ಸಮಾಚಾರ

ಶ್ರೀರಾಮುಲು ಪರ ಪ್ರಚಾರಕ್ಕೆ ನಿಂತ ರಾಕಿಂಗ್ ಸ್ಟಾರ್ ಯಶ್!

ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದ್ದು ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡ ಬಲು ಜೋರಾಗಿದೆ.. ಆ ಸ್ಟಾರ್ ಅಲ್ಲಿ ಪ್ರಚಾರ ಮಾಡ್ತಾನಂತೆ ಈ ಸ್ಟಾರ್ ಇಲ್ಲಿ ಪ್ರಚಾರ ಮಾಡ್ತಾನಂತೆ ಎನ್ನುವ ಸಮಾಚಾರಗಳಿಗೇನು ಕಮ್ಮಿಯಿಲ್ಲ ಅದರಂತೆ ಕಳೆದ ಕೆಲವು ದಿನಗಳಿಂದ ಕೆಲವು ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಇಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

 

 

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು‌ ಪರ ಇಂದು ನಟ ಯಶ್ ಮೊಳಕಾಲ್ಮೂರು ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿರುವ ಯಶ್ ಸಂಜೆ 5 ಗಂಟೆಗೆ ನಾಯಕನಹಟ್ಟಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ನಂತರ ನಾಯಕನಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗು ರಾಂಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

 

 

ರಾಕಿಂಗ್ ಸ್ಟಾರ್ ಯಶ್ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಕೆಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಮತ್ತು ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಪರವಾಗಿ ಮತಯಾಚನೆ ನಡೆಸಿದ್ದರು. “ನಾನು ಎರಡೂ ಪಕ್ಷದ ಪರವಾಗಿ ಪ್ರಚಾರ ಮಾಡ್ತೀನಿ ಅಂತ ಗೊಂದಲವಾಗಬೇಕಾಗಿಲ್ಲ ನಾನು ಯಾವುದೇ ಪಕ್ಷಕ್ಕಾಗಲಿ ಅಥವಾ ಸಿದ್ಧಾಂತಕ್ಕಾಗಲಿ ಬೆಲೆ ಕೊಡುವವನಲ್ಲ. ನಾನು ವ್ಯಕ್ತಿಗಳಿಗೆ ಬೆಲೆ ಕೊಡುತ್ತೇನೆ. ಆ ವ್ಯಕ್ತಿಗಳು ನನ್ನ ಸ್ನೇಹಿತರು, ನಂಬಿಕಸ್ತರಾಗಿರುತ್ತಾರೆ ಹಾಗಾಗಿ ನಾನು ಅವರನ್ನು ಬೆಂಬಲಿಸುತ್ತಿದ್ದೇನೆ.”ಎಂದು ಇತ್ತೀಚಿಗೆ ಹೇಳಿಕೆ ಕೊಟ್ಟಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top