ಹೆಚ್ಚಿನ

ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳಿದ ಜ್ಯೇಷ್ಠ ಮಾಸದ, ಅಪರ ಏಕಾದಶಿ ವ್ರತದ ಕಥೆ ಕೇಳಿ ಸಕಲ ಪಾಪಗಳು ಮಣ್ಣಲ್ಲಿ ಮಣ್ಣಾಗಿ ಹೋಗುತ್ತೆ .

ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳಿದ ಜ್ಯೇಷ್ಠ ಮಾಸದ, ಅಪರ ಏಕಾದಶಿ ವ್ರತ ಕಥೆ .

ಈ ಬಾರಿ ಅಪರ ಏಕಾದಶಿಯು ಜ್ಯೇಷ್ಠ ಮಾಸದ ಮೇ ತಿಂಗಳ ಹನ್ನೊಂದನೇ ತಾರೀಖಿನಂದು, ಕೃಷ್ಣ ಪಕ್ಷದಲ್ಲಿ ಬಂದಿದೆ. ಯುಧಿಷ್ಠಿರನು ಕೃಷ್ಣನನ್ನು ಕೇಳುತ್ತಾನೆ, ಜ್ಯೇಷ್ಠ ಮಾಸದಲ್ಲಿ ಬರುವ ಏಕಾದಶಿಯ ಹೆಸರೇನು ? ಅದರ ಮಹತ್ವ ಏನೆಂದು ? ಕೇಳುತ್ತಾನೆ.

 

 

ಶ್ರೀ ಕೃಷ್ಣನು ಹೇಳುತ್ತಾನೆ ಯುಧಿಷ್ಠಿರನಿಗೆ “ ಹೇ ರಾಜ, ಜೇಷ್ಠ ಮಾಸದ, ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರ ಏಕಾದಶಿಯಂದು. ಯಾಕೆಂದರೆ ಈ ಏಕಾದಶಿಯು ಅಪಾರ ಧನವನ್ನು ತಂದುಕೊಡುತ್ತದೆ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ಪಾಪಗಳನ್ನು ತೊಳೆದು ಹಾಕುತ್ತದೆ.

ಯಾವ ಮನುಷ್ಯರು ಈ ಏಕಾದಶಿಯ ವ್ರತವನ್ನು ಆಚರಣೆ ಮಾಡುತ್ತಾರೋ, ಅವರಿಗೆ ಈ ಲೋಕದಲ್ಲಿ ಪ್ರಸಿದ್ಧಿ ದೊರೆಯುತ್ತದೆ. ಅಪಾರ ಏಕಾದಶಿಯ ವ್ರತದ ಪ್ರಭಾವದಿಂದ ಬ್ರಹ್ಮಹತ್ಯೆ , ಬೇರೆಯವರನ್ನು ನಿಂದಿಸಿ ಅವರ ಮನಸ್ಸನ್ನು ನೋಯಿಸಿರುವುದು, ಇನ್ನು ಇತ್ಯಾದಿ ಪಾಪಗಳು ನಾಶವಾಗುತ್ತವೆ .

 

 

ಪರ ಸ್ತ್ರೀಯರ ಜೊತೆ ಸುಖವನ್ನು ಹೊಂದಿದ ಪಾಪವೂ ಸಹ ನಾಶವಾಗುತ್ತದೆ.ಸುಳ್ಳು ಮಾತನಾಡುವುದು, ಅಸತ್ಯವನ್ನು ನುಡಿಯುವುದು, ಸುಳ್ಳು ಭಾಷಣಕಾರರು, ಸುಳ್ಳು ಮಂತ್ರೋಪದೇಶವನ್ನು ಹೇಳುವುದು. ಸುಳ್ಳು ಶಾಸ್ತ್ರ, ಸುಳ್ಳು ಜ್ಯೋತಿಷ್ಯ, ಇನ್ನು ಇತ್ಯಾದಿ ಪಾಪಗಳು ನಾಶವಾಗುತ್ತವೆ. ಈ ವ್ರತವನ್ನು ಮಾಡುವುದರಿಂದ ಈ ಎಲ್ಲಾ ಪಾಪಗಳು ಸಹ ಪಾಪಗಳಿಂದಲೂ ಸಹ ಮುಕ್ತಿ ಹೊಂದುತ್ತಾರೆ.

ಯುದ್ಧ ಮಾಡುವಾಗ ಯಾರೂ ಯುದ್ಧಕ್ಕೆ ಹೆದರಿ ಓಡಿ ಹೋಗುತ್ತಾರೋ, ಅವರು ನರಕಕ್ಕೆ ಹೋಗುತ್ತಾರೆ. ಅಂತವರು ಈ ಅಪರ ಏಕಾದಶಿಯ ವ್ರತವನ್ನು ಮಾಡುವುದರಿಂದ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಯಾವ ಶಿಷ್ಯರು ತನ್ನ ಗುರುಗಳಿಂದ ವಿದ್ಯೆಯನ್ನು ಅಂದರೆ ಶಿಕ್ಷಣವನ್ನು ಪಡೆಯುತ್ತಾರೆ, ಪಡೆದ ನಂತರ ಗುರುಗಳನ್ನು ನಿಂದಿಸುತ್ತಾರೆ, ಅಂಥವರು ಅವಶ್ಯವಾಗಿ ನರಕಕ್ಕೆ ಹೋಗುತ್ತಾರೆ. ಅವರು ಕೂಡ ಅಪಾರ ಏಕಾದಶಿಯ ವ್ರತವನ್ನು ಮಾಡುವುದರಿಂದ ಸ್ವರ್ಗಕ್ಕೆ ಹೋಗುತ್ತಾರೆ.

ಈ ಫಲವು ಮೂರು ಪುಷ್ಕರ ನದಿಗಳಲ್ಲಿ ಸ್ನಾನ ಮಾಡುವುದರಿಂದ, ಕಾರ್ತಿಕ ಮಾಸದಲ್ಲಿ ನದಿಗಳಲ್ಲಿ ಸ್ನಾನ ಮಾಡುವುದರಿಂದ ಅಥವಾ ಗಂಗಾ ನದಿಯಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವುದರಿಂದ ಸಿಗುತ್ತದೆ ಇದೇ ರೀತಿಯ ಫಲವು ಅಪರ ಏಕಾದಶಿಯ ವ್ರತವನ್ನು ಮಾಡುವುದರಿಂದ ಸಿಗುತ್ತದೆ.

 

 

ಸಿಂಹ ರಾಶಿಯವರಿಗೆ ಗುರುವಾರದ ದಿನ ಗೋಮತಿ ನದಿಯಲ್ಲಿ ಸ್ನಾನ ಮಾಡುವುದರಿಂದ, ಕುಂಭದಲ್ಲಿ ಶ್ರೀ ಕೇದಾರನಾಥ ಸ್ವಾಮಿಯ ದರ್ಶನ ಮಾಡುವುದರಿಂದ ಮತ್ತು ವರ್ಧನ ಆಶ್ರಮದಲ್ಲಿ ನೆಲೆಸುವುದರಿಂದ ಜೊತೆಗೆ ಸೂರ್ಯ ಚಂದ್ರ ಗ್ರಹಣದ ಸಮಯದಲ್ಲಿ ಗುರು ಕ್ಷೇತ್ರದಲ್ಲಿ ಸ್ನಾನ ಮಾಡುವುದರಿಂದ ಯಾವ ಫಲವೂ ಸಿಗುತ್ತದೆಯೋ ಅದೇ ಫಲವು ಅಪರಾ ಏಕಾದಶಿ ವ್ರತವನ್ನು ಮಾಡುವುದಕ್ಕೆ ಸಮನಾಗಿದೆ.

ಆನೆ, ಕುದುರೆಯ ದಾನದ ಜೊತೆಗೆ ಯಜ್ಞದಲ್ಲಿ ಬಂಗಾರವನ್ನು ದಾನ ಮಾಡುವುದರಿಂದ ಯಾವ ಫಲವೂ ಸಿಗುತ್ತದೆಯೋ, ಅದೇ ಪಲವು ನಿಮಗೆ ಅಪಾರ ಏಕಾದಶಿಯ ವ್ರತವನ್ನು ಮಾಡುವುದಕ್ಕೆ ಸಮನಾಗಿದೆ.ಹಸು ಭೂಮಿ ಅಥವಾ ಬಂಗಾರದ ದಾನದ ಫಲವು ಕೂಡ ಈ ಏಕಾದಶಿಯನ್ನು ವ್ರತವನ್ನು ಮಾಡುವ ಪಲಕ್ಕೆ ಸಮನಾಗಿದೆ.ಈ ವ್ರತವು ಪಾಪ ರೂಪವಾದ ವೃಕ್ಷಗಳನ್ನು ಕತ್ತರಿಸುವುದಕ್ಕೆ ಸಮನಾಗಿದೆ. ಮನುಷ್ಯರಿಗೆ ಏಕಾದಶಿ ವ್ರತವನ್ನು ಅವಶ್ಯವಾಗಿ ಮಾಡಬೇಕು.

ಈ ವ್ರತವು ಎಲ್ಲಾ ವ್ರತಗಳಿಗಿಂತ ಶ್ರೇಷ್ಠವಾಗಿದ್ದು, ಅಪರ ಏಕಾದಶಿಯ ದಿನ ಭಕ್ತಿ ಪೂರ್ವದಿಂದ ವಿಷ್ಣು ಭಗವಂತನ ಪೂಜೆಯನ್ನು ಮಾಡಬೇಕು. ಇದರಿಂದ ಅಂತ್ಯದಲ್ಲಿ ವಿಷ್ಣು ಪದವಿಯ ಪ್ರಾಪ್ತಿಯಾಗುತ್ತದೆ ಎಂದು ಕೃಷ್ಣನು ಹೇಳುತ್ತಾನೆ,
“ಹೇ ರಾಜ ನಾನು ಈ ಅಪರ ಏಕಾದಶಿಯನ್ನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಇದನ್ನು ಓದುವುದರಿಂದ ಅಥವಾ ಇದನ್ನು ಕೇಳುವುದರಿಂದಲೂ ಸಹ ಸಮಸ್ತ ಪಾಪವೂ ನಷ್ಟವಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top