ಜ್ಯೋತಿಷ್ಯ

ಮೇ 2018 ಮಕರ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮಕರ ರಾಶಿ ಮೇ 2018 ತಿಂಗಳ ಭವಿಷ್ಯ.

ಆರೋಗ್ಯ.
ಆರೋಗ್ಯ ಮತ್ತು ನಿಮ್ಮ ಯೋಗಕ್ಷೇಮದಲ್ಲಿ ಒಂದಿಷ್ಟು ಬದಲಾವಣೆಗಳು ಈ ತಿಂಗಳ ಮೊದಲ ವಾರದಲ್ಲಿ ಕಂಡುಬರುತ್ತವೆ. ಕೆಲವು ಕಾರಣಕ್ಕಾಗಿ ನಿಮ್ಮ ಕೆಲಸ ಕಾರ್ಯ ಅಥವಾ ಆಸ್ಪತ್ರೆ ಚಿಕಿತ್ಸೆಗಳು ರದ್ದುಗೊಳ್ಳುತ್ತದೆ. ಈ ಸಮಯದಲ್ಲಿ ನೀವು ಒಂದು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗುವಿರಿ ಅಥವಾ ತಪ್ಪಿಸಿಕೊಳ್ಳುವಿರಿ. ಹೊರಗಿನ ಆಹಾರ ತಿನ್ನ ಬೇಡಿ ಹಾಗೂ ಆರೋಗ್ಯದ ದೃಷ್ಟಿಯಿಂದ ಇಂತಹ ಆಹಾರಗಳಿಂದ ಆದಷ್ಟು ದೂರವಿರಿ.

ಕುಟುಂಬ.
ಮದುವೆ ಆಗಿದ್ದಲ್ಲಿ ನಿಮ್ಮ ವಿವಾಹಿತ ಜೀವನ ಉತ್ಸಾಹದಿಂದ ಕೂಡಿರುತ್ತದೆ ಜೊತೆಗೆ ನಿಮ್ಮ ಕುಟುಂಬದ ವಿವಾದಗಳು ಕೊನೆಗೊಳ್ಳುತ್ತವೆ. ನಿಮ್ಮ ಬಹುತೇಕ ಪ್ರಮುಖ ಕೆಲಸಗಳಲ್ಲಿ ಯಶಸ್ಸು ಮತ್ತು ನಿಮ್ಮ ಗೌರವವನ್ನು ಹೆಚ್ಚಿಸುತ್ತವೆ. ನಿಮ್ಮ ಆಸ್ತಿಯನ್ನು ನೀವು ಸ್ವಾಧೀನಪಡಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ .

ಹಣಕಾಸು.
ನಿಮ್ಮ ಹಣಕಾಸಿನ ವಿಷಯದಲ್ಲಿ ಒಂದಷ್ಟು ಉತ್ತಮ ಪ್ರಗತಿಯನ್ನು ಕಾಣುತ್ತೀರಿ ಹಾಗೂ ಅದರ ಬೆಲೆ ನಿಮಗೆ ಅರ್ಥವಾಗಲಿದೆ. ನಿಮ್ಮ ಮನಸ್ಸು ಶಾಂತವಾಗಿ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಶ್ರದ್ಧೆ, ತಾಳ್ಮೆ, ಜ್ಞಾನ ನಿಮ್ಮ ಶಕ್ತಿಗಳಾಗಿ ಕೆಲಸ ಮಾಡುತ್ತವೆ.

ತಿಂಗಳ ಕೊನೆಯ ಎರಡು ವಾರ ಮಕರ ರಾಶಿಯವರಿಗೆ.
ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳ ವಿರುದ್ಧ ವಾಸ್ತವ ಅಥವಾ ಬೇರೆಯವರು ಕೆಲಸ ಮಾಡುತ್ತಾರೆ . ಜೊತೆಗೆ ನಿಮ್ಮ ವಿರುದ್ಧ ಕುತಂತ್ರವನ್ನು, ಪ್ರತಿರೋಧವನ್ನು ಮತ್ತು ಪ್ರತಿಭಟನೆಯ ಧ್ವನಿಗಳು ಕೇಳಿ ಬರುತ್ತವೆ. ಇದರಿಂದ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ಇರಬಹುದು ಅಥವಾ ನಷ್ಟಕ್ಕೆ ಕಾರಣವಾಗಬಹುದು. ಇದನ್ನು ಅರಿತ ನೀವು ಮತ್ತಷ್ಟು ಹಾನಿಯನ್ನು ತಪ್ಪಿಸಲು ಪರಿಸ್ಥಿತಿಯೊಂದಿಗೆ ರಾಜಿ ಮಾಡಲು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಪ್ರಯತ್ನ ಮಾಡುತ್ತೀರ. ಆದಷ್ಟು ಮೊದಲಿನಿಂದಲೇ ಸಮಸ್ಯೆ ದೊಡ್ಡದಾಗದಂತೆ ತಡೆಯಿರಿ.
ನಿಮ್ಮ ಮಕ್ಕಳು ನಿಮ್ಮನ್ನು ತೊಂದರೆಗಳಲ್ಲಿ ಸಿಕ್ಕಿ ಹಾಕಿಸಬಹುದು. ಬುದ್ಧಿವಂತಿಕೆಯಿಂದ ಹೊರಬನ್ನಿ, ತಾಳ್ಮೆ ಇರಲಿ. ನೀವು ಕೆಲವು ಹೋರಾಟ ಅಥವಾ ವಿವಾದಾತ್ಮಕ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಪಾಲ್ಗೊಳ್ಳಬಹುದು. ಅವಶ್ಯಕತೆ ಇದ್ದರೆ ಮಾತ್ರ ಹೋರಾಟ ಮಾಡಿ ಅಥವಾ ವಿವಾದಾತ್ಮಕ ಪರಿಸ್ಥಿತಿಯಲ್ಲಿ ಪಾಲ್ಗೊಳ್ಳಿ. ಸುಮ್ಮನೆ ಬೇಡದೇ ಇರುವ ವಿಷಯಗಳಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ. ಪ್ರೀತಿ, ಪ್ರೇಮ, ಸಂಬಂಧಗಳು ಅಥವಾ ಮದುವೆಯ ವಿಷಯ ಅಂದುಕೊಂಡಂತೆ ನಡೆಯುವುದಿಲ್ಲ .

ಶುಭ ಮತ್ತು ಅಶುಭ ದಿನಗಳು.
ಶುಭ ದಿನಗಳು 1,11,19. ಮತ್ತು ಆಶುಭ ದಿನಗಳು 6,17,26,28.

 

ಮೇ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top