ಹೆಚ್ಚಿನ

ಜೀವನದ ನಿಜವಾದ ಅರ್ಥ ತಿಳ್ಕೊಬೇಕು ಅಂದ್ರೆ ಚಾಲುಕ್ಯನ ಈ ಮಾತುಗಳನ್ನೂ ಕೇಳಿ ,ಆ ಮಾತುಗಳೇ ನಿಮಗೆ ಜೀವನದ ಸತ್ಯ ಅರಿವು ಮಾಡ್ಸುತ್ತೆ .

ಜೀವನವೇ  ಬೇಡ ಎನಿಸಿದಾಗ ಚಾಣಕ್ಯನ ಈ ಮಾತುಗಳನ್ನು ಒಮ್ಮೆ  ಸ್ಮರಿಸಿಕೊಳ್ಳಿ, ನೆನಪಿಸಿಕೊಳ್ಳಿ.ಆಗ ನಿಮಗೆ ಅರ್ಥವಾಗುತ್ತದೆ ಜೀವನ ಎಂದರೆ ಏನು ಅಂತ.

 

 

ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ. ಎಲ್ಲ ತಪ್ಪುಗಳನ್ನು ನೀವೊಬ್ಬರೇ ಮಾಡಲು ನಿಮ್ಮ ಆಯಸ್ಸು ಸಾಕಾಗುವುದಿಲ್ಲ .

ಅತಿ ಪ್ರಾಮಾಣಿಕರಾಗದಿರಿ. ನೇರವಾದ ಮರಗಳನ್ನು  ಮೊದಲು ನೆಲಕ್ಕೆ ಉರುಳುತ್ತವೆ.

ಒಂದು ಹಾವು ವಿಷಯುಕ್ತ ಅಲ್ಲದಿದ್ದರೂ ವಿಷ ಇರುವಂತೆ ಬುಸುಗುಟ್ಟುತ್ತಿರಬೇಕು.

ಅತ್ಯಂತ ದೊಡ್ಡ ಗುರು ಮಂತ್ರ –  ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ. ಅವೇ ನಿಮಗೆ ಒಂದು. ದಿನ ನಿಮ್ಮ ಹಾದಿಗೆ ಮತ್ತು ಜೀವನಕ್ಕೆ  ಮುಳುವಾಗುತ್ತವೆ.

ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥ ರಹಿತ ಸ್ನೇಹವೇ ಇಲ್ಲ.ಹೌದು, ಇದೊಂದು ಕಹಿ ಸತ್ಯ.

 

ಪ್ರತಿ  ಕೆಲಸ ಅಥವಾ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ನೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ.

ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ ?

ಈ ಕಾರ್ಯದ ಫಲಗಳು ಏನು ? ಮತ್ತು

ಈ ಕಾರ್ಯದಲ್ಲಿ ನಾನು ಸಫಲರಾಗುತ್ತೇವೇಯೇ ?

ಎಂಬ  ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ, ಇಲ್ಲದಿದ್ದರೆ ಆ ಪ್ರಯತ್ನ ವ್ಯರ್ಥ .

 

ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ, ಅದರ ಮೇಲೆ ಆಕ್ರಮಣ ಮಾಡಿ, ಅದನ್ನು ವಿನಾಶಗೊಳಿಸಿಬಿಡಿ.

ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಯುವಶಕ್ತಿ ಹಾಗೂ ಯುವತಿಯ  ಸೌಂದರ್ಯ .

ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ, ವಿಫಲವಾಗುವ ಭಯದಿಂದ ಮದ್ಯಕ್ಕೆ ನಿಲ್ಲಿಸಬೇಡಿ, ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೇ ಅತ್ಯಂತ ಸುಖಿಗಳು .

ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ, ಆದರೆ ಓರ್ವ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿಯೂ ಪಸರಿಸುತ್ತದೆ .

ದೇವರು ವಿಗ್ರಹದೊಳಗೆ ಇಲ್ಲ. ನಿಮ್ಮ ಭಾವನೆಗಳೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಸ್ಥಾನ .

ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ಮನುಷ್ಯನಾಗುತ್ತಾನೆಯೇ,  ವಿನಃ ಹುಟ್ಟಿನಿಂದ ಅಲ್ಲ .

ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡಿ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ.

ವಿದ್ಯೆಯೇ ನಿಜವಾದ ಸ್ನೇಹಿತ . ವಿದ್ಯಾವಂತನಿಗೆ ಎಲ್ಲಾ ಕಡೆಯಲ್ಲೂ ಮನ್ನಣೆ ಇದೆ. ವಿದ್ಯೆಯೇ ನಿಜವಾದ ಭೂಷಣ ವಿದ್ಯೆ ಎಂದಿಗೂ ಯೌವನ.

ಚಾಣಕ್ಯನ ಈ ಮಾತುಗಳನ್ನು ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಂಡರೆ ಅಥವಾ ಬೇಸರವಾದಾಗ ನೆನಪಿಸಿಕೊಂಡರೆ ನಿಮ್ಮ ಜೀವನ ಎಂದಿಗೂ ಬೇಸರ ಎನಿಸುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top