ತಿಂಡಿ ತೀರ್ಥ

ಬಾಳೆಹಣ್ಣಿನ ಬೆಲ್ಲದ ದೋಸೆ ಮಾಡುವ ವಿಧಾನ

ಬಾಳೆಹಣ್ಣಿನ ಬೆಲ್ಲದ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:

* ಬಾಳೇಹಣ್ಣು- 2 (ಹೆಚ್ಚಿಕೊಳ್ಳಿ) .

*ಹಿಟ್ಟು- 125 ಗ್ರಾಂ .

*ದಾಲ್ಚಿನ್ನಿ ಪುಡಿ- 1 ಟೀಚಮಚ .

*ಬೂರಾ ಸಕ್ಕರೆ- 3 ಟೀಚಮಚ .

*ಬೆಲ್ಲ ( ಸಕ್ಕರೆಯ ಬದಲು) .

*ಹಾಲು- 120 ಮಿಲಿ .

*ಎಣ್ಣೆ .

*ಜೇನು ತುಪ್ಪ (ಬೇಕಾದರೆ)

ಬಾಳೆಹಣ್ಣಿನ ಬೆಲ್ಲದ ದೋಸೆ  ಮಾಡುವ ವಿಧಾನ :

ಬಾಳೆಹಣ್ಣನ್ನು ಕತ್ತರಿಸಿಕೊಳ್ಳಿ. . ಒಂದು ಪಾತ್ರೆಗೆ ಹಿಟ್ಟು, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಸಕ್ಕರೆಯ ಬದಲು ಬೆಲ್ಲವನ್ನು ಸೇರಿಸಿಕೊಳ್ಳಬಹುದು. . ನಂತರ ಅದಕ್ಕೆ ಹಾಲನ್ನು ಸೇರಿಸಿ ಒಂದು ಹದಕ್ಕೆ ಬರುವಂತೆ ನಯವಾಗಿ ಕಲಸಿಕೊಳ್ಳಿ. . ಈ ಮಿಶ್ರಣಕ್ಕೆ ಬಾಳೆಹಣ್ಣನ್ನು ಸೇರಿಸಿ. . ಹೆಂಚಿನ ಮೇಲೆ ಒಂದು ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಕಲಸಿಟ್ಟುಕೊಂಡ ಮಿಶ್ರಣವನ್ನು ಅದರ ಮೇಲೆ ಹಾಕಿ. . ಅದನ್ನು ದೋಸೆಯ ಹಾಗೆ ಹೆಂಚಿನ ತುಂಬ ವೃತ್ತಾಕಾರದಲ್ಲಿ ಪಸರಿಸಿ ಕೆಂಪಾಗುವವರೆಗೆ ಸುಡಿ. . ದೋಸೆ ಹುಯ್ಯುವಂತೆ ಇವುಗಳನ್ನು ತಯಾರಿಸಿ ಒಂದು ಚಮಚ ಜೇನುತುಪ್ಪವನ್ನು ಎಲ್ಲದರ ಮೇಲೆ ಹಾಕಿ. ಬಾಳೆಹಣ್ಣಿನ ಬೆಲ್ಲದ ದೋಸೆ ಸವಿಯಲು ರೆಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top