ಹೆಚ್ಚಿನ

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ ಅದು ಹೆಣ್ಣಿನ ತಪ್ಪಲ್ಲ ,ಇಲ್ಲಿದೆ ನೋಡಿ ಅದರ ಅಸಲಿ ಕಾರಣ,ತಿಳ್ಕೊಳ್ಳಿ.

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ ಅದು ಹೆಣ್ಣಿನ ತಪ್ಪಲ್ಲ ,ಇಲ್ಲಿದೆ ನೋಡಿ ಅದರ ಅಸಲಿ

ಕಾರಣ,ತಿಳ್ಕೊಳ್ಳಿ.

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದಕ್ಕೆ ಅಧ್ಯಯನಗಳ ಪ್ರಕಾರ ಈ ಐದು ಕಾರಣಗಳು ಇಲ್ಲಿವೆ. ಅವು ಏನೆಂಬುದನ್ನು ನೀವು ತಿಳಿದುಕೊಳ್ಳಿ

 

 

ಜಗತ್ತಿನಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಯಾರೋ ಒಬ್ಬರ ಮೇಲೆ ದ್ವೇಷ ಇರುತ್ತದೆ. ಅವರನ್ನು ನೋಡಿದರೆ ಅಸೂಯೆ ಉಂಟಾಗುತ್ತದೆ. ಆದರೆ ಒಬ್ಬ ಪುರುಷನನ್ನು ನೋಡಿದರೆ , ಇನ್ನೊಬ್ಬ ಪುರುಷನಿಗೆ ಅಸೂಯೆಗಿಂತಲೂ ಒಬ್ಬ ಸ್ತ್ರೀಯನ್ನು ನೋಡಿದರೆ ಮತ್ತೊಬ್ಬ ಸ್ತ್ರೀಗೆ ಉಂಟಾಗುವ ಅಸೂಯೆಯ ಪ್ರಭಾವ ಹೆಚ್ಚಾಗಿ ಇರುತ್ತದೆ. ಹಾಗೆಂದು ಕೆಲವು ಅಧ್ಯಯನಗಳು ಹೇಳುತ್ತಿವೆ. ಆದರೆ ನಿಜವಾಗಿಯೂ ಈ ರೀತಿ ಒಬ್ಬ ಮಹಿಳೆಯನ್ನು ನೋಡಿ ಇನ್ನೊಬ್ಬ ಮಹಿಳೆಗೆ ದ್ವೇಷ ಅಸೂಯೆ ಯಾಕೆ ? ಉಂಟಾಗುತ್ತದೆ ಎಂದು ನಿಮಗೆ ಗೊತ್ತಾ ? ಅದಕ್ಕೆ ಹಲವು ಕಾರಣಗಳಿವೆ ಅವೇನೆಂದರೆ..

 

 

1.ಒಬ್ಬ ಮಹಿಳೆಯನ್ನು ನೋಡಿ ಇನ್ನೊಬ್ಬ ಮಹಿಳೆ ಅಸೂಯೆಯಾಗಿ ಯಾಕೆ ಇರುತ್ತಾಳೆ ? ಎಂದರೆ ಅದು ಅವರ ತಪ್ಪಲ್ಲ ಅವರಲ್ಲಿರುವ ಹಾರ್ಮೋನ್ಗಳು ಆ ಕೆಲಸ ಮಾಡುತ್ತವೆ. ಅವು ಅವರ ಮನಸ್ಸನ್ನು ಬದಲಾಯಿಸುತ್ತವೆ. ಇದರಿಂದ ಸಹಜವಾಗಿ ಬೇರೆ ಸ್ತ್ರೀಯರ ಬಗ್ಗೆ ಇನ್ನೊಬ್ಬ ಸ್ತ್ರೀಗೆ ದ್ವೇಷ ಉಂಟಾಗುತ್ತದೆ .

2.ಪುರುಷರ ಜೊತೆಗೆ ಹೆಚ್ಚಾಗಿ ಹೊಂದಿಕೊಂಡು ಹೋಗುವ ಮಹಿಳೆಯರನ್ನು ನೋಡಿದರೆ, ಇನ್ನೊಬ್ಬ ಮಹಿಳೆಗೆ ಅಸೂಯೆ ಉಂಟಾಗುತ್ತದೆ. ಅದೂ ಸಹ ಹಾರ್ಮೋನ್ ಪ್ರಭಾವವೇ. ತಮಗೆ ಅಂತಹ ಸೌಲಭ್ಯ ಸಿಗಲಿಲ್ಲ, ಎಂಬ ಭಾವನೆ ಅವರ ಮನಸ್ಸಿನಲ್ಲಿ ಇರುತ್ತದೆ. ಅದು ಅವರಿಗೇ ಗೊತ್ತಿರುವುದಿಲ್ಲ. ಆದರೆ ಅದು ಅಸೂಯೆಯ ರೂಪದಲ್ಲಿ ಹೊರಗೆ ಬರುತ್ತದೆ .

3.ಒಬ್ಬ ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆಗೆ ದ್ವೇಷ ಉಂಟಾಗಲು ಕಾರಣ ಅವರಲ್ಲಿರುವ ಈಸ್ಟ್ರೋಜನ್ ಎಂಬ ಹಾರ್ಮೋನ್. ತಿಂಗಳ ಮುಟ್ಟಿನ ಸಮಯದಲ್ಲಿ ಇದು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇದರಿಂದ ಆ ಸಮಯದಲ್ಲಿ ಮತ್ತಷ್ಟು ದ್ವೇಷದಿಂದ ಇರುತ್ತಾರೆ. ಇದನ್ನು ಪ್ರಯೋಗಗಳ ಮೂಲಕ ನಿರೂಪಿಸಿದ್ದಾರೆ ಕೂಡ .

4.ಒಬ್ಬ ಮಹಿಳೆಯ ಸೌಂದರ್ಯ, ಹಣದಂತಹ ವಿಚಾರಗಳು ಸಹ ಇತರೆ ಮಹಿಳೆಯರಿಗೆ ಅವರ ಮೇಲೆ ಅಸೂಯೆ ಉಂಟಾಗಲು ಕಾರಣವಾಗುತ್ತವೆ.

5.ಮೇಲೆ ಹೇಳಿದ್ದಷ್ಟೇ ಅಲ್ಲದೆ, ಇತರೆ ಮಹಿಳೆಯರಿಗೂ ತಮ್ಮ ತಮ್ಮ ಮನೆಗಳಲ್ಲಿ ಲಭಿಸುವ ಸೌಲಭ್ಯಗಳು, ಗಂಡನ ಬೆಂಬಲ, ಒಳ್ಳೆಯ ಮಕ್ಕಳು, ಕುಟುಂಬ ಸದಸ್ಯರು, ಸೌಖ್ಯದಂತಹ ಅನೇಕ ಅಂಶಗಳು ಸಹ ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಮೇಲೆ ಅಸೂಯೆ ಉಂಟಾಗಲು ಕಾರಣವಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top