ಹೆಚ್ಚಿನ

ಪ್ರಧಾನಿ ಮೋದಿಯನ್ನು ಸ್ನೈಪರ್ ರೈಫಲ್‌ನಲ್ಲಿ ಮುಗಿಸಲು ಐಎಸ್‌ಐ ಉಗ್ರರ ಸಂಚು

ಪ್ರಧಾನಿ ಸ್ಥಾನ ನರೇಂದ್ರ ಮೋದಿ ಅವರು ಹೆಚ್ಚು ಜನಪ್ರಿಯರಾಗುತ್ತಿದ್ದಂತೆ ಅವರ ಮೇಲೆ ಉಗ್ರರ ಕೆಂಗಣ್ಣು ಕೂಡ ಬಿದ್ದಿದೆ. ಇತ್ತೀಚಿಗೆ ಅವರನ್ನು ಹತ್ಯೆ ಮಾಡಲು ಐಎಸ್‌ಐ ಉಗ್ರರು ಸ್ಕೆಚ್ ಹಾಕಿರುವುದು ಬಯಲಾಗಿದೆ ಎಂದು ತಿಳಿದು ಬಂದಿದೆ.

 

 

ಕೆಲವು ದಿನಗಳ ಹಿಂದೆ ಮೆಸೇಜಿಂಗ್ ಆ್ಯಪ್‌ನಲ್ಲಿ ನಡೆದ ಮಾತುಕತೆ ವಿವರಗಳು ಗುಜರಾತ ರಾಜ್ಯದ ಎಟಿಎಸ್‌ಗೆ ಸಿಕ್ಕಿದೆ, ಪಿಎಂ ಮೋದಿ ಅವರಿಗೆ ಎದುರಾಗಿದ್ದ ಅಪಾಯದ ಬಗ್ಗೆ ಬಯಲಾಗಿದೆ. ನರೇಂದ್ರ ಮೋದಿ ಅವರನ್ನು ಸ್ನೈಪರ್ ರೈಫಲ್‌ನಲ್ಲಿ ಹತ್ಯೆ ಮಾಡೋಣ ಎಂದು ಶಂಕಿತ ಐಎಸ್‌ಐ ಉಗ್ರನೊಬ್ಬ ಉಬೈದ್ ಮಿರ್ಜಾ ಮೆಸೇಜ್ ರವಾನಿಸಿದ್ದಾನೆ. ಕಾಸಿಮ್ ಸ್ಟಿಂಬರ್‌ವಾಲಾ ಎಂಬಾತನಿಗೆ ಮಿರ್ಜಾ ಮೆಸೇಜ್ ನೀಡಿದ್ದಾನೆ. ಈ ಸಂಬಂಧ ಸೆಲ್‌ಫೋನ್ ಹಾಗೂ ಪೆನ್‌ಡ್ರೈವ್‌ನಲ್ಲಿರುವ ದಾಖಲೆಗಳನ್ನು ಗುಜರಾತ್ ಎಟಿಎಸ್‌ನವರು ವಶಕ್ಕೆ ಪಡೆದಿದ್ದಾರೆ.

 

ಈ ಹಿನ್ನಲೆಯಲ್ಲಿ ಮೊಬೈಲ್ ಮತ್ತು ಪೆಣ್ ಡ್ರೈವ್ ದಾಖಲೆಗಳನ್ನು ಗುಜರಾತ್ ಎಟಿಎಸ್‌ ತಂಡದವರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಗುಜರಾತ್‌ನ ಅಂಕಲೇಶ್ವರ್‌ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಗುಜರಾತ ರಾಜ್ಯದ ಸೂರತ ನಗರದ ನಿವಾಸಿಗಳಾಗಿರುವ ಉಬೈದ್ ಮಿರ್ಜಾ ಹಾಗೂ ಕಾಸಿಮ್ ಸ್ಟಿಂಬರ್‌ವಾಲಾರನ್ನು ಅಕ್ಟೋಬರ್ 25,2017ರಂದು ಗುಜರಾತ್ ಎಟಿಎಸ್‌ ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top