆ ಇದಕ್ಕೂ ಮುಂಚೆಯೇ ಆಕೆಗೆ ಪಿರಿಯಡ್ಸ್ ಆಗಿದ್ದು ಆಕೆಯ ಅನುಭವಕ್ಕೆ ಬಂದಿತ್ತಂತೆ ಇದೇ ಕಾರಣದಿಂದ ಆಕೆ ಎದ್ದು ನಿಂತು ಸೆಲ್ಯೂಟ್ ಹೊಡೆಯುವುದೋ ಬೇಡವೋ ಎಂಬ ಗೊಂದಲದಲ್ಲಿ ಇದ್ದರಂತೆ .

 

 

ಆದರೆ ಅವರು ಸೆಲ್ಯೂಟ್ ಹೊಡೆಯುವವರೆಗೆ ಇತರ ಅಧಿಕಾರಿಗಳು ಕುರ್ಚಿಯಿಂದ ಹೇಳುವಂತೆ ಇರಲಿಲ್ಲ ಆದ್ದರಿಂದ ಆಕೆ ಆಗಿದ್ದು ಆಗಿ ಹೋಗಲಿ ಎಂದು ಹೇಳಿ ನಿಂತು ಸೆಲ್ಯೂಟ್ ಹೊಡೆದರಂತೆ ಇದರಿಂದ ಆಕೆಗೆ ಬಹಳ ಮುಜುಗರವಾಯಿತು ಆ ನಂತರ ಮೀಟಿಂಗ್ ಮುಗಿದ ತಕ್ಷಣ ಆಕೆ ಹೊರಗೆ ಬರುತ್ತಿದ್ದ ಹಾಗೆ ಆಕೆಯ ಬಟ್ಟೆಯ ಮೇಲಾಗಿದ್ದ ಕಲೆಗಳನ್ನು ಅಲ್ಲಿನ ಜನ ಕಾಣಲು ಶುರುಮಾಡಿದರು.

ಮಂಜಿತಾ ಅವರ ಕೆಳ ಅಧಿಕಾರಿಯೊಬ್ಬರು ಆ ಕಲೆಗಳನ್ನು ಕಂಡು ‘ನಿಮ್ಮ ಬಟ್ಟೆಯ ಮೇಲೆ ಕಲೆಯಾಗಿದೆ ಸ್ವಲ್ಪ ನೋಡಿಕೊಳ್ಳಿ’ ಎಂದು ಹೇಳಿದರಂತೆ ಇದರಿಂದ ಕೋಪಗೊಂಡ ಮಂಜಿತಾ ಇದೊಂದು ಸಹಜ ಕ್ರಿಯೆ ಇದು ಎಲ್ಲಾ ಹೆಣ್ಣುಮಕ್ಕಳಿಗೂ ಆಗುತ್ತದೆ ಮುಂದೆ ನನ್ನ ಬಟ್ಟೆಯ ಮೇಲೆ ಈ ರೀತಿಯ ಕಲೆಗಳು ಕಂಡು ಬಂದರೆ ನನಗೆ ಹೇಳಬೇಡಿ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಹೊರಟು ಹೋದರಂತೆ .

ಈ ಘಟನೆಯಿಂದ ಆಕೆಗೆ ಬಹಳ ನೋವು ಆಯಿತಂತೆ ಈ ರೀತಿಯ ಪ್ರಕೃತಿ ಸಹಜವಾದ ಕ್ರಿಯೆಗಳನ್ನು ಒಂದು ರೀತಿ ವಿಚಿತ್ರವಾಗಿ ಜನ ನೋಡುತ್ತಾರೆ ಇದು ನಮ್ಮ ಸಮಾಜದಲ್ಲಿ ಬದಲಾಗಬೇಕು ಎಂದು ತಮ್ಮ ಅಳಲನ್ನು ಸಂದರ್ಶನವೊಂದರಲ್ಲಿ ಮಂಜಿತಾ ತೋಡಿಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top