fbpx
ವಿಶೇಷ

ಒಂದು ಕಾಲದಲ್ಲಿ ಗ್ಯಾರೇಜ್ ನಲ್ಲಿ, ಸಣ್ಣ ಮನೇಲಿ ಶುರು ಮಾಡಿದ್ದ ಬಿಸಿನೆಸ್ ಈಗ ಕೋಟಿ ಕೋಟಿ ರೇಂಜ್ ಗಿದೆ ನೋಡಿದ್ರೆ ನೀವು ಒಂದು ಬಿಸಿನೆಸ್ ಸ್ಟಾರ್ಟ್ ಮಾಡ್ಬೇಕು ಅನ್ಕೋತೀರಾ

ಬಿಸಿನೆಸ್ ಮಾಡಿ ಬೆಳೆಯೋಣ ಇರೋ ತಲೆನಾ ಬೇರೆ ಯಾರಿಗೋ ಕೆಲಸ ಮಾಡಿ ವೇಸ್ಟ್ ಮಾಡೋದು ಬೇಡ ಅಂತ ಎಷ್ಟೋ ಜನ ಅನ್ಕೋತಿರ್ತಾರೆ , ಆದ್ರೆ ಮನೆಯಲಿ ಬೇರೆ ಬೇರೆ ತರದ ತೊಂದರೆ ಮಿಡ್ಲ್ ಕ್ಲಾಸ್ ಜೀವನ ,ಹೆಂಡತಿ ,ಸಾಲ ,ಸಂಬಂಧಿಕರು ಇವ್ರೆಲ್ಲರೂ ಒಂದ್ ಸಲ ಕಣ್ಣು ಮುಂದೆ ಹಾಗೆ ಬಂದು ಹೋದ್ರೆ ಸಾಕು ಸುಮ್ನೆ ತಿಂಗಳ ಸಂಬಳ ಸಾಕು ಅಂತ ಎಷ್ಟೋ ಜನ ಅನ್ಕೊಂಡು ಸುಮ್ನೆ ಆಗ್ತಾರೆ ,ಆದ್ರೆ ಒಂದು ಕಾಲದಲ್ಲಿ ಗ್ಯಾರೇಜ್ ನಲ್ಲಿ ಸ್ಟಾರ್ಟ್ ಮಾಡಿದ್ದ ಆ ಬಿಸಿನೆಸ್ ಗಳು ಯಾವ ರೇಂಜ್ ಗೆ ಬೆಳೆದು ನಿಂತಿದೆ ಅಂದ್ರೆ ನೀವು ಇಷ್ಟ -ಕಷ್ಟ ಪಟ್ಟು ಒಂದೊಳ್ಳೆ ಬಿಸಿನೆಸ್ ಮಾಡೋಣ ಅಂದೇ ಅಂತೀರಾ .

 

ಹೀಗೆ ಗ್ಯಾರೇಜ್ ನಲ್ಲಿ ಶುರು ಮಾಡಿ ಟಾಪ್ ರೇಂಜ್ ಗೆ ಬೆಳೆದ ಕೆಲವು ಕಂಪನಿ ಗಳ ಬಗ್ಗೆ ತಿಳ್ಕೊಳ್ಳೋಣ

ಇನ್ಫೋಸಿಸ್

1981 ರಲ್ಲಿ ಪುಣೆನಲ್ಲಿ ನಾರಾಯಣ್ ಮೂರ್ತಿ, ನಂದನ್ ನಿಲೇಕಣಿ, ಎನ್.ಎಸ್. ರಾಘವನ್, ಎಸ್. ಗೋಪಾಲಕೃಷ್ಣನ್, ಎಸ್.ಡಿ. ಶಿಬುಲಾಲ್, ಕೆ ದಿನೇಶ್ ಮತ್ತು ಅಶೋಕ್ ಅರೋರಾ ಇವರುಗಳು ಸೇರಿ ಇನ್ಫೋಸಿಸ್ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದರು ,ಇವರೆಲ್ಲರೂ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್ನ ಮಾಜಿ ಉದ್ಯೋಗಿಗಳು.

 

 

 

ಈ ಕಂಪೆನಿಯು 10,000 ರೂ ಆರಂಭಿಕ ಬಂಡವಾಳದೊಂದಿಗೆ ಆರಂಭವಾಯಿತು ಮೊದಲಿಗೆ ಇನ್ಫೋಸಿಸ್ ಕನ್ಸಲ್ಟೆಂಟ್ಸ್ ಎಂದು ಹೆಸರಿಸಲಾಯಿತು. ಮೂರ್ತಿ ಅವರ ಪತ್ನಿ ಸುಧಾ ಮೂರ್ತಿಯಿಂದ ಸಾಲ ಪಡೆದಿದ್ದರು. ಮೂರ್ತಿಯ ಮನೆಗೆ ಮುಂಭಾಗದ ಕೋಣೆ ಕಂಪೆನಿಯ ಮೊದಲ ಕಚೇರಿಯಾಗಿತ್ತು.

ಅಮೆಜಾನ್

 

 

ಇಂಟರ್ನೆಟ್ ಯುಗ1994 ರಲ್ಲಿ ಶುರುವಾದಾಗ ಜೆಫ್ ಬೆಜೊಸ್ ತಮ್ಮ ಸ್ವಂತ ಆನ್ಲೈನ್ ​​ಪುಸ್ತಕದಂಗಡಿಯನ್ನ ಶುರು ಮಾಡಿದ್ದು ತನ್ನ ಗ್ಯಾರೇಜ್ನಲ್ಲಿ, ಆದರೆ ಇಂದು ಅಮೆಜಾನ್ ವಿಶ್ವದ ಅತಿ ದೊಡ್ಡ ಆನ್ಲೈನ್ ​​ಚಿಲ್ಲರೆ ಮಾರಾಟಗಾರ. ಇದರ ಸಂಸ್ಥಾಪಕ ಜೆಫ್ ಬೆಜೊಸ್ ಕೂಡಾ ಖಾಸಗಿ ಬಂಡವಾಳದ ಏರೋಸ್ಪೇಸ್ ಉತ್ಪಾದನೆ ಮತ್ತು ಬಾಹ್ಯಾಕಾಶ ವಿಮಾನ ಸೇವೆ ಕಂಪನಿಯ ಒಡೆಯ ,ಅಮೆಜಾನ್ ನ ಕಂಪನಿ ಬ್ಲೂ ಒರಿಜಿನ್ ಇದ್ದದ್ದು ಜೆಫ್ ಬೆಜೊಸ್ ಅವರ ತೋಟದ ಗ್ಯಾರೇಜ್ನಲ್ಲಿ.

 

ಆಪಲ್

 

ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೊಜ್ನಿಯಾಕ್ ಅವರು ತಮ್ಮ ಮೊದಲ ಕಂಪ್ಯೂಟರ್ ತಯಾರಿ ಮಾಡಿದ್ದು ಸ್ಟೀವ್ ಜಾಬ್ಸ್ ಅವರ ಸ್ವಂತ ಗ್ಯಾರೇಜ್ನಲ್ಲಿ, ಆದ್ರೆ ಈಗ ಆಪಲ್ ತನ್ನ ಹೊಸ ಪ್ರಧಾನ ಕಛೇರಿಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ ಇದು ನಾಲ್ಕು ಅಂತಸ್ತಿನ ಕಟ್ಟಡವಾಗಿದ್ದು ಸುಮಾರು 2.8 ದಶಲಕ್ಷ ಚದರ ಅಡಿ ಪ್ರದೇಶ ಹಾಗೆಯೇ ಇಲ್ಲಿ 13,000 ಉದ್ಯೋಗಿಗಳು ಕೆಲಸ ಮಾಡ್ತಾರೆ .

 

ಡಿಸ್ನಿ

 

 

ರಾಯ್ ಮತ್ತು ವಾಲ್ಟ್ ಡಿಸ್ನಿ ತಮ್ಮ ಚಿಕ್ಕಪ್ಪನ ಒಂದು ಕಾರು ಗ್ಯಾರೇಜ್ನಲ್ಲಿ ತಮ್ಮ ಮೊದಲ ಆನಿಮೇಟೆಡ್ ಚಲನಚಿತ್ರವನ್ನು ಚಿತ್ರೀಕರಿಸಿದರು. ಇಂದು, ವಾಲ್ಟ್ ಡಿಸ್ನಿ ಕಂಪನಿಯು ವಿಶ್ವದಲ್ಲೇ ಅತ್ಯಂತ ಹೆಚ್ಚು ಹಣ ಗಳಿಸುವ ಮಾಧ್ಯಮ ಸಂಘಟನೆಯಾಗಿದೆ, ಇಲ್ಲಿ ಚಲನಚಿತ್ರಗಳನ್ನು ತಯಾರಿಸುತ್ತದೆ ಮತ್ತು ಡಿಸ್ನಿ ಥೀಮ್ ಪಾರ್ಕುಗಳು ಮತ್ತು ಟಿವಿ ಚಾನೆಲ್ಗಳನ್ನು ಹೊಂದಿದೆ.

 

ಎಚ್ .ಪಿ ಕಂಪನಿ

 

 

ಪ್ಯಾಕರ್ಡ್ ಗ್ಯಾರೇಜ್ನಲ್ಲಿ $ 538 ಆರಂಭಿಕ ಹೂಡಿಕೆಯೊಂದಿಗೆ ಕೆಲವು ರೀತಿಯ ಅಳತೆಯ ಸಲಕರಣೆಗಳ ತಯಾರಕರಾಗಿ ಕಂಪನಿಯು ಮೊದಲು ವಿನ್ಯಾಸಗೊಳಿಸಲ್ಪಟ್ಟಿತು. ಹೆವ್ಲೆಟ್-ಪ್ಯಾಕರ್ಡ್ನ ಮೊದಲ ಗ್ರಾಹಕರಲ್ಲಿ ಒಬ್ಬರು ವಾಲ್ಟ್ ಡಿಸ್ನಿ ಕಂಪೆನಿಯವರು ಪ್ರಸ್ತುತ, ವಿಶ್ವದ ಜನಪ್ರಿಯ ಕಂಪ್ಯೂಟರ್ ಸಾಧನ ತಯಾರಕರ ಪೈಕಿ ಹೆವ್ಲೆಟ್-ಪ್ಯಾಕರ್ಡ್ ಕೂಡಾ ಒಬ್ಬರು .

 

ಗೂಗಲ್

 

 

ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಒಮ್ಮೆ ಸ್ಟ್ಯಾನ್ಫೋರ್ಡ್ನನ ಇಬ್ಬರು ಪದವೀಧರರ ಸಂಶೋಧನಾ ಯೋಜನೆಯಾಗಿತ್ತು. ಇಂದು, ಗೂಗಲ್ ವೈಜ್ಞಾನಿಕ ಕೆಲಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು (ಎಮರ್ಜಿಂಗ್ ಟೆಕ್ನಾಲಜೀಸ್), ಮಾನವಹಿತ ವಾಹನಗಳು(ಉನ್ಮನ್ನೆಡ್ ವೆಹಿಕಲ್ಸ್), ವರ್ಧಿತ ವಾಸ್ತವತೆ (ಆಗ್ಮಎಂಟೆಡ್ ರಿಯಾಲಿಟಿ), ಆರಂಭಿಕ ರೋಗ ಪತ್ತೆ(ಅರ್ಲಿ ಡಿಸೀಸ್ ಡಿಟೆಕ್ಷನ್), ಮತ್ತು ನಿಸ್ತಂತು ಇಂಟರ್ನೆಟ್(ವಯರ್ಲೆಸ್ ಇಂಟರ್ನೆಟ್) ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ .

ಹಾರ್ಲೆ ಡೇವಿಡ್ಸನ್

 

 

ವಿಲಿಯಮ್ ಎಸ್ . ಹಾರ್ಲೆ ಮತ್ತು ಅವರ ಬಾಲ್ಯದ ಸ್ನೇಹಿತ ಆರ್ಥರ್ ಡೇವಿಡ್ಸನ್ ತಮ್ಮ ಬೈಸಿಕಲ್ ಬಳಸಿ ಮರದ ಕೊಠಡಿ ಒಂದರಲ್ಲಿ ಪ್ರಯೋಗ ಮಾಡೋಕೆ ಶುರು ಹಚ್ಚಿದ್ದರು , ಸೈಕಲ್ ಗೆ ಚಿಕ್ಕ ಎಂಜಿನ್ ಜೋಡಿಸಿ ತಮ್ಮ ಮೊಟ್ಟಮೊದಲ ಮೋಟಾರ್ ಬೈಸಿಕಲ್ ತಯಾರಿ ಮಾಡಿದ್ರು , ಆದ್ರೆ ಮುಂದೆ ಹೀಗೆ ಬೆಳಿತಾ ಬೆಳಿತಾ ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಬೈಕ್ ಆಗುತ್ತೆ ಅಂತ ಅನ್ಕೊಂಡೆ ಇರಲಿಲ್ಲ .

 

ಮೈಕ್ರೋ ಸಾಫ್ಟ್

 

ಸಹ-ಸಂಸ್ಥಾಪಕರು ಬಿಲ್ ಗೇಟ್ಸ್ ಮತ್ತು ಪೌಲ್ ಅಲೆನ್ ಸೇರಿದಂತೆ ಕೇವಲ ಮೂರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ತಂಡವು ಒಳಗೊಂಡಿತ್ತು. ಇಂದು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಮೈಕ್ರೋಸಾಫ್ಟ್ ನಲ್ಲಿ 120,000 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಬಿಲ್ ಗೇಟ್ಸ್ ಯುಎಸ್ ಸಂಪತ್ತಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಮತ್ತು ಫೋರ್ಬ್ಸ್ ಪಟ್ಟಿಯ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹಲವು ಬಾರಿ ಹೊರಹೊಮ್ಮಿದ್ದಾರೆ .

 

ಮಟ್ಟೆಲ್

 

 

1945 ರಲ್ಲಿ, ದಂಪತಿಗಳು ಫೋಟೋ ಫ್ರೇಮ್ಗಳನ್ನು ತಯಾರಿಸಿಸುತ್ತಿದ್ದರು ಆನಂತರ ಗೊಂಬೆಗಳನ್ನು ತಯಾರಿಸಿ ಮಾರಲು ಮುಂದಾದರು ಇದಕ್ಕೆ ತಮ್ಮ ಮಗಳು – ಬಾರ್ಬೀ ಹೆಸರನ್ನೇ ಇಟ್ಟಿದ್ದರು ಆದರೆ ಇಗಾ ಇದು ವಿಶ್ವದಲ್ಲೇ ಅತಿ ದೊಡ್ಡ ಆಟಿಕೆ ಉತ್ಪಾದಿಸುವ ಕಂಪನಿಗಳಲ್ಲಿ ಒಂದಾಗಿದೆ.

ನೈಕ್

 

 

ಅಥ್ಲೆಟಿಕ್ ವಿದ್ಯಾರ್ಥಿ ಮತ್ತು ಅವರ ತರಬೇತುದಾರರು ‘ಬ್ಲೂ ರಿಬ್ಬನ್ ಸ್ಪೋರ್ಟ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು ,ಮೊದಲೇ ಜಪಾನಿನ ಶೂ ಬ್ರ್ಯಾಂಡ್ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಣ್ಣ ಕಂಪನಿ ಇದಾಗಿತ್ತು 1971 ರಲ್ಲಿ ಅಧಿಕೃತವಾಗಿ ನೈಕ್ ಸಂಸ್ಥೆಯಾಗಿ ಮಾರ್ಪಟ್ಟಿತು.

ಫ್ಲಿಪ್ಕಾರ್ಟ್

 

 

ಈಗ ಬಿಲಿಯನ್ ಡಾಲರ್ ಇ-ಕಾಮರ್ಸ್ ಕಂಪೆನಿಯಾದ ಫ್ಲಿಪ್ಕಾರ್ಟ್ 2007 ರಲ್ಲಿ ಕೇವಲ ಆನ್ಲೈನ್ ​​ಬುಕ್ ಆರ್ಡರ್ ವೆಬ್ಸೈಟ್ನಂತೆ ಪ್ರಾರಂಭವಾಯಿತು, ಮೊದಲಿಗೆ ಕೇವಲ ಬುಕ್ ಮಾರಾಟ ಮಾಡಲಾಗುತ್ತಿತ್ತು ,ಸಚಿನ್ ಮತ್ತು ಬಿನ್ನಿ ಬನ್ಸಾಲ್ ಇಬ್ಬರು ಇದಕ್ಕೂ ಮುನ್ನ ಅಮೆಜಾನ್ ನಲ್ಲಿಒಂದೇ ತಂಡದಲ್ಲಿ ಕೆಲಸ ಮಾಡುತ್ತಿದ್ದರು, ಇಬ್ಬರೂ 2 ಲಕ್ಷ ರೂ. ಹೊಂಚಿ ಪೋಷಕರಿಂದ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಪಡೆದು 18 ತಿಂಗಳುಗಳ ಕಾಲ ಹಗಲು ರಾತ್ರಿ ಕಷ್ಟ ಪಟ್ಟು ದುಡಿದರು , ಕೋರಮಂಗಲದಲ್ಲಿನ ಎರಡು ಬೆಡ್ ರೂಮ್ ಇರುವ ಮನೆ ಬಾಡಿಗೆ ಪಡೆದು ಶುರು ಮಾಡಿದ್ದ ಬಿಸಿನೆಸ್ ಇಂದು ಮೂರು ಕಟ್ಟಡಗಳಾಗಿ ಬೆಳೆದು ನಿಂತಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top