ಸಿನಿಮಾ

ಕಾಣೆಯಾಗಿರುವ ಸಾಧುಕೋಕಿಲ, ಹುಡುಕಿ ಕೊಟ್ಟವರಿಗೆ ಬಹುಮಾನ

ಹಾಸ್ಯನಟ ಸಾಧುಕೋಕಿಲ ಅವರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕಜಾಲ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಈ ತರ ಪೋಸ್ಟ್ ಮಾಡಿದ್ದೂ ಬೇರಾರು ಅಲ್ಲ ನಿರ್ದೇಶಕ ನಾಗತಿಹಳ್ಳಿ ಚಂದ್ರೇಶೇಖರ್‌.

 

 

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ “ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ..” ಎಂದು ಬರೆದಿದ್ದಾರೆ.

 

ಕೆಲವಿ ದಿನಗಳಿಂದ ಸಾಧುಕೋಕಿಲ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದು ಚುನಾವಣೆ ಮುಗಿಯುವವರೆಗೂ ಫುಲ್ ಬ್ಯುಸಿ ಆಗಿದ್ದಾರೆ. ಸಾಧು ಕೋಕಿಲ, ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಸಿನಿಮಾ ಹಾಡನ್ನು ಹಾಡಬೇಕಿತ್ತು.

 

 

ತಾರಕಾಸುರ’ ಸಿನಿಮಾದಲ್ಲಿ ನವನಟ ವೈಭವ್ ಅಭಿನಯ ಮಾಡಿದ್ದೂ, ಅವರಿಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಇದ್ದಾರೆ. ಉಳಿದಂತೆ ಶೋಭರಾಜ್, ಸಾಧು ಕೋಕಿಲ ಮುಂತಾದ ತಾರಾಬಳಗ ಇದೆ. ಚಂದ್ರಶೇಖರ್ ಭಂಡಿಯಪ್ಪ ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಕೂಡಾ ಮಾಡಿದ್ದಾರೆ. ಕಳೆದ ವರ್ಷ ಪ್ರಾರಂಭವಾದ ಚಂದ್ರಶೇಖರ್ ಭಂಡಿಯಪ್ಪ ನಿರ್ದೇಶನದ `ತಾರಕಾಸುರ’ ಚಿತ್ರ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top