ರಾಜಕೀಯ

ಕೆ.ಜಯಪ್ರಕಾಶ ಹೆಗ್ಡೆಗೆ ಕೈ ಕುಲುಕದೆ ಅವಮಾನ ಮಾಡಿದ್ರಾ ಪ್ರಧಾನಿ ಮೋದಿ?

ಉಡುಪಿಯಲ್ಲಿ ಎಂಜಿಎಂ ಮೈದಾನದಲ್ಲಿ ಮಂಗಳವಾರ ದಿನ ನಡೆದ ಬಿಜೆಪಿ ಪಕ್ಷದ ಸಮಾವೇಶದಲ್ಲಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ರವರಿಗೆ ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

 

 

ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ನಮಸ್ಕಾರ ಮಾಡಿದರು. ನಂತರ ಕೋಟ ಶ್ರೀನಿವಾಸ ಪೂಜಾರಿ, ಉದಯ ಕುಮಾರ್ ಶೆಟ್ಟಿ ಕೈ ಕುಲುಕಿದ್ದರು. ಬಳಿಕ ಜಯಪ್ರಕಾಶ್ ಹೆಗ್ಡೆ ಮೋದಿಯ ಬಳಿ ಬಂದು ನಮಸ್ಕರಿಸಿ ಕೈ ಕೊಡಲು ಮುಂದಾದರೂ ಮೋದಿ ಹೆಗ್ಡೆ ಅವರ ಮುಖ ಕೂಡಾ ನೋಡದೇ ಮುಂದೆ ಸಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

 

 

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಹರಿದಾಡುತ್ತಿದೆ ಎನ್ನಲಾಗಿದೆ.

ಈ ವಿಡಿಯೋ ನೋಡಿ:

 

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ದೇವೇಗೌಡರು ನನ್ನ ಮನೆಗೆ ಬಂದಾಗ ನಾನು ಬಾಗಿಲಿನ ಬಳಿಯೇ ಕಾದಿದ್ದು ಅವರ ಕಾರಿನ ಬಾಗಿಲನ್ನು ತೆರೆದು ಅವರನ್ನು ಬರಮಾಡಿಕೊಂಡಿದ್ದೇನೆ, ವಾಪಾಸ್ಸು ತೆರಳುವಾಗ ನಾನೇ ತೆರಳಿ ಅವರನ್ನು ಕಾರಿನಲ್ಲಿ ಕೂರಿಸಿ ವಿದಾಯ ಹೇಳಿದ್ದೇನೆ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top