ರಾಜಕೀಯ

ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಸಿಎಂ ಮಾಸ್ಟರ್ ಪ್ಲಾನ್: ಸಿದ್ದು ಪರ ಬಾದಾಮಿಯಲ್ಲಿ ಕಿಚ್ಚ ಸುದೀಪ್ ಪ್ರಚಾರ.

ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದ್ದು ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡ ಬಲು ಜೋರಾಗಿದೆ.. ಆ ಸ್ಟಾರ್ ಅಲ್ಲಿ ಪ್ರಚಾರ ಮಾಡ್ತಾನಂತೆ ಈ ಸ್ಟಾರ್ ಇಲ್ಲಿ ಪ್ರಚಾರ ಮಾಡ್ತಾನಂತೆ ಎನ್ನುವ ಸಮಾಚಾರಗಳಿಗೇನು ಕಮ್ಮಿಯಿಲ್ಲ ಆದರೆ ಇದೀಗ ಚುನಾವಣಾ ಪ್ರಚಾರಕ್ಕೆ ಧುಮುಕಲು ಕಿಚ್ಚ ಸುದೀಪ್ ರೆಡಿಯಾಗಿದ್ದಾರೆ ಎನ್ನುವ ಪಕ್ಕ ಮಾಹಿತಿಯನ್ನು ಖುದ್ದು ಸುದೀಪ್ ಅವರೇ ಮಾತನಾಡಿದ್ದಾರೆ.

 

 

ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಜೋರಾಗಿ ನಡೆಯುತ್ತಿದ್ದು ವಾಲ್ಮಿಕಿ ಸಮುದಾಯದ ಮತಗಳನ್ನು ಸೆಳೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕ್ಷೇತ್ರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ವಾಲ್ಮೀಕಿ ಸಮುದಾಯದ ಮತಗಳು ಇರುವುದರಿಂದ ಅದೇ ಜಾತಿಗೆ ಸೇರಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಸಮುದಾಯದ ಮತಗಳು ಬೀಳುತ್ತವೆ ಎಂದು ಭಾವಿಸಲಾಗಿತ್ತು.. ಇದೀಗ ಅದೇ ಸಮುದಾಯಕ್ಕೆ ಸೇರಿರುವ ನಟ ಕಿಚ್ಚ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರಲು ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದು ಇದೇ ತಿಂಗಳ 9ರಂದು ಬಾದಾಮಿ ಕ್ಷೇತ್ರದಾದ್ಯಂತ ತೆರಳಿ ಸಿದ್ದರಾಮಯ್ಯನವರ ಪರ ಜನರಲ್ಲಿ ಮತ ಯಾಚನೆ ಮಾಡಲಿದ್ದಾರೆ. ಈ ಮೂಲಕ ಕೈತಪ್ಪಿ ಹೋಗಿದ್ದ ವಾಲ್ಮಿಕಿ ಮತಗಳು ಮತ್ತೆ ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

 

 

ಈ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅವರೇ ಮಾತನಾಡಿದ್ದು “ಮುಖ್ಯಮಂತ್ರಿಯಂತಹ ದೊಡ್ಡ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಹಿಂದಿನಿಂದಲೂ ನನಗೆ ಬಹಳ ಆತ್ಮೀಯರು. ನಾನು ಅವರ ಮುಂದೆ ತುಂಬಾ ಚಿಕ್ಕವನು. ಅವರ ಮೇಲಿನ ಪ್ರೀತಿ,ಅಭಿಮಾನ ಮತ್ತು ಗೌರವದಿಂದ ಪ್ರಚಾರ ನಡೆಸಲು ಹೋಗುತ್ತಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶಕ್ಕೂ ಅಲ್ಲ. ನನಗೆ ಯಾವುದೇ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುತ್ತಾರೆ. ಹಾಗಂತ ನಾನು ಪ್ರಚಾರ ನಡೆಸಿದ ಮಾತ್ರಕ್ಕೆ ಸಿದ್ದರಾಮಯ್ಯನವರು ಗೆಲ್ಲುತ್ತಾರೆ ಎಂಬ ಅಹಂ ಕೂಡ ನನ್ನಲ್ಲಿಲ್ಲ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top