ಭವಿಷ್ಯ

ಮೇ 9ನೇ ತಾರೀಖು ಬುಧ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದೆ ಇದರಿಂದ ಯಾವ ಯಾವ ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ನೋಡಿ .

ಮೇ 9ನೇ ತಾರೀಖು ಬುಧ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದೆ ಇದರಿಂದ ಯಾವ ಯಾವ ರಾಶಿಗಳ ಮೇಲೆ

ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ನೋಡಿ  .

 

 

ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಒಬ್ಬ ಯುವರಾಜ ಗ್ರಹ ಎಂದು ಪರಿಗಣಿಸಲಾಗಿದೆ. ಯಾವಾಗ ಬುಧ ಗ್ರಹವು ಶುಭ ಗ್ರಹಗಳ ಸಂಪರ್ಕಕ್ಕೆ ಬಂದಾಗ ಬುಧನು  ನಮಗೆ ಉತ್ತಮವಾದ ಫಲವನ್ನೇ ನೀಡುತ್ತಾನೆ. ಆದರೆ ಕ್ರೂರ ಗ್ರಹಗಳ ಜೊತೆಗೆ ಇರುವುದರಿಂದ ಬುಧ ಗ್ರಹವು ನಮಗೆ ಕಷ್ಟದ ಫಲವನ್ನು ನೀಡುತ್ತಾನೆ. ಬುಧ ಗ್ರಹವು ಬುದ್ಧಿ, ಮಾತು, ಗಣಿತ, ವ್ಯಾಪಾರ ಮತ್ತು ಬರಹಕ್ಕೆ ಕಾರಕನು ಎಂದು ಪರಿಗಣಿಸಲಾಗಿದೆ. ಬುಧ ಗ್ರಹದ ಶಾಂತಿಗೆ ಪ್ರತ್ಯೇಕವಾಗಿ ಅಮಾವಾಸ್ಯೆಯ ದಿನ ವ್ರತ ಮಾಡಿ ಮತ್ತು ಹಸಿರು ರತ್ನವನ್ನು ಧಾರಣೆ ಮಾಡಬೇಕು .

ಬುಧ ಗ್ರಹವು ಮೇ ತಿಂಗಳು 2018  ಒಂಬತ್ತನೇ ತಾರೀಖಿನಂದು ಬುಧವಾರದ ದಿನ ಸಂಜೆ ಐದು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ ಮತ್ತು ಇದೇ ಮೇ ತಿಂಗಳ 26 ತಾರೀಕಿನವರೆಗೂ ಬುಧಗ್ರಹವು ಮೇಷ ರಾಶಿಯಲ್ಲಿ ಇರುತ್ತದೆ ನಂತರ ವೃಷಭ ರಾಶಿಗೆ 27 ನೇ ತಾರೀಖಿನಂದು ಪ್ರವೇಶ ಮಾಡಲಿದ್ದಾನೆ. ಬನ್ನಿ ಬುಧನ ಈ ಗೋಚಾರದ ಕಾರಣದಿಂದಾಗಿ ಯಾವೆಲ್ಲಾ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ನೋಡೋಣ.

ಮೇಷ ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಲ್ಲಿ ಪ್ರಥಮ ಭಾವದಲ್ಲಿ ಗೋಚರವಾಗಲಿದ್ದಾನೆ. ಈ ಕಾರಣದಿಂದ ಮೇಷ ರಾಶಿಯ ಜಾತಕದವರ ಸ್ವಭಾವದ ಮೇಲೆ ಬುಧ ಗ್ರಹದ ಪ್ರಭಾವ ಇರುತ್ತದೆ. ನೀವು ಮಾತನಾಡುವ ಶೈಲಿಯಲ್ಲಿ ಹೊಸ ಹುರುಪು ಬರಲಿದೆ. ನಿಮ್ಮ ಸೋಮಾರಿತನ, ನಿರ್ಲಕ್ಷ್ಯದ ಕಾರಣದಿಂದಾಗಿ ಕಠಿಣವಾದ ಭಾಷೆಯಲ್ಲಿ ಮಾತನಾಡುತ್ತೀರ, ಇದೇ ಕಠಿಣ ಸಮಯದಲ್ಲಿ ಸಹೋದರ ಸಹೋದರಿಯರ ಸಂಯೋಗ ಪ್ರಾಪ್ತಿಯಾಗುತ್ತದೆ. ಆರೋಗ್ಯಕ್ಕೆ   ಸಂಬಂಧಪಟ್ಟಂತೆ  ನಿಮಗೆ ಶಾರೀರಿಕವಾದ ಸಮಸ್ಯೆಗಳು ಉಂಟಾಗಬಹುದು. ಕಾಯಿಲೆಗಳು ಆಹ್ವಾನವಾಗುವ ಸಂಭವ ಇದೆ. ವಿವಾಹಿತರಾಗಿದ್ದಲ್ಲಿ ಜೀವನ ಸಂಗಾತಿಯ ಜೊತೆಗೆ ಜಗಳ, ವೈಮನಸ್ಯ ಉಂಟಾಗುತ್ತದೆ. ಬುಧನ ಕೃಪೆಯಿಂದ  ನಿಮ್ಮ ಭೌತಿಕ ಸ್ಥಾನವೂ ಹೆಚ್ಚಾಗುವ ಸಂಭವ ಇದೆ. ನಿಮ್ಮ ಮಾತು ಕೂಡ ಹಾಸ್ಯ ಪೂರ್ಣವಾಗಿರುತ್ತದೆ. ಈ ಸಮಯದ ಸಂಪೂರ್ಣ ಆನಂದವನ್ನು ಪಡೆದುಕೊಳ್ಳುತ್ತೀರಿ.

ಪರಿಹಾರ – ಮಂಗಳ ಮುಖಿಯರಿಂದ  ಆಶೀರ್ವಾದವನ್ನು ಪಡೆದುಕೊಳ್ಳಿ. ಇದು ನಿಮಗೆ ಶುಭ ದಾಯಕವಾಗಲಿದೆ.

ವೃಷಭ ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಿಂದ  ಹನ್ನೆರಡನೇ ಭಾವದಲ್ಲಿ ಗೋಚರವಾಗಲಿದ್ದಾನೆ. ನಿಮ್ಮ ಖರ್ಚು ಹೆಚ್ಚಾಗಲಿದೆ. ವಿದೇಶ ಯಾತ್ರೆಗೆ ಹೋಗುವ ಸಂಭವ ಇದೆ. ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆಯುವುದಕ್ಕೋಸ್ಕರ ವಿದೇಶಕ್ಕೆ ಹೋಗಬಹುದು. ನಿಮ್ಮ ಧ್ಯಾನ ಶಕ್ತಿಯನ್ನು ಹೆಚ್ಚಿಸಲು ಪ್ರಾಣಾಯಾಮ ಮಾಡಿ.ಮೇ ಮತ್ತು ಜೂನ್ ತಿಂಗಳ ಮಧ್ಯದಲ್ಲಿ ನೀವು ಮಾತನಾಡುವ ಶೈಲಿಯಲ್ಲಿ ಸುಧಾರಣೆಯಾಗಲಿದೆ. ಪ್ರಾರಂಭದಲ್ಲಿ ನಿಮಗೆ ಶಾರೀರಿಕ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ. ಆದರೆ ಮೇ ತಿಂಗಳಿನ ಮಧ್ಯದಲ್ಲಿ ಆರೋಗ್ಯದಲ್ಲಿ ಲಾಭ  ದೊರೆಯಲಿದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದರಿಂದ ನೀವು ಹಿಂದಿನ ಸಾಲವನ್ನು ತೀರಿಸಿಕೊಳ್ಳುತ್ತೀರ.ನೀವು ನಿಮ್ಮ ಮನೆಯನ್ನು ಬದಲಾವಣೆ ಮಾಡುವ ಸಂಭವ ಇದೆ. ಈ ಗೋಚಾರದ ಪ್ರಭಾವದ ಕಾರಣದಿಂದ ನಿಮ್ಮ ವಿರೋಧಿಗಳ ಮೇಲೆ ನೀವು ಕೋಪ ಮಾಡಿಕೊಳ್ಳುತ್ತೀರ.

ಪರಿಹಾರ – ಕಪ್ಪು ಬಣ್ಣದ ನಾಯಿಗೆ ರೊಟ್ಟಿಯನ್ನು ತಿನ್ನಿಸಿ.

ಮಿಥುನ ರಾಶಿ.

 

ಬುಧಗ್ರಹವು ನಿಮ್ಮ ರಾಶಿಯಿಂದ ಹನ್ನೊಂದನೇ ಭಾವದಲ್ಲಿ ಗೋಚರವಾಗಲಿದೆ. ಆದಾಯದಲ್ಲಿ ವೃದ್ಧಿಯಾಗಲಿದೆ. ವ್ಯಾಪಾರ ವ್ಯವಹಾರವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ನಿಮ್ಮ ಮನಸ್ಸಿನಲ್ಲಿ ಹೊಸ ವಿಚಾರಗಳ ಮೂಡುತ್ತವೆ. ಪ್ರೇಮ ಜೀವನದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ಸಂಬಂಧಗಳು ಮಧುರವಾಗುತ್ತದೆ. ನಿಜ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮೇ  ಹತ್ತನೇ ತಾರೀಕಿನ ನಂತರ ಸುಧಾರಣೆಯಾಗುತ್ತದೆ. ನೀವು ಗೊಂದಲಕ್ಕೆ ಒಳಗಾಗಿ ಯಾವುದಕ್ಕೂ ಕೂಡ ಸಹಿ ಮಾಡಬೇಡಿ . ಸಾಮಾಜಿಕವಾಗಿ ಆನಂದ ಪ್ರಾಪ್ತಿಯಾಗುತ್ತದೆ. ಮಿತ್ರ ಮತ್ತು ಪರಿಚಯ ವೃಂದದವರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಾ. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಒಳ್ಳೆಯ ಸಮಯ ದೊರೆಯಲಿದೆ. ವೃತ್ತಿಯಲ್ಲಿ ಹಿರಿಯ  ಸಹೋದ್ಯೋಗಿಗಳ ಜೊತೆ ಹೊಂದಿಕೊಂಡು ಹೋಗಬೇಕು. ಸಹೋದರ ಸಹೋದರಿಯರ ಆಶೀರ್ವಾದ ನಿಮಗೆ ದೊರೆಯಲಿದೆ.ಕೆಲಸದ ನಿಮ್ಮಿತ್ತ ದೂರ ಪ್ರಯಾಣ ಮಾಡುತ್ತೀರ.

ಪರಿಹಾರ – ಬುಧವಾರದ ದಿನ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ

ಕಟಕ ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಿಂದ ಹತ್ತನೇ ಭಾವದಲ್ಲಿ ಗೋಚರವಾಗಲಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹಾಯ ದೊರೆಯಲಿದೆ. ಕೆಲಸಗಳಲ್ಲಿ ವೃತ್ತಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ವಿದೇಶದಲ್ಲಿ ಸಂಬಂಧಗಳು ಇನ್ನೂ ಹೆಚ್ಚು ಗಟ್ಟಿಯಾಗಲಿದೆ. ನೀವು ಮಾತನಾಡುವ ಭಾಷೆಯಲ್ಲಿ ಸಂಯಮಅವನ್ನು ಕಾಯ್ದಿರಿಸಿಕೊಳ್ಳಿ ಮತ್ತು ಆದಷ್ಟು ಸಮಾಧಾನದಿಂದ ಇರಿ. ಪ್ರೀತಿ ವಾತ್ಸಲ್ಯದಿಂದ ಮಾತನಾಡಬೇಕು. ಇಲ್ಲವೆಂದರೆ ವೃತ್ತಿಯ ಸ್ಥಳದಲ್ಲಿ ನೀವು ಯಾರ ಜೊತೆಗಾದರೂ ಜಗಳ ಉಂಟಾಗಬಹುದು.ಮೇ  ಹತ್ತನೇ ತಾರೀಕಿನ ನಂತರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಪ್ರಯತ್ನದಿಂದ ನಿಮ್ಮ ಆಸೆಗಳು ಈಡೇರುತ್ತವೆ. ನೀವು ಹೊಸ ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ವಿಚಾರ ಮಾಡುತ್ತೀರ.ವ್ಯಾಪಾರ ಮಾಡಲು ಬಂಡವಾಳ ಹೂಡಿಕೆ ಹಾಕುತ್ತೀರ.

ಪರಿಹಾರ – ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ.

ಸಿಂಹ ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಿಂದ ಒಂಬತ್ತನೇ ಭಾವದಲ್ಲಿ ಗೋಚರವಾಗಲಿದೆ. ಈ ಗೋಚಾರದ ಪ್ರಭಾವದಿಂದ ನಿಮ್ಮ ಆದಾಯವೂ ಹೆಚ್ಚಾಗಲಿದೆ. ನೀವು ಹಿರಿಯ ಸಹೋದರ ಸಹೋದರಿಯರಿಂದ ನಿಮಗೆ ಆರ್ಥಿಕ ಲಾಭವೂ ದೊರೆಯಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ನಿಮ್ಮ ಹಿತೈಷಿಗಳಾಗುತ್ತಾರೆ. ಸಮಾಜದಲ್ಲಿ  ಮಾನ ಸಮ್ಮಾನ ಗೌರವಗಳು ಹೆಚ್ಚಾಗುತ್ತವೆ. ದಾನ ಮಾಡುವುದರಿಂದ ನಿಮಗೆ ಮಾನಸಿಕ ಶಾಂತಿ ದೊರೆಯಲಿದೆ. ನಿಮ್ಮ ತಂದೆಯ ಜತೆಗೆ ಸಂಬಂಧಗಳು ಬೇರ್ಪಡುತ್ತವೆ. ಆದರೆ ಜೂನ್ ಮೂರನೇ ತಾರೀಕಿನ ನಂತರ ನಿಮ್ಮ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ. ಪವಿತ್ರ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.

ಪರಿಹಾರ – ಭೈರವ ದೇವರ ಉಪಾಸನೆಯನ್ನು ಮಾಡಿ.

ಕನ್ಯಾ ರಾಶಿ.

 

ಬುಧ  ನಿಮ್ಮ ರಾಶಿಯಿಂದ ಎಂಟನೆ ಭಾವದಲ್ಲಿ ಗೋಚರವಾಗಲಿದೆ. ಇದರ ಪ್ರಭಾವದಿಂದ ನಿಮ್ಮ ಆರೋಗ್ಯದಲ್ಲಿ ಕುಂಠಿತವಾಗಲಿದೆ, ಏರುಪೇರು ಉಂಟಾಗಬಹುದು. ನಿಮಗೆ  ಚರ್ಮಕ್ಕೆ ಸಂಬಂಧಪಟ್ಟ ರೋಗ ಉಂಟಾಗಬಹುದು. ನಿಮ್ಮ ವೃತ್ತಿಯಲ್ಲಿ ಏರಿಳಿತಗಳು ಉಂಟಾಗುತ್ತವೆ. ವಿಜ್ಞಾನಕ್ಕೆ  ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಲಾಭವಾಗುತ್ತದೆ. ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿಯನ್ನು ಮಾಡುತ್ತಾರೆ. ನೀವು ಹೆಚ್ಚಾಗಿ ಈ ಸಮಯದಲ್ಲಿ ಸಮಾಧಾನದಿಂದ ವರ್ತಿಸಬೇಕು. ನಿಮ್ಮ ಖರ್ಚು ಹೆಚ್ಚಾಗುವ ಸಂಭವ ಇದೆ. ನಿಮ್ಮ ಜೀವನ ಸಂಗಾತಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಆದಷ್ಟು ವಿವಾದಗಳಿಂದ ದೂರವಿರಿ. ನಿಮಗೆ ಹೆಚ್ಚಿನ ಸಂಪತ್ತು ಪ್ರಾಪ್ತಿಯಾಗಲಿದೆ.

ಪರಿಹಾರ – ವಿಷ್ಣು ಸಹಸ್ರ ನಾಮವನ್ನು ಪಾರಾಯಣ ಮಾಡಿ.

ತುಲಾ ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಿಂದ ಏಳನೇ ಭಾಗದಲ್ಲಿ ಗೋಚರವಾಗಲಿದೆ. ಇದರ ಪರಿಣಾಮ ಸ್ವರೂಪವಾಗಿ ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ . ವಿದೇಶದಲ್ಲಿ ನೆಲೆಸುವ ವಿಚಾರವನ್ನು ಮಾಡುತ್ತೀರ. ವೃತ್ತಿಗೆ ಸಂಬಂಧಪಟ್ಟಂತೆ ನಿಮ್ಮ ಸಮಯ ಬಹಳ ಚೆನ್ನಾಗಿದೆ. ಜೀವನ ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳುವ  ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳು ನಿಮ್ಮ ಜೀವನ ಸಂಗಾತಿಗೆ ಕಾಣಿಸಿಕೊಳ್ಳುವ ಸಂಭವ ಇದೆ. ನಿಮ್ಮ ವ್ಯಾಪಾರದಲ್ಲಿ ನಿಮಗೆ ಲಾಭ ಉಂಟಾಗಲಿದೆ. ನಿಮ್ಮ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಮೇ ತಿಂಗಳಿನ ಮಧ್ಯದಲ್ಲಿ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ವಾದ ವಿವಾದಗಳಿಂದ ಆದಷ್ಟು ದೂರವಿರಿ.

ಪರಿಹಾರ  – ನಿಮ್ಮ ಪರಿವಾರದಲ್ಲಿರುವ ಕುಟುಂಬಸ್ಥ ಮಹಿಳೆಯರಿಗೆ ಅನ್ನ ಆಹಾರವನ್ನು ವಿತರಿಸಿ.

ವೃಶ್ಚಿಕ ರಾಶಿ .

 

ಬುಧಗ್ರಹವು ನಿಮ್ಮ ರಾಶಿಯಿಂದ ಆರನೇ ಭಾವದಲ್ಲಿ ಗೋಚಾರವಾಗಲಿದೆ. ಈ ಕಾರಣದಿಂದ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುತ್ತೀರ. ಇದರಿಂದ ನಿಮಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ನಿಮ್ಮ ಖರ್ಚು ಹೆಚ್ಚಾಗಲಿದೆ. ನೀವು ಯಾವುದೋ ಒಂದು ಕಾಯಿಲೆಯಿಂದ ಅನೇಕ ದಿನಗಳಿಂದ ನರಳುತ್ತಿದ್ದರೆ ಅದರಿಂದ ಮುಕ್ತಿ ಹೊಂದುತ್ತೀರಿ. ತಕ್ಷಣ ನೀವು ಯಾವುದೋ ಯಾತ್ರೆಗೆ ಅಕಸ್ಮಾತಾಗಿ ತೆರಳುವ ಸಂದರ್ಭ ಬರಲಿದೆ.ಹಿರಿಯ   ಸಹೋದರ ಸಹೋದರಿಯರ ಜೊತೆಗೆ ಭಿನಾಭಿಪ್ರಾಯಗಳು ನೀಡಲಿದೆ. ಮಹಿಳೆಯರ ಜೊತೆಗೆ ನೀವು ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಬೇಕು. ವಿವಾಹಿತರ ಜೀವನದಲ್ಲಿ ಸುಧಾರಣೆಯೂ ಕಂಡು ಬರುತ್ತದೆ. ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ನ ಮೊದಲು ಯೋಚಿಸಿ. ನಂತರ ನಿರ್ಧಾರ ಕೈಗೊಳ್ಳಿ.

ಪರಿಹಾರ – ಬುಧವಾರದ ದಿನ ಹೆಸರು ಕಾಳನ್ನು ಗೋಶಾಲೆಯಲ್ಲಿ ದಾನ ವಾಡಿ .

ಧನಸ್ಸು ರಾಶಿ.

 

ಬುಧ ಗ್ರಹವು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಗೋಚರವಾಗಲಿದ್ದಾನೆ. ಇದರ ಪ್ರಭಾವದಿಂದ ನೀವು ನಿಮ್ಮ ಸಂಗಾತಿಗೆ ಕೊಟ್ಟಿರುವ ಮಾತನ್ನು ಪೂರ್ಣಗೊಳಿಸುತ್ತೀರಿ.ಜೀವನ ಸಂಗಾತಿಯ ಸಹಾಯದಿಂದ ನಿಮಗೆ ಲಾಭವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ. ಉದ್ಯೋಗವನ್ನು ಬದಲಿಸುವ ಬಗ್ಗೆ ನೀವು ಯೋಚನೆ ಮಾಡುತ್ತೀರ. ಪ್ರಾರಂಭದಲ್ಲಿ  ನಿಮ್ಮ ಪ್ರೇಮ ಜೀವನದಲ್ಲಿ ವಾದ ವಿವಾದಗಳು ಉಂಟಾಗುತ್ತವೆ. ನೀವು ಅವಿವಾಹಿತರಾಗಿದ್ದಾರೆ ಮೇ ತಿಂಗಳ ನಂತರ ಮದುವೆಯ ಬಗ್ಗೆ ಯೋಚನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯವಾಗಿದೆ. ಹೊಸ ವಸ್ತುಗಳ ಬಗ್ಗೆ ಆಸಕ್ತಿ ಮೂಡುತ್ತದೆ. ಶಿಕ್ಷಣಕ್ಕೋಸ್ಕರ ಮನೆಯಿಂದ ದೂರ ಹೋಗಲು ಯೋಚಿಸುತ್ತೀರ. ತಂದೆ ತಾಯಿಯರಿಗೆ ಕೂಡ ಲಾಭವಾಗಲಿದೆ.

ಪರಿಹಾರ –  ವಿಷ್ಣು ದೇವಸ್ಥಾನದಲ್ಲಿ ಶುದ್ಧ ಹಸುವಿನ ತುಪ್ಪವನ್ನು ದಾನ ಮಾಡಿ .

ಮಕರ ರಾಶಿ.

 

 

ಬುಧನು ನಿಮ್ಮ ರಾಶಿಯಿಂದ ನಾಲ್ಕನೇ ಭಾವದಲ್ಲಿ ಗೋಚರವಾಗಲಿದೆ. ನಿಮ್ಮ ವಿಚಾರಗಳು ಸಕಾರಾತ್ಮಕ ದೃಷ್ಟಿಯತ್ತ ಸಾಗುತ್ತವೆ . ಸಾಂಸಾರಿಕ ಜೀವನದಿಂದ ನೀವು ಸಂತುಷ್ಟರಾಗುವುದಿಲ್ಲ ಮತ್ತು ಜೀವನದಲ್ಲಿ ಅಧಿಕವಾದ ಕಠಿನ ಪರಿಶ್ರಮವನ್ನು ಮಾಡಬೇಕಾಗುತ್ತದೆ .ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಿ ಆರೋಗ್ಯ ಹದಗೆಡಬಹುದು. ಮನೆಯಲ್ಲಿ ಆಸ್ತಿ ಮತ್ತು ಲೆಕ್ಕಪತ್ರಗಳಿಗೆ ಸಂಬಂಧಪಟ್ಟಂತೆ  ವಿವಾದಗಳು ಉಂಟಾಗುತ್ತವೆ. ಆದ್ದರಿಂದ ಇಂತಹ ವಿವಾದಗಳಿಂದ ಆದಷ್ಟೂ ದೂರವಿರಲು ಪ್ರಯತ್ನಿಸಿ. ಯಾವುದೇ ಕೆಲಸ ಕಾರ್ಯಗಳು ಮಾಡಬೇಕೆಂದರು ತಕ್ಷಣವೇ ಯಾವುದೇ ಯೋಚನೆ ಮಾಡದೆ ನಿರ್ಧಾರಕ್ಕೆ ಬರಬೇಡಿ.

ಪರಿಹಾರ – ಕಪ್ಪು ಬಣ್ಣದ ಹಸುವಿಗೆ ಗೋಧಿಯನ್ನು ತಿನ್ನಿಸಿ.

ಕುಂಭ ರಾಶಿ.

 

ಬುಧನು ನಿಮ್ಮ ರಾಶಿಯಿಂದ ಮೂರನೆಯ ಭಾವದಲ್ಲಿ ಗೋಚರವಾಗುತ್ತಿದೆ. ಈ ಕಾರಣದಿಂದ ನಿಮ್ಮ ತಂದೆ ತಾಯಿಯರ ಆರೋಗ್ಯವೂ ಸ್ವಲ್ಪ ಹದಗೆಡಬಹುದು. ನೀವು ಮಾತನಾಡುವ ಶೈಲಿಯಲ್ಲಿ ಹೊಸ ಹುರುಪು ಬರಲಿದೆ. ನೀವು ಮಾತನಾಡುವ ಶೈಲಿಯಿಂದ ಬೇರೆಯವರನ್ನು ಪ್ರಭಾವಿತಗೊಳಿಸುತ್ತೀರಿ. ಪ್ರೇಮ ಸಂಬಂಧಗಳಿಗೆ ಈ ಸಮಯವು ತುಂಬಾ ಉತ್ತಮವಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಸಮಾಧಾನವಾಗಿರಿ. ಪಟಪಟನೆ ಮಾತನಾಡುವುದರಿಂದ ನಿಮ್ಮ ಮುಖದಲ್ಲಿ ಹೊಸ ಕಾಂತಿ ಹುಮ್ಮಸ್ಸು ಚೈತನ್ಯ ಮೂಡುವುದು. ನಿಮ್ಮ ಕಿರಿಯ ಸಹೋದರ ಅಥವಾ ಸಹೋದರಿಯರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ.

ಪರಿಹಾರ – ನಾಯಿಗಳಿಗೆ ರೊಟ್ಟಿಯನ್ನು ತಿನ್ನಿಸಿ .

ಮೀನ ರಾಶಿ.

 

ಬುಧನು ಮೀನ ರಾಶಿಯಿಂದ ಎರಡನೇ ಭಾವದಲ್ಲಿ ಗೋಚರವಾಗಲಿದೆ. ಇದರ ಪ್ರತ್ಯಕ್ಷ ಪ್ರಭಾವವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ. ಈ ಗೋಚಾರದ ಕಾರಣದಿಂದಾಗಿ ನಿಮ್ಮ ಜೀವನ ಸಂಗಾತಿಯು ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಕೂಡ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ವ್ಯಾಪಾರದಲ್ಲಿ ನಿಮಗೆ ಲಾಭವಾಗುತ್ತದೆ. ಜೀವನ ಸಂಗಾತಿಯ ಆರೋಗ್ಯ ಸ್ವಲ್ಪ ಹದಗೆಡಲಿದೆ . ಆಸ್ತಿಯಿಂದ ನಿಮಗೆ ಆದಾಯ ಹೆಚ್ಚಾಗಲಿದೆ . ಈ ಬುಧನ ಗೋಚರದ ಕಾರಣದಿಂದಾಗಿ ನೀವು ಸ್ವಲ್ಪ ಕೋಪೋದ್ರಿಕ್ತರಾಗುವಿರಿ. ನಿಮ್ಮ ಮಾತು ಬೇರೆಯವರ ಮನಸ್ಸನ್ನು ಘಾಸಿಗೊಳಿಸುತ್ತದೆ, ನೋವುಂಟು ಮಾಡುತ್ತದೆ. ಈ ಮೇ ತಿಂಗಳ ಮಧ್ಯದಲ್ಲಿ ನಿಮ್ಮ ಸ್ಥಿತಿಯೂ ಸುಧಾರಿಸುತ್ತದೆ. ನಿಮ್ಮ ತಾಯಿಯ ಆಶೀರ್ವಾದವೂ ನಿಮಗೆ ದೊರೆಯಲಿದೆ. ಇದರಿಂದ ನೀವು ಜೀವನದಲ್ಲಿ ಯಶಸ್ಸು ಗಳಿಸುತ್ತೀರ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಕೂಡ ನಡೆಯಬಹುದು. ವೃತ್ತಿಯಲ್ಲಿಯೂ ಕೂಡ ಉತ್ತಮ ಸಮಯವಾಗಿದೆ.

ಪರಿಹಾರ –  ಶ್ರೀ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top