ರಾಜಕೀಯ

ನೀವು ಈ ಕೆಲಸ ಮಾಡಿದ್ರೆ ರವಿಕೃಷ್ಣಾ ರೆಡ್ಡಿಯಿಂದ 50 ಸಾವಿರ ಬಹುಮಾನ ಸಿಗುತ್ತೆ.

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಮೇ 12 ಕ್ಕೆ ಚುನಾವಣೆಗೆ ಮತದಾನ ನಡೆಯಲಿದ್ದು ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ.

 

 

ರಾಜ್ಯದಲ್ಲಿ ಚುನಾವಣಾ ನಿಮಿತ್ಯ ಅಭ್ಯರ್ಥಿಗಳು ಹಣ ಹೆಂಡ ಆಮಿಷ ಒಡ್ಡುತ್ತಿದ್ದು ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಡೆಯಲು ಜಯನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ರವಿಕೃಷ್ಣಾ ರೆಡ್ಡಿ ಮತದಾರರಿಗೆ ಒಂದು ಆಫರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ ಹಾಗಾದ್ರೆ ಅವರು ಏನು ಆಫರ್ ನೀಡಿದರೆ ಎಂದು ತಿಳಿಯಲು ಮುಂದೆ ಓದಿ.

 

 

ರವಿಕೃಷ್ಣಾ ರೆಡ್ಡಿ ಸ್ಪರ್ಧೆ ಮಾಡುತ್ತಿರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತದಾರರಿಗೆ ಹಣ,ಹೆಂಡ,ಸೀರೆ,ಕುಕ್ಕರ್, ಟೋಕನ್ ಆಮಿಷ ಒಡ್ಡುತ್ತಿರುವ ಅಥವಾ ಹಂಚುತ್ತಿರುವ ವಿಶ್ವಾಸನೀಯ ಸ್ಟಿಂಗ್ ವಿಡಿಯೋ ಇದ್ದಾರೆ ನಮಗೆ ಕಳುಹಿಸಿ ಅಂತಹ ದೇಶಪ್ರೇಮಿಗಳಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top