fbpx
ರಾಜಕೀಯ

ಪ್ರಕಾಶ್ ರೈಗೆ ಇನ್ನೊಂದು ವಾರದಲ್ಲಿ ಚಪ್ಪಲಿ ಏಟು: ರೈ ವಿರುದ್ಧ ಸಿಡಿದೆದ್ದ ಕಾಳಿ ಸ್ವಾಮಿ.

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹು ಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಅಜೆಂಡಾಗಳನ್ನು, ಸಂಘಪರಿವಾರಗಳ ಕುಟಿಲ ನೀತಿಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಪ್ರಕಾಶ್ ರೈ ಅವರು ಪದೇ ಪದೇ ಮೋದಿಯವರನ್ನು ಮತ್ತು ಬಿಜೆಪಿ ಪಕ್ಷದ ಅಜೇಂಡಾಗಳನ್ನು ಟೀಕಿಸುವ ಕೆಲಸವನ್ನು ಮತ್ತೆ ಚುರುಕುಗೊಳಿಸಿದ್ದು ಮೋದಿ ಬೆಂಬಲಿಗರ ಶಾಂತಿ ಭಂಗವನ್ನುಂಟುಮಾಡಿದೆ. ಹಾಗಾಗಿ ಪ್ರಕಾಶ್ ರೈ ಬಿರುದ್ದ ತಿರುಗಿ ಬೀಳುವ ಅನಿವಾರ್ಯತೆ ಮೋದಿ ಮತ್ತು ಬಿಜೆಪಿ ಬೆಂಬಲಿಗರಿಗೆ ಎದುರಾಗಿದ್ದು ಇದೀಗ ಆ ಕಾರ್ಯಕ್ಕೆ ಕಾಳಿಮಠದ ಋಷಿಕುಮಾರ ಮಹಾಸ್ವಾಮಿಗಳು ಚಾಲನೆ ನೀಡಿದ್ದಾರೆ.

 

 

ಪ್ರಕಾಶ್ ರೈ ವಿಚಾರಗಳನ್ನು ಒಪ್ಪದ ಒಂದು ವರ್ಗದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಪ್ರಹಾರ ಜಾರಿಯಲ್ಲಿಟ್ಟಿದೆ. ಅದೇ ರೀತಿ ವಿಡಿಯೋವೊಂದನ್ನು ಹರಿದುಬಿಟ್ಟಿರುವ ಕಾಳಿಸ್ವಾಮಿ ಪ್ರಕಾಶ್ ವಿರುದ್ಧ ತಮ್ಮ ರುದ್ರರೂಪವನ್ನು ತೋರಿಸಿದ್ದಾರೆ. ಅಲ್ಲದೆ ಇನ್ನೊಂದು ವಾರದಲ್ಲಿ ಪ್ರಕಾಶ್ ರೈಗೆ ಚಪ್ಪಲಿ ಏಟು ಬೀಳುವುದು ಗ್ಯಾರಂಟಿ ಎಂದು ಖಡಕ್ ಸವಾಲನ್ನೂ ಕೂಡ ಹಾಕಿದ್ದಾರೆ. ಪ್ರಧಾನಿ ಮೋದಿಯವರು ತೀಟೆ ತೀರಿಸಿಕೊಳ್ಳಲು ಕರ್ನಾಟಕಕ್ಕೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದ ಪ್ರಕಾಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡಿಯಿರುವ ಸ್ವಾಮಿ ‘ತೀಟೆ’ ಎಂಬ ಪದದ ಅರ್ಥ ಗೊತ್ತೇ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಕಾಶ್ ಎಲ್ಲಾದರೂ ಕಂಡಲ್ಲಿ ಚಪ್ಪಲಿಯಿಂದ ಹೊಡೆದು ನಿಜವಾದ ಹೀರೋಗಳಾಗಿ ಎಂದು ಕಾಳಿ ಸ್ವಾಮಿ ಯುವಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

“ಯಡಿಯೂರಪ್ಪ ಅವರು ಮೋದಿ ಕಾಲಿಗೆ ನಮಸ್ಕರಿಸಿದರು ಎಂದು ಟೀಕಿಸಿರುವ ಪ್ರಕಾಶ್ ರೈಗೆ ಸಂಸ್ಕಾರ ಎಂಬುದೇ ಗೊತ್ತಿಲ್ಲ. ಚಿತ್ರಗಳಲ್ಲಿ ಖಳನಟನಾಗಿ ನಟಿಸಿ ನಿಜ ಜೀವನದಲ್ಲಿಯೂ ಕೂಡ ಕೆಟ್ಟ ವಿಲನ್ ಆಗಿದ್ದಾರೆ.. ಅವರ ಈ ನಡವಳಿಕೆ ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ಆತನಿಗೆ ಯಾರಾದ್ರು ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಈತನಿಗೆ ಯಾರು ಚಪ್ಪಲಿಯಲ್ಲಿ ಹೊಡೆಯುತ್ತಾರೋ ಅವರೇ ನಿಜವಾದ ಹೀರೋ.. ಪ್ರಕಾಶ್ ರೈ ಆದಷ್ಟು ಬೇಗ ಜೈಲು ಸೇರಿಕೊಂಡರೆ ಒಳ್ಳೆಯದು ಯಾಕಂದರೆ ಯಾರಾದರೂ ಅವರಿಗೆ ಚಪ್ಪಲಿಯಲ್ಲಿ ಹೊಡೆದು ಹೀರೋ ಆಗುತ್ತಾರೆ” ಎಂದು ಪ್ರಕಾಶ್ ರೈ ಅವರನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.

 

 

👇👇👇ಋಷಿಕುಮಾರ ಸ್ವಾಮಿಗಳ ವೀರಾವೇಶದ ಮಾತುಗಳನ್ನು ಕಣ್ತುಂಬಿಕೊಳ್ಳಲು ಈ ವಿಡಿಯೋ ನೋಡಿ👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top