ಮನೋರಂಜನೆ

ಸಿಕ್ಕಾಪಟ್ಟೆ ವೈರಲ್ ಆಯ್ತು ಕಿರಿಕ್ ಹುಡುಗಿ ಸಂಯುಕ್ತಾಳ ಹೊಸ ವಿಡಿಯೋ!

ಅದ್ಯಾವ ಘಳಿಗೆಯಲ್ಲಿ ಕಿರಿಕ್ ಪಾರ್ಟಿ ಚಿತ್ರದಲ್ಲಿ ತನಗೆ ನಟಿಸೋ ಅವಕಾಶ ಸಿಕ್ಕಿತೋ ಆಗಿನಿಂದಲೇ ಬಗೆಬಗೆಯಾದ ಕಾಂಟ್ರವರ್ಸಿಗಳನ್ನು ಮೈಮೇಲೆ ಎಳೆದುಕೊಂಡು ಹುಚ್ಚಾಟ ಪ್ರದರ್ಶಿಸುತ್ತಿದ್ದ ಸಂಯುಕ್ತ ಹೆಗ್ಡೆಗೆ ಅದ್ಯಾವ ಸೊಬಗಿಗೆ ಬಿಗ್‌ಬಾಸ್ ಆಯೋಜಕರು ಮನೆಯೊಳಗೆ ಬಿಟ್ಟುಕೊಂಡರೋ ಗೊತ್ತಿಲ್ಲ; ಆ ಕ್ಷಣದಿಂದಲೇ ಈಕೆಯ ವರಾತಗಳು ಮೇರೆ ಮೀರಿ ಇದೀಗ ಅದು ಅಕ್ಷರಶಃ ಅಸಹ್ಯದ ಪರಮಾವಧಿ ತಲುಪಿಕೊಂಡಿದೆ.ಬಿಗ್‌ಬಾಸ್ ಮನೆಗೆ ಹೋಗಿ ಇಜ್ಜಿಲೊಲೆಯ ಸಮೀರ್ ಆಚಾರ್ಯನಿಗೆ ತದುಕಿ ಹೊರ ಬಂದ ಸಂಯುಕ್ತಾ ಹೆಗಡೆ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾಳೆ!

 

 

ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ನಾಪತ್ತೆಯಾದಂತಿದ್ದ ಸಂಯುಕ್ತಾ ಹೆಗ್ಡೆ ಇದೀಗ ಮತ್ತದೇ ಚೋಟುದ್ದದ ಬಟ್ಟೆ ತೊಟ್ಟು ಅಸಹ್ಯದ ಪೋಸು ಕೊಡುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಈಕೆಯ ಈ ಅವತಾರ ಮತ್ತೊಂದು ಸಲ ಟ್ರಾಲ್ ಪೇಜುಗಳಿಗೆ ಭರ್ಜರಿ ಆಹಾರ ಒದಗಿಸಿದೆ.ವಾರಕ್ಕೊಂದರಂತೆ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡುತ್ತಿದ್ದ ಸಂಯುಕ್ತ ಸ್ವಲ್ಪ ದಿನಗಳ ಕಾಲ ಎಲ್ಲವನ್ನು ಮರೆತು ಸುಮ್ಮನಾಗಿಬಿಟ್ಟಿದ್ದರು ಆದ್ರೆ ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದಾರೆ.

 

 

ನಾನಾ ಭಂಗಿಗಳಲ್ಲಿ ಪೋಸ್ ಕೊಟ್ಟ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಟ್ರಾಲಿಗರಿಗೆ ಫುಲ್ ಮೀಲ್ಸ್ ನೀಡುತ್ತಿದ್ದ ಸಂಯುಕ್ತ ಇದೀಗ ವಿಡಿಯೋ ದಾರಿ ಹಿಡಿದಿದ್ದು ವ್ಯಕ್ತಿಯೊಬ್ಬನ ಜೊತೆ ಸಾಲ್ಸ ಡ್ಯಾನ್ಸ್ ಮಾಡಿರುವ ಇಂಟರ್ನೆಟ್ಟಿಗೆ ಬಿಟ್ಟ್ಟಿದ್ದಾರೆ. ವಿಪರ್ಯಾಸವೆಂದರೆ ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಂದಿನಂತೆ ಟ್ರಾಲಿಗರು ವಿಡಿಯೋವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡ್ಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಬಹಳ ದಿನಗಳ ನಂತರ ಸಂಯುಕ್ತ ವಿಡಿಯೋ ಟ್ರೋಲ್ ಪೇಜುಗಳಿಗೆ ಒಂದು ರೀತಿ ಅಪರೂಪಕ್ಕೆ ಸಿಕ್ಕ ಬಾಡೂಟದಂತೆ ಪರಿಣಮಿಸಿದೆ.
ಸಂಯುಕ್ತಳ ಸಾಲ್ಸಾ ಡ್ಯಾನ್ಸ್ ಕಣ್ತುಂಬಿಕೊಳ್ಳಬೇಕು ಅಂದ್ರೆ ಈ ವಿಡಿಯೋ ನೋಡಿ.

 

ಸಂಯುಕ್ತಾಳ ಮುಂದೀಗ ಹೇಳಿಕೊಳ್ಳುವಂತಾ ಯಾವ ಅವಕಾಶಗಳೂ ಇಲ್ಲ. ಕಿರಿಕ್ ಪಾರ್ಟಿ ನಂತರ ಕಾಲೇಜ್ ಕುಮಾರ ಎಂಬ ಚಿತ್ರದಲ್ಲಿ ಈಕೆ ನಾಯಕಿಯಾಗಿದ್ದಳಲ್ಲಾ? ಆ ಸಂದರ್ಭದಲ್ಲಿ ಈಕೆ ಸೃಷ್ಟಿಸಿದ್ದ ರಗಳೆ ರಾಮಾಯಣಗಳು ಖಂಡಿತವಾಗಿಯೂ ಈಕೆ ಇನ್ನು ಮುಂದೆ ನಾಯಕಿಯಾಗದಂತೆ ತಡೆಯುತ್ತವೆ. ಒಟ್ಟಾರೆಯಾಗಿ ಈಕೆಯನ್ನು ಕರೆದು ಅವಕಾಶ ಕೊಡುವ ಧೈರ್ಯ ಕನ್ನಡ ಚಿತ್ರ ರಂಗದಲ್ಲಿ ಯಾರಿಗೂ ಉಳಿದಿಲ್ಲ. ಬಿಗ್‌ಬಾಸ್ ಶೋ ಆದ ನಂತರ ಜನ ಈಕೆಯನ್ನು ಮರೆತೇ ಬಿಟ್ಟಿದ್ದರು.ಇದೀಗ ವಿಚಿತ್ರ ಬಟ್ಟೆ ತೊಟ್ಟು ಬಿಚ್ಚೆದೆ ಪ್ರದರ್ಶಿಸುತ್ತಾ ಸಂಯುಕ್ತಾ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾಳೆ ಎನ್ನುವುದು ಬಹುತೇಕರ ಮಾತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top