ಮನೋರಂಜನೆ

ಕಿರುತೆರೆಯ ಸೀರಿಯಲ್ ನಿರ್ದೇಶಕ ರವಿಕಿರಣ್ ಅವರಿಗೆ ಇಂತಹ ಪರಿಸ್ಥಿತಿ ಬರೋದಕ್ಕೆ ಕಾರಣ ಏನು ಗೊತ್ತಾ

ಕನ್ನಡದ ಕಿರುತೆರೆಯ ಖ್ಯಾತ ನಿರ್ದೇಶಕರಲ್ಲಿ ರವಿಕಿರಣ್ ಕೂಡ ಒಬ್ಬರು ಅನೇಕ ಹೀರೋ ಹಾಗೂ ಹೀರೋಯಿನ್ಗಳನ್ನು ಕಿರುತೆರೆಗೆ ಪರಿಚಯ ಮಾಡಿಕೊಟ್ಟವರು ರವಿಕಿರಣ್ , ತೊಂಬತ್ತರ ದಶಕದಲ್ಲಿ ಟಾಪ್ ನಿರ್ದೇಶಕರಾಗಿದ್ದ ರವಿಕಿರಣ್ ಅವರಿಗೆ ಆ ನಂತರದ ದಿನಗಳಲ್ಲಿ ಆಫರ್ ಗಳು ಅಷ್ಟಾಗಿ ಬಂದಿಲ್ಲ ರವಿಕಿರಣ್ ಅವರ ಯಾವುದೇ ಧಾರಾವಾಹಿಗಳು ಸಹ ಶುರುವಾಗಿಲ್ಲ ಇದರ ಹಿಂದೆ ದೊಡ್ಡ ಕಾರಣವೇ ಇದೆ .

 

 

ಎರಡು ವರ್ಷಗಳಿಂದ ಅನೇಕ ಚಾನೆಲ್ ಗಳನ್ನು ಭೇಟಿ ಮಾಡಿ ಕಾನ್ಸೆಪ್ಟ್ ಗಳನ್ನು ಕೊಟ್ಟು ಬಂದಿದ್ದಾರಂತೆ ಆದರೂ ಸಹ ಕಾನ್ಸೆಪ್ಟ್ ಕೊಟ್ಟು ಕೊಟ್ಟು ರವಿಕಿರಣ್ ಅವರಿಗೆ ಸುಸ್ತಾಗಿ ಹೋಗಿದೆ ಬದಲಾಗಿ ಸಿರಿಯಲ್ ಮಾಡುವ ಆಫರ್ ಅಂತೂ ರವಿಕಿರಣ್ ಅವರಿಗೆ ಬಂದಿಲ್ಲ ಆದ್ದರಿಂದಲೇ ರವಿ ಕಿರಣ್ ಅವರ ಧಾರಾವಾಹಿಗಳು ನಿಂತು ಹೋಗಿವೆ .

ಆದರೆ ಇತ್ತೀಚಿನ ಟಿವಿ ಚಾನಲ್ ಗಳಲ್ಲಿ ಕಾನ್ಸೆಪ್ಟ್ ಮುಖ್ಯವಾಗುವುದಿಲ್ಲ, ಕೆಲ ನಿರ್ದೇಶಕರಿಗೆ ಎರಡರಿಂದ ಮೂರು ಸಿರಿಯಲ್ ಮಾಡುವ ಅವಕಾಶ ಸಿಗುತ್ತದೆ, ಇಲ್ಲಿ ಐವತ್ತು ಕಾನ್ಸೆಪ್ಟ್ ಕೊಟ್ಟರೂ ಯಾವುದೇ ಪ್ರಯೋಜನವಾಗುವುದಿಲ್ಲ .

 

 

ಇದರಿಂದ ಮನನೊಂದ ರವಿಕಿರಣ್ ಅವರು ಚಾನೆಲ್ ಗಳ ಮುಂದೆ ಆಫರ್ವೊಂದನ್ನು ಇಟ್ಟರಂತೆ ಅದರ ಪ್ರಕಾರ ಐವತ್ತು ಎಪಿಸೋಡುಗಳ ಸೀರಿಯಲ್ ನಿರ್ದೇಶನ ಮಾಡಿ ಕೊಡುತ್ತಾರಂತೆ ಅದನ್ನು ಪ್ರಸಾರ ಮಾಡಿ ಚೆನ್ನಾಗಿಲ್ಲ ಎಂದರೆ ನಿಲ್ಲಿಸಿಬಿಡಿ ,ದುಡ್ಡು ಕೊಡಬೇಡಿ, ನಷ್ಟವಾದರೆ ನನಗೆ ಮಾತ್ರ ಆಗುತ್ತದೆ ಒಂದು ವೇಳೆ ಗೆದ್ದರೆ ಮಾತ್ರ ದುಡ್ಡು ಕೊಡಿ ಎಂದು ಹೇಳಿದರಂತೆ ಆದರೂ ಸಹ ಚಾನೆಲ್ ಅವರು ಇವರಿಗೆ ಸಿರಿಯಲ್ ಮಾಡುವ ಅವಕಾಶವನ್ನು ನೀಡುತ್ತಿಲ್ಲವಂತೆ ಇದರಿಂದ ರವಿ ಅವರಿಗೆ ತುಂಬಾ ಬೇಜಾರಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top