ಸಮಾಚಾರ

ಬೆಂಗಳೂರಿನಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಈ ಮೂರೂ ದಿನ ಮಧ್ಯ ಮಾರಾಟ ನಿಷೇದ

ವಿಧಾನಸಭಾ ಚುನಾವಣೆ ಮತದಾನ ಹಾಗು ಮತ ಎಣಿಕೆಯನ್ನು ಶಾಂತಿಯುತವಾಗಿ, ಸುವ್ಯವಸ್ಥಿವಾಗಿ ಹಾಗೂ ಸುಗಮವಾಗಿ ನಡೆಸುವ ಸಲುವಾಗಿ ಅಬಕಾರಿ ಕಾಯಿದೆಯನ್ವಯ ಮೇ 12 ರ ವೋಟಿಂಗ್ ಹಿನ್ನೆಲೆ ಮೇ 10 ರ ಸಂಜೆ 5 ರಿಂದ ಮೇ 12 ರ ರಾತ್ರಿ ಮಧ್ಯರಾತ್ರಿ ವರೆಗೆ ಅದೇ ರೀತಿ ಮೇ 15ರ ಮತಎಣಿಕೆ ಹಿನ್ನೆಲೆ ಬೆಳಿಗ್ಗೆ 6 ರಿಂದ ಅದೇ ದಿನ ಮಧ್ಯ ರಾತ್ರಿ ವರೆಗೆ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

 

 

ನಗರದ ಎಲ್ಲಾ ಬಾರ್‌ ರೆಸ್ಟೋರೆಂಟ್‌, ಹೋಟೆಲ್‌‌, ಕ್ಲಬ್‌ಗಳನ್ನು ಮದ್ಯ ಮಾರಾಟವನ್ನು ನಿಷೇದ ಮಾಡಲಾಗಿದ್ದು, ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಗರ ಪೊಲೀಸ್‌ ಆಯುಕ್ತ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.

 

 

ಅಬಕಾರಿ ಪೊಲೀಸ್ ಸಿಬ್ಬಂದಿಗಳು ನಗರದಾದ್ಯಂತ ಸಂಚರಿಸಿ, ಗಸ್ತು ತಿರುಗಿ ಯಾವುದೇ ರೀತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರವಹಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top