ಆರೋಗ್ಯ

ನಿಮ್ಮ ದೇಹದ ಕೊಬ್ಬನ್ನು ಸುಲಭವಾಗಿ ಬರಿ ಈ ಜ್ಯೂಸ್ ಸೇವನೆ ಮಾಡಿ ಕರಗಿಸಿಕೊಳ್ಳಿ ,ಮತ್ತೆ ತಡ ಯಾಕೆ .

ದೇಹದ ಕೊಬ್ಬು ಕರಗಿಸೋ ಸುಲಭವಾದ ‘ಜ್ಯೂಸ್’ ಮನೇಲಿ ಮಾಡ್ಕೊಳ್ಳಿ ಕುಡ್ಕೊಳ್ಳಿ..

ಇಂದಿನ ಆಧುನಿಕ ಯುಗದಲ್ಲಿ ಖಿನ್ನತೆಯಿಂದ ಹಲವಾರು ಮಂದಿ ಬಳಲುತ್ತಿದ್ದಾರೆ. ಖಿನ್ನತೆಗೆ ಕಾರಣ ಹಲವು. ಖಿನ್ನತೆಗೂ ಸ್ಥೂಲಕಾಯಕ್ಕೂ ಗಾಢ ಸಂಬಂಧ ಇದೆ. ಏರುತ್ತಿರುವ ಜಾಗತಿಕ ಪಿಡುಗಾಗಿರುವ ಸ್ಥೂಲಕಾಯ ಸಮಸ್ಯೆ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

 

 

ಸಾವಿನ ಕಾರಣಗಳ ಪೈಕಿ ಬೊಜ್ಜು ಐದನೆಯ ದೊಡ್ಡ ಕಾರಣ ಎನಿಸಿದೆ, ಕಡಿಮೆ ತೂಕದವರಿಗಿಂತ ಬೊಜ್ಜಿರುವವರ ಸಾವಿನ ಪ್ರಮಾಣವೇ ಅಧಿಕ. ಬೊಜ್ಜಿಗೂ ಖಿನ್ನತೆಗೂ ಸಂಬಂಧವಿದೆ. ಅಧಿಕ ತೂಕದವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ದೇಶದಲ್ಲಿ 350 ದಶಲಕ್ಷ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ಥೂಲಕಾಯ ಹೊಂದಿರುವವರು ಖಿನ್ನತೆಗೆ ಒಳಗಾಗುವ ಅಪಾಯದ ಸಾಧ್ಯತೆ ಪ್ರಮಾಣ ಶೇಕಡ 20 ರಷ್ಟು ಅಧಿಕ.
ಸ್ಥೂಲಕಾಯ ಖಿನ್ನತೆಯೊಂದಿಗೆ ಗಾಢ ಸಂಬಂಧ ಹೊಂದಿದೆ ಎರಡೂ ಇತರೆ ಮಾನಸಿಕ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಸ್ಥೂಲಕಾಯರು ವಿಶೇಷವಾಗಿ ಮಹಿಳೆಯರು ಆಗಾಗ ರೋಗಗ್ರಸ್ತರಾಗುವ ಮೂಲಕ ಆತ್ಮಗೌರವ ಕುಂಠಿತವಾಗುವ ಹಾಗೂ ಖಿನ್ನತೆಯ ಲಕ್ಷಣಗಳಿಗೆ ಒಳಗಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಖಿನ್ನತೆ ಉಳ್ಳವರು ಸಾಮಾನ್ಯವಾಗಿ ಕುಳಿತಿರುವ ಜೀವನಶೈಲಿ, ಅಸಮರ್ಪಕ ಆಹಾರ ಸೇವನೆ ಪದ್ಧತಿಯಿಂದ ಮುಂದೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ದೇಹದ ಕೊಬ್ಬು ಕರಗಿಸೋ ಸುಲಭವಾದ ‘ಜ್ಯೂಸ್’ ತಯಾರಿಸುವ ವಿಧಾನ :

ಕಾಮ ಕಸ್ತೂರಿ ಬೀಜದ ಜ್ಯೂಸು

ಪದಾರ್ಥಗಳು:

1 ಚಮಚ ಕಾಮ ಕಸ್ತೂರಿ ಬೀಜ(ಹಿಂದಿನ ದಿನ ನೆನೆಹಾಕಿದ )
ನಿಂಬೆ ರಸ

 

ವಿಧಾನ:

ಹಿಂದಿನ ದಿನ ರಾತ್ರಿ ನೆನೆಹಾಕಿದ 1 ಚಮಚ ಕಾಮ ಕಸ್ತೂರಿ ಬೀಜಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ ಇದರಿಂದ ದೇಹದ ಕೊಬ್ಬು ಕರಗಲು ಸಹಾಯವಾಗುತ್ತದೆ , ಅಷ್ಟೇ ಅಲ್ಲದೆ ದೇಹದಲ್ಲಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ ,ಅಷ್ಟೇ ಅಲ್ಲದೆ ಸಕ್ಕರೆ ಖಾಯಿಲೆ ವಿರುದ್ಧ ಹೋರಾಡುತ್ತದೆ .

ಟೊಮ್ಯಾಟೊ ಮತ್ತು ಸೌತೆಕಾಯಿ ಜ್ಯೂಸು

ಪದಾರ್ಥಗಳು:

½ ಕಪ್ ಕತ್ತರಿಸಿದ ಟೊಮ್ಯಾಟೊ
½ ಕಪ್ ಕತ್ತರಿಸಿದ ಸೌತೆಕಾಯಿ
ಕೊತ್ತಂಬರಿ ಸೊಪ್ಪು -ಕಾಲು ಕಟ್ಟು
3-4 ಹನಿ ಜೇನು ತುಪ್ಪ
½ ಟೀಚಮಚ ಕರಿಮೆಣಸು
ರುಚಿಗೆ ಉಪ್ಪು

 

 

 

 

ವಿಧಾನ:

ಮೇಲಿನ ಎಲ್ಲ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ , ಆ ನಂತ್ರ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ,ಹೀಗೆ ಒಂದು ತಿಂಗಳು ಮುಂದುವರಿಸಿ .

ಗೋಧಿ ಹುಲ್ಲು ಮತ್ತು ಕ್ಯಾರಟ್ ಜ್ಯೂಸು

1 ಕಪ್ ಕತ್ತರಿಸಿದ ಗೋಧಿ ಹುಲ್ಲು
2-3 ಮಧ್ಯಮ ಗಾತ್ರದ ಕ್ಯಾರೆಟ್
½ ಕಪ್ ಕತ್ತರಿಸಿದ ಟೊಮ್ಯಾಟೊ
½ ಕಪ್ ಪಾಲಕ್
½ ಟೀಚಮಚ ಕರಿಮೆಣಸು
ರುಚಿಗೆ ಉಪ್ಪು

 

 

ವಿಧಾನ:

ಮೇಲಿನ ಎಲ್ಲ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ , ಆ ನಂತ್ರ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ,ಹೀಗೆ ಒಂದು ತಿಂಗಳು ಮುಂದುವರಿಸಿ .

ಪಾಲಕ್ ಮತ್ತು ಸೇಬಿನ ಜ್ಯೂಸ್

ಪದಾರ್ಥಗಳು:

2-3 ಮಧ್ಯಮ ಗಾತ್ರದ ಸೇಬುಗಳು
2 ಕಪ್ ಪಾಲಕ್
ಸ್ವಲ್ಪ ನಿಂಬೆ ರಸ
½ ಕಪ್ ಕ್ಯಾರೆಟ್
ರುಚಿಗೆ ಕರಿಮೆಣಸು
ರುಚಿಗೆ ಉಪ್ಪು

 

 

ವಿಧಾನ:

ಮೇಲಿನ ಎಲ್ಲ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ , ಆ ನಂತ್ರ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ,ಹೀಗೆ ಒಂದು ತಿಂಗಳು ಮುಂದುವರಿಸಿ .ರುಚಿಗೆ ಬೇಕಾದರೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿಕೊಳ್ಳಿ .

ನಿಂಬೆ ಕಲ್ಲಂಗಡಿ ಜ್ಯೂಸು

ಪದಾರ್ಥಗಳು:

1 ನಿಂಬೆ
1 ಕಪ್ ಕಲ್ಲಂಗಡಿ (ಬೀಜಗಳೊಂದಿಗೆ)
1 ಟೀಚಮಚ ಪುದಿನ ಎಲೆಗಳು

 

 

 

 

ವಿಧಾನ:

ಕಲ್ಲಂಗಡಿಯನ್ನು ಚೆನ್ನಾಗಿ ರುಬ್ಬಿ , ಬೇಕಾದಷ್ಟು ನಿಂಬೆ ರಸ ಬೆರೆಸಿ ಹಾಗು ಪುದಿನ ಎಲೆಗಳನ್ನು ಬೆರೆಸಿ ಕುಡಿಯಿರಿ .
ನಿಮ್ಮ ತೂಕ ನಷ್ಟ ಪೌಷ್ಟಿಕ ಪಾನೀಯ ಸಿದ್ಧವಾಗಿದೆ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಾಗಿದ್ದು , ದಿನ ಪೂರ್ತಿ ಹೊಟ್ಟೆಯನ್ನು ತುಂಬಿದ ಹಾಗೆ ಇರಿಸುತ್ತದೆ .
ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ,ಹೀಗೆ ಒಂದು ತಿಂಗಳು ಮುಂದುವರಿಸಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top