ಕಿರುತೆರೆ

ನಟ ರವಿಶಂಕರ್ ಗೌಡಗೆ ಕನ್ನಡದ ಈ ನಟಿ ಮೇಲೆ ಕ್ರಷ್ ಆಗಿದೆಯಂತೆ.

ತಮ್ಮ ವಿಭಿನ್ನ ಕಾಮಿಡಿ ನಟನೆಯಿಂದಲೇ ಹೆಸರುವಾಸಿಯಾಗಿ ದೇವ್ರಾಣೆ,ಪಯಣ, ಜೈಲಲಿತಾ ಮುಂತಾದ ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಸ್ಸನ್ನು ಗೆದ್ದಿರುವವರು ನಟ ರವಿಶಂಕರ್ ಗೌಡ. ಅದ್ಬುತ ನಟನಾ ಕೌಶಲ್ಯ ಹೊಂದಿರುವ ರವಿಶಂಕರ್ ಅವರಿಗೆ ಕನ್ನಡದ ಸ್ಟಾರ್ ನಟಿಯೊಬ್ಬಳ ಮೇಲೆ ಕ್ರಷ್ ಆಗಿದೆಯಂತೆ? ಅರೆ ಯಾರಪ್ಪ ಅದು ಅಂತೀರಾ? ಮುಂದೆ ಓದಿ.

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ನಟಿಯರಾದ ನೆನಪಿರಲಿ ಪ್ರೇಮ್ ಮತ್ತು ರವಿಶಂಕರ್ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ಪ್ರೇಮ್ ಮತ್ತು ರವಿಶಂಕರ್ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದ ಮೊದಲನೇ ಸುತ್ತಿನಲ್ಲಿ ಪ್ರತಿಯೊಂದು ಪ್ರಶ್ನೆಯನ್ನು ಕೇಳುವ ಮುನ್ನವೇ ಸತ್ಯ ಅಥವಾ ಧೈರ್ಯವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು, ಅದರಂತೆ ಸತ್ಯವನ್ನ ಹೇಳಲು ರವಿಶಂಕರ್ ಆಯ್ಕೆ ಮಾಡಿಕೊಂಡಾಗ ”ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?” ಅಂತ ಶಿವಣ್ಣ ಪ್ರಶ್ನೆ ಕೇಳಿದರು ಅದಕ್ಕೆ ಉತ್ತರ ಕೊಟ್ಟ ರವಿಶಂಕರ್ ”ಕೃತಿ ಖರಬಂಧ” ಎಂದು ಹೇಳಿದರು.. ಒಟ್ಟಿನಲ್ಲಿ ತನ್ನ ಬ್ಯುಟಿಯಿಂದಲೇ ಸಾವಿರಾರು ಹುಡುಗರ ಹೃದಯಕ್ಕೆ ಕನ್ನ ಹಾಕಿರುವ ಕೃತಿ ಸಿನಿ ಮಂದಿಯರಿಗೂ ಮೋಡಿ ಮಾಡಿದ್ದಾಳೆ ಎನ್ನುವುದು ರವಿಶಂಕರ್ ಅವರ ಮಾತಿನ ಮೂಲಕ ಗೊತ್ತಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top