ಸಿನಿಮಾ

ಜಾಕ್ವೆಲಿನ್ ಫೆರ್ನಾಂಡಿಸ್ ಮಾಡಿದ ತಪ್ಪಿಗೆ ಪೇಚಿಗೆ ಸಿಲುಕಿದ ಸಲ್ಮಾನ್ ಖಾನ್ – ವಿಡಿಯೋ

ಬಾಲಿವುಡ್ ಚಿತ್ರರಂಗದ ಮಾದಕ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಜೊತೆ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಲೇಹ್‌– ಲಡಾಕ್‌ ಪರ್ವತ ಪ್ರದೇಶದಲ್ಲಿ ಬೈಕ್‌ ರೇಡ್ ಮಾಡಿರುವ ಸಂಗತಿ ಚಿತ್ರರಸಿಕರ ಗಮನ ಸೆಳೆದಿದೆ. ನಟ ಸಲ್ಮಾನ್ ಖಾನ್ ಲೇಹ್‌– ಲಡಾಕ್‌ ಪರ್ವತ ಪ್ರದೇಶದಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ನಲ್ಲಿ ಪ್ರಯಾಣಿಸುತ್ತಿದ ವೇಳೆ ಜಾಕ್ವೆಲಿನ್ ಫೆರ್ನಾಂಡಿಸ್ ಮಾಡಿದ ಸೆಲ್ಫಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

‘ರೇಸ್‌ 3’ ಸಿನಿಮಾ ಶೂಟಿಂಗ್ ಕಾಶ್ಮೀರದಲ್ಲಿ ಭರದಿಂದ ಸಾಗಿದೆ. ಇದೀಗ ಶೂಟಿಂಗ್ ಲೇಹ್–ಲಡಾಕ್‌ಗೆ ಸ್ಥಳಾಂತರಗೊಂಡಿದೆ. ಇದೇ ವೇಳೆ ಸಲ್ಮಾನ್‌–ಜಾಕ್ವೆಲಿನ್‌ ಫರ್ನಾಂಡಿಸ್‌, ನಿರ್ದೇಶಕ ರೆಮೊ ಡಿಸೋಜ ಮತ್ತು ಚಿತ್ರತಂಡದ ಕೆಲ ಸದಸ್ಯರು ಮೂರು– ನಾಲ್ಕು ಬೈಕ್‌ಗಳಲ್ಲಿ ಲೇಹ್‌– ಲಡಾಖ್‌ಗೆ ತೆರಳಿದ್ದರು.

 

 

ಸಲ್ಮಾನ್ ಖಾನ್ ಬೈಕ್ ರೈಡ್ ಮಾಡುವಾಗ ಹಿಂದೆ ಕುಳಿತಿದ್ದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದ ಬಳೆಕೆದಾರರ ಗಮನಕ್ಕೆ ಬಂದಿದ್ದು ರಸ್ತೆ ನಿಯಮವನ್ನು ಪಾಲಿಸಿ ಎಂದು ಜಾಕ್ವೆಲಿನ್ ಫೆರ್ನಾಂಡಿಸ್ ಗೆ ಟ್ರೊಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಡಿಯೋವನ್ನು ಜಾಕ್ವೆಲಿನ್ ಫೆರ್ನಾಂಡಿಸ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ‘ಪರ್ವತದ ಸಾಲುಗಳ ನಡುವೆ ಬೈಕ್‌ ರೈಡಿಂಗ್‌ ಅದ್ಭುತ ಅನುಭವ’ ಎಂದು ಬರೆದಿದ್ದಾರೆ.

 

ಈ ವಿಡಿಯೋ ನೋಡಿ:

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top