ಹೆಚ್ಚಿನ

ಯಾವ ಲಗ್ನದವರಿಗೆ ಹೆಚ್ಚಾಗಿ ಕುಜ ದೋಷ ಕಾಡುತ್ತದೆ ಹಾಗೂ ಅದನ್ನ ಹೇಗೆ ಪರಿಹಾರ ಮಾಡಬೇಕು ಅಂತ ತಿಳ್ಕೊಳ್ಳಿ

ಯಾವ ಲಗ್ನದವರಿಗೆ ಹೆಚ್ಚಾಗಿ ಕುಜ ದೋಷ ಕಾಡುತ್ತದೆ ಹಾಗೂ ಅದನ್ನ ಹೇಗೆ ಪರಿಹಾರ ಮಾಡಬೇಕು ಅಂತ ತಿಳ್ಕೊಳ್ಳಿ

ಕುಜ ದೋಷವಿದ್ದರೆ ಕಷ್ಟ ಸಂಕಷ್ಟಗಳು ಕಟ್ಟಿಟ್ಟ ಬುತ್ತಿ. ಅದರಲ್ಲೂ ಯಾವ ಯಾವ ಲಗ್ನದವರಿಗೆ ಕುಜದೋಷದಿಂದ ಯಾವೆಲ್ಲ ಸಮಸ್ಯೆಗಳು ಎದುರಾಗುತ್ತವೆ ? ಯಾವ ಯಾವ ಲಗ್ನದವರು ಎಚ್ಚರಿಕೆ ವಹಿಸಬೇಕು ? ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ ? ಹಾಗೂ ಕುಜ ದೋಷದಿಂದ ಹೇಗೆ ಮುಕ್ತಿ ಹೊಂದಬೇಕು .

 

 

ಕುಜದೋಷ ಎಂದರೆ ಎಲ್ಲರೂ ಭಯ ಪಡೆಯುತ್ತಾರೆ. ಕುಜ ದೋಷವಿದ್ದರೆ ಮದುವೆ ಆಗುವುದಿಲ್ಲ. ಮದುವೆ ಅನೇಕ ವರ್ಷಗಳ ನಂತರ ಆಗುತ್ತದೆ ಎಂದು ಭಯಪಡುತ್ತಾರೆ.ವೈವಾಹಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದ್ದರಿಂದ ಈ ಕುಜ ದೋಷಕ್ಕೆ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಕುಜದೋಷವನ್ನು ವಿವಾಹಕ್ಕೆ ಮಾತ್ರ ಲೆಕ್ಕ ಹಾಕುತ್ತಾರೆ.
ಆದರೆ ಈ ಕುಜ ದೋಷ ದಾಂಪತ್ಯ ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಹೊರತು ಪಡಿಸಿ ಅವರ ಜೀವನದಲ್ಲಿ ಅಭಿವೃದ್ಧಿಯ ಪಥದತ್ತ ಸಾಗುವುದು ,ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವುದು, ಮತ್ತು ಪಡೆಯಬೇಕು ಎಂದರೆ ಕುಜನ ಅನುಗ್ರಹ ಖಂಡಿತವಾಗಿಯೂ ಬೇಕು. ಯಾಕೆಂದರೆ ಕುಜ ಭೂಮಿ ಕಾರಕ . ನಾವೆಲ್ಲರೂ ಕೂಡ ಈ ಭೂಮಿಯ ಮೇಲೆಯೇ ವಾಸಿಸಬೇಕು .ನಾವು ಹುಟ್ಟುವುದು, ಸಾಯುವುದು ಎರಡು ಈ ಭೂಮಿಯ ಮೇಲೆಯೇ, ಈ ಭೂಮಿಯ ಮೇಲೆಯೇ ನಾವು ಜೀವನವನ್ನು ಮಾಡಬೇಕು.

 

 

ಯಾವ ಲಗ್ನದವರಿಗೆ ಹೆಚ್ಚಾಗಿ ಈ ಕುಜ ದೋಷ ಕಾಡುತ್ತದೆ ?
ಮಿಥುನ ಲಗ್ನ ಮತ್ತು ಕನ್ಯಾ ಲಗ್ನದವರಿಗೆ ಹೆಚ್ಚಾಗಿ ಮತ್ತು ವೃಷಭ ಲಗ್ನ ಮತ್ತು ತುಲಾ ಲಗ್ನದಲ್ಲಿ ಜನನ ವಾದವರಿಗೆ, ಅದರಲ್ಲಿ ಮುಖ್ಯವಾಗಿ ಒಂದು, ಎರಡು, ನಾಲ್ಕು, ಐದು, ಏಳು ಎಂಟು ಮತ್ತು ಹನ್ನೆರಡು ಈ ಮನೆಗಳಲ್ಲಿ ಕುಜನಿದ್ದರೆ ಕುಜ ದೋಷ ಹೆಚ್ಚು. ಈ ನಾಲ್ಕು ಲಗ್ನದಲ್ಲಿ ಯಾರ್ಯಾರು ಜನನವಾಗಿರುತ್ತಾರೆ ಅಂಥವರಿಗೆ ಏನಾದರೂ ಕುಜ ಬಾಧಕ ಎಂದು ಇದ್ದರೆ ಅವರು ಎಷ್ಟೇ ಕಷ್ಟಪಟ್ಟರೂ ಸಹ ಅವರು ಅಭಿವೃದ್ಧಿಯತ್ತ ಸಾಗುವುದಿಲ್ಲ. ಬಹಳಷ್ಟು ಜನ ಹೇಳುತ್ತಾರೆ. ನಾವು ತುಂಬಾ ಕಷ್ಟ ಪಡುತ್ತೇವೆ . ಆದರೂ ಕೂಡ ನಾವು ಏನು ಅಂದುಕೊಂಡಿದ್ದೇವೋ ಅದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.

ಈ ದಿನಗಳಲ್ಲಿ ಬಹಳಷ್ಟು ಜನ ಅಂದುಕೊಳ್ಳುತ್ತಾರೆ ಹಣವಿದ್ದರೆ ಸಾಕು. ನಾವು ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು . ಏನು ಬೇಕಾದರೂ ಮಾಡಬಹುದು . ಆಗಬಹುದು ಎಂದು ತಿಳಿದುಕೊಂಡಿರುತ್ತಾರೆ . ಒಬ್ಬ ಮನುಷ್ಯನಿಗೆ ನವಗ್ರಹಗಳ ಬಲ ಎನ್ನುವುದು ಇರಲೇಬೇಕು. ಇಲ ವೆಂದರೆ ಅದಕ್ಕೆ ಗ್ರಹಚಾರ ದೋಷ ಎಂದು ಹೇಳುತ್ತಾರೆ . ಅದಕ್ಕೆ ದೊಡ್ಡವರು ಗ್ರಹಚಾರ ದೋಷ ಎಂದು ಹೇಳಿದ್ದಾರೆ.
ಈ ಕುಜದೋಷವನ್ನು ಹೇಗೆ ನಿವಾರಣೆ ಮಾಡುತ್ತಾರೆ ಎಂದರೆ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಹೋಗುತ್ತಾರೆ, ಕುಜಶಾಂತಿ ಮಾಡುತ್ತಾರೆ, ಸ್ಕಂದ ಹೋಮವನ್ನು ಮಾಡುತ್ತಾರೆ ,ಆದರೆ ಇವೆಲ್ಲವೂ ಸರಿ ಇದಕ್ಕಿಂತಲೂ ಹೆಚ್ಚಾಗಿ ಯಾವ ರೀತಿ ಮಾಡಬೇಕು ?

 

 

ಪವಿತ್ರವಾಗಿರುವ ಒಂದು ನಿಸರ್ಗಧಾಮದಲ್ಲಿ, ಅಂದರೆ ಪ್ರಶಾಂತವಾಗಿರುವ ಸ್ಥಳದಲ್ಲಿ , ಕುಜಗ್ರಹ ಶಾಂತಿ ಹೋಮವನ್ನು ಆಚರಣೆ ಮಾಡಿ. ಕುಜನಿಗೆ ಅಧಿದೇವತೆ ಆಗಿರುವ ಸ್ಕಂದ ದೇವ ಅಂದರೆ ಸುಬ್ರಹ್ಮಣ್ಯ. ಸ್ಕಂದ ಹೋಮವನ್ನು ಆಚರಣೆ ಮಾಡಿ, ಲಕ್ಷ್ಮೀ ನಾರಸಿಂಹ ಹೋಮವನ್ನು ಆಚರಣೆ ಮಾಡಿ, ನಿಮ್ಮ ತೂಕದಷ್ಟು ಅಡಕ ಧಾನ್ಯವನ್ನು ಹಾಕಿ ಅದನ್ನು ಕೃಷ್ಣಾರ್ಪಣವನ್ನು ಮಾಡಿ ದಾನವನ್ನು ಮಾಡಬೇಕು.

ಈ ರೀತಿ ಮಾಡಿ ಅದರಲ್ಲಿ ಬರುವ ರಕ್ಷೆಯನ್ನು ಪ್ರತಿನಿತ್ಯ ಹಣೆಗೆ ಧರಿಸಿಕೊಳ್ಳುವ ಕೆಲಸವನ್ನು ಮಾಡಿ ಮತ್ತು ಈ ಹೋಮಗಳನ್ನು ಮಾಡುವಾಗ ಶ್ರದ್ಧೆ, ಭಕ್ತಿ, ಏಕಾಗ್ರತೆ ಮತ್ತು ನಂಬಿಕೆಯನ್ನು ಇಟ್ಟು ಮಾಡಿ. ಯಾರೋ ಹೇಳಿದ್ದಾರೆ ಎಂದು ನೀವು ನಂಬಿಕೆಯಿಲ್ಲದೆ ಶ್ರದ್ಧೆ ಭಕ್ತಿಯಿಲ್ಲದೇ ಮಾಡಿದರೆ ನಿಜವಾಗಿಯೂ ಫಲ ದೊರೆಯುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top