ದೇವರು

ಹೊಸದಾಗಿ ಮದುವೆಯಾದ ಹೆಣ್ಮಕ್ಕಳಿಗೆ ಯಾವುದೇ ಕಾರಣಕ್ಕೂ ಗಣೇಶನ ವಿಗ್ರಹ ಅಥವಾ ಮೂರ್ತಿ ಉಡುಗೊರೆಯಾಗಿ ಕೊಡ್ಬೇಡಿ

ನೀವು ನಿಮ್ಮ ಮಗಳ ಮದುವೆಯಲ್ಲಿ ಉಡುಗೊರೆಯಾಗಿ ಎಂದಿಗೂ ಸಹ ಗಣೇಶನ

ವಿಗ್ರಹವನ್ನು ಅಥವಾ ಮೂರ್ತಿಯನ್ನು ನೀಡದಿರಿ. ಅದು ಜೀವನದಲ್ಲಿ ಅನೇಕ

ತೊಂದರೆಗಳಿಗೆ ಕಾರಣವಾಗಬಹುದು.

 

 

 

 

 

 

ಭಾರತದಲ್ಲಿ ಮದುವೆಯೂ ಒಂದು ಸಾಮಾಜಿಕ ಸಂಪ್ರದಾಯವಾಗಿದ್ದು. ಸಾಮಾನ್ಯವಾಗಿ ಎಲ್ಲರನ್ನೂ ಕರೆದು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಮದುವೆಯನ್ನು ಆಚರಿಸಲಾಗುತ್ತದೆ.ಅದು ಬರೀ ಕೇವಲ ಗಂಡು ಮತ್ತು ಹೆಣ್ಣಿನ ಇಬ್ಬರು ವ್ಯಕ್ತಿಗಳಲ್ಲಿ ಇರುವ ಪವಿತ್ರವಾದ ಸಂಬಂಧವಷ್ಟೇ ಅಲ್ಲ . ಇದರ ಜೊತೆಗೆ ಎರಡು ಪರಿವಾರದವರನ್ನು ಸಹ  ಒಂದು ಮಾಡುತ್ತದೆ ಈ ಮದುವೆ.

 

 

 

 

 

 

ಅದೆಷ್ಟೋ ಅನೇಕ ಉಡುಗೊರೆಗಳನ್ನು ಮದುವೆ ಸಮಯದಲ್ಲಿ ಕೊಡಲಾಗುತ್ತದೆ. ಎಲ್ಲ ಪಾಲಕರು ಮತ್ತು ಪೋಷಕರು ಸಹ ತಮ್ಮ ಪುತ್ರಿಯರಿಗೆ ಉತ್ತಮವಾದ ಉಡುಗೊರೆಯನ್ನು ಅವಳ ವೈವಾಹಿಕ ಜೀವನ ಸುಖಮಯವಾಗಿರಲೆಂದು ನೀಡುತ್ತಾರೆ. ಆಭರಣಗಳನ್ನು ಕೊಡುವುದರ ಜತೆಗೆ ದೇವರ ಮೂರ್ತಿಗಳನ್ನು ಮತ್ತು ವಿಗ್ರಹಗಳನ್ನು ಸಹ ನೀಡಲಾಗುತ್ತದೆ. ಅವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

 

 

 

 

 

 

ಇತ್ತೀಚಿನ ಕಾಲದಲ್ಲಿ ಗಣೇಶನ ವಿಗ್ರಹವನ್ನು ಮದುವೆಗಳ ಸಮಯದಲ್ಲಿ ಉಡುಗೊರೆಯಾಗಿ ಕೊಡುವುದು ತುಂಬಾ ಖ್ಯಾತಿಯನ್ನು ಗಳಿಸಿದೆ. ಯಾಕೆಂದರೆ ಗಣೇಶ ದೇವನನ್ನು ಸಮೃದ್ಧಿ ಮತ್ತು ಸಂಪತ್ತಿನ ದೇವನೆಂದು ಹೇಳಲಾಗಿದೆ. ಆದರೆ ಶಾಸ್ತ್ರಗಳ ಹೇಳಿರುವ ಪ್ರಕಾರ ಗಣೇಶನನ್ನು  ಹೊಸದಾಗಿ ಮದುವೆಯಾಗಿರುವವರಿಗೆ ವಧುವಿಗೆ ಉಡುಗೊರೆಯಾಗಿ  ಕೊಡುವುದನ್ನು  ತಡೆಗಟ್ಟಬೇಕು. ಯಾಕೆಂದರೆ  ವಧುವಿನ ಮನೆ ಕಡೆಯವರು ಹಣಕಾಸಿಗೆ ಸಂಬಂಧಪಟ್ಟ  ಸಮೃದ್ಧಿಯನ್ನು ಕಳೆದುಕೊಳ್ಳುತ್ತಾರೆ. ವಧುವಿಗೆ ಗಣೇಶನನ್ನು ಆದ್ದರಿಂದ ಹೊಸದಾಗಿ ಮದುವೆ ಆಗುತ್ತಿರುವ ಹುಡುಗಿಗೆ ಅಥವಾ ಮದುವೆಗೆ ಗಣೇಶನನ್ನು ಎಂದಿಗೂ ಸಹ ಉಡುಗೊರೆಯಾಗಿ ಕೊಡೆ ಬಾರದಂತೆ.

 

 

 

 

 

 

ನಮ್ಮ ಭಾರತದ ಸಂಸ್ಕೃತಿಯ ಪ್ರಕಾರ ಹೊಸದಾಗಿ ಮದುವೆಯಾದ ಹುಡುಗಿಯರನ್ನು ಸಾಕ್ಷಾತ್ ಮನೆಯ ಲಕ್ಷ್ಮೀ  ದೇವಿ ಎಂದೇ ಪರಿಗಣಿಸಲಾಗಿದೆ. ವಿವಿಧ ಧರ್ಮಗ್ರಂಥಗಳ ಪ್ರಕಾರ ಗಣೇಶ ದೇವರನ್ನು ಮತ್ತು ಲಕ್ಷ್ಮೀದೇವಿಯನ್ನು ಜೊತೆಯಾಗಿ ಇಡಲು ಬಯಸುತ್ತಾರೆ .ಆದ್ದರಿಂದ ಅಧಿಕವಾಗಿ ಹೆಣ್ಣಿನ ಮನೆ ಕಡೆಯಿಂದ ಬರುವ ಗಣೇಶನನ್ನು ಹೊಸದಾಗಿ ಮದುವೆಯಾಗಿರುವ ಹುಡುಗಿಗೆ ಕೊಟ್ಟರೆ  ಆರ್ಥಿಕವಾಗಿ ನಷ್ಟವನ್ನು ಅನುಭವಿಸಿ ಎಲ್ಲವನ್ನೂ ಕಳೆದುಕೊಳ್ಳುವ ಸಂಭವವಿದೆ. ಆದ್ದರಿಂದ ಯಾರೂ ಸಹ ಗಣೇಶನನ್ನು ವಧುವಿಗೆ ಉಡುಗೊರೆಯಾಗಿ ಮದುವೆಯ ಸಮಯದಲ್ಲಿ ನೀಡಬೇಡಿ .

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top