ಮನೋರಂಜನೆ

“ರೇಖಾ ಲೇಟಾಗಿ ಹುಟ್ಟಿದ್ರೆ ನನಗೆ ಹೀರೋಯಿನ್ ಆಗಬಹುದಿತ್ತು” ಹೀಗಂತ ಹೇಳಿದ ನಟ ಯಾರು ಗೊತ್ತಾ?

ಚಿತ್ರರಂಗದ ಕೆಲವೇ ಕೆಲವು ಅತಿ ಸುಂದರ ಮತ್ತು ಸಭ್ಯ ಹೀರೋಯಿನ್ನುಗಳಲ್ಲಿ ಸ್ಪರ್ಶ ರೇಖಾ ಕೂಡ ಒಬ್ಬರು.. ಕಿಚ್ಚ ಸುದೀಪ್‌ ನಟನೆಯ ಮೊದಲ ಚಿತ್ರ ‘ಸ್ಪರ್ಶ’ ಹಾಗೂ ದರ್ಶನ್‌ ಪ್ರಥಮ ಸಿನಿಮಾ ‘ಮೆಜೆಸ್ಟಿಕ್‌’ ಚಿತ್ರ ಗಳಲ್ಲಿ ಹೀರೋಯಿನ್ ಆಗಿ ಇಬ್ಬರೂ ಸ್ಟಾರ್ ನಟರಿಗೆ ಅದೃಷ್ಟದ ದೇವತೆ ಅನಿಸಿಕೊಂಡಿದ್ದ ರೇಖಾ ಜೊತೆ ನಾವು ಒಂದು ಸಿನಿಮಾ ಮಾಡಿದ್ದರೆ ನಮ್ಮ ಅದೃಷ್ಟವೂ ಸ್ವಲ್ಪ ಖುಲಾಯಿಸುತ್ತಿತ್ತೋ ಏನೋ ಅಂತ ಕೆಲವು ತೋಪೆದ್ದಿರುವ ಹೀರೋಗಳು ಅಂದಾಜಿಸಿದ್ದರೇ ಅದರಲ್ಲಿ ಅಚ್ಚರಿಯೇನಿರುವುದಿಲ್ಲ.! ಹಾಗೆ ನೋಡಿದರೆ ರೇಖಾ ಅವರು ಇವರಿಬ್ಬರಿಗೂ ಲಕ್ಕಿ ಹೀರೋಯಿನ್.

 

 

ಇಂಥ ರೇಖಾ ಆ ಚಿತ್ರಗಳ ನಂತ್ರ ಹೆಚ್ಚು ಹೆಚ್ಚು ಅವಕಾಶಗಳು ಬಂದಿದ್ದರೂ ಅದ್ಯಾಕೋ ಗೊತ್ತಿಲ್ಲ ಹೆಚ್ಚಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಸುಮಾರು ಹತ್ತು ವರ್ಷಗಳ ನಂತರ ಬಿಗ್ ಬಾಸ್ ಮೂಲಕ ಚಾಲ್ತಿಗೆ ಬಂದಿದ್ದರು. ಬಿಗ್‌’ಬಾಸ್ ಮನೆಗೆ ಹೋಗಿ ಬಂದದ್ದೇ ತಡ,ಮತ್ತೆ ನಟನೆಯಲ್ಲಿ ತೊಡಗಿಕೊಂಡ ರೇಖಾ ತೆರೆಗೆ ಬರಲು ಸಜ್ಜಾಗಿರುವ ಪ್ರಥಮ್ ಅಭಿನಯದ ಎಂಎಲ್ಎ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆ ಚಿತ್ರದ ಆಡಿಯೋ ಮೊನ್ನೆತಾನೆ ಲೋಕಾರ್ಪಣೆಗೊಂಡಿದೆ. ಸಾಕ್ಷಾತ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ಬಂದು ಆಡಿಯೋ ರಿಲೀಸ್ ಮಾಡಿ ಹೋಗಿದ್ದಾರೆ.

 

 

ಕಾರ್ಯಕ್ರಮದಲ್ಲಿ ಮೈಕು ಹಿಡಿದು ಮಾತನಾಡಿದ ಪ್ರಥಮ್ “ಸ್ಪರ್ಶ ರೇಖಾ ಅವರು ಹತ್ತುವರ್ಷ ತಡವಾಗಿ ಹುಟ್ಟಬೇಕಿತ್ತು. ಆಗ ನನ್ನ ಅವರು ನನ್ನ ಜೊತೆ ನಾಯಕಿಯಾಗಿ ಆಗಿ ಅಭಿನಯಿಸುವ ಸೌಭಾಗ್ಯ ಸಿಗುತ್ತಿತ್ತು. ಆದರೆ ಅವರು ಹತ್ತು ವರ್ಷ ಮುಂಚೆಯೇ ಹುಟ್ಟಿರುವುದರಿಂದ ಅವರ ಜೊತೆ ನಟಿಸುವ ಸೌಭಾಗ್ಯವನ್ನು ಕಳೆದುಕೊಂಡಿದ್ದೇನೆ’” ಎಂದು ತನ್ನ ಮಾಮೂಲಿ ಕಿರಿಕಿರಿ ಶೈಲಿಯಲ್ಲಿ ಅಣಿಮುತ್ತುಗಳನ್ನು ಉದುರಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top