ಸಮಾಚಾರ

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಮಾಡಿ ಡಾ.ರಾಜಕುಮಾರ್ ಪುಸ್ತಕವನ್ನು ನೀಡಿದ ಪುನೀತ್ ದಂಪತಿ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಗಮಿಸಿದ ಮೋದಿಯವರನ್ನು ಪುನೀತ್ ಅವರು ತಮ್ಮ ಪತ್ನಿ ಅಶ್ವಿನಿ ಜೊತೆ ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

 

.
ಈ ವೇಳೆ ತಮ್ಮ ತಂದೆ ಕುರಿತಾಗಿ ತಾವೇ ಬರೆದಿರುವ Dr. Rajkumar: The person behind the personality ಪುಸ್ತಕವನ್ನು ನರೇಂದ್ರ ಮೋದಿಯವರಿಗೆ ನೀಡಿದ್ದಾರೆ. ಅಲ್ಲದೇ ದೇಶದ ಪ್ರಧಾನಿಗೆ ಚಿಕ್ಕದಾಗಿ ಸನ್ಮಾನವನ್ನು ಕೂಡ ಮಾಡಿದ್ದಾರೆ..ಈ ಹಿಂದೆ ಚಾಮರಾಜನಗರ ಹಾಗೂ ಬೆಂಗಳೂರಿನ ಸಾರ್ವಜನಿಕ ಸಭೆಗಳಲ್ಲಿ ಮೋದಿಯವರು ಡಾ.ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದರು ನರೇಂದ್ರ ಮೋದಿಯವರನ್ನು ಭೇಟಿಮಾಡಿದ ವಿಚಾರವನ್ನು ತಮ್ಮ ಫೇಸ್ಬುಕ್ ನಲ್ಲಿ ಪುನೀತ್ ಅವರು ಹಂಚಿಕೊಂಡಿದ್ದು ಮೋದಿ ಜೊತೆಯಲ್ಲಿ ನಿಂತು ಕ್ಲಿಕ್ಕಿಸಿಕೊಂಡಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

“ನಮ್ಮ ಡೈನಾಮಿಕ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ನನ್ನ ಪತ್ನಿ ಅಶ್ವಿನಿಯೊಂದಿಗೆ ಭೇಟಿ ಮಾಡಲು ಒಂದು ಅದ್ಭುತವಾದ ಅವಕಾಶ ಸಿಕ್ಕಿತು. ಅಪ್ಪಾಜಿಯ ಕುರಿತು ನಾನು ಬರೆದಿರುವ Dr. Rajkumar: The person behind the personality ಪುಸ್ತಕವನ್ನು ಅವರು ಸಂತೋಷದಿಂದ ಸ್ವೀಕರಿಸಿ ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಕುಟುಂಬಕ್ಕೆ ಶುಭಹಾರೈಸಿದರು. ನಾನು ಅವರ ಉತ್ಸಾಹದಿಂದ ಬಹಳ ವಿನೀತನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ನರೇಂದ್ರಮೋದಿ ಮತ್ತು ಪುನೀತ್ ರಾಜಕುಮಾರ್ ಜೊತೆಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top