ದೇವರು

ಪದ್ಮ ಪುರಾಣದಲ್ಲಿಉಲ್ಲೇಖವಾಗಿರುವ ಈ ಪುಣ್ಯ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿ ಸಾಕು ನಿಮ್ಮ ಹಣ-ಕಾಸಿನ ಸಮಸ್ಯೆ ಎಲ್ಲ ಪಟ್ ಅಂತ ಪರಿಹಾರ ಆಗುತ್ತೆ .

ಪದ್ಮ ಪುರಾಣದಲ್ಲಿ ಉಲ್ಲೇಖವಾಗಿರುವ ಪ್ರಕಾರ ಈ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಸಿರಿವಂತಿಕೆ ಪ್ರಾಪ್ತಿಯಾಗುತ್ತದೆ.

ನಿತ್ಯ ದಾರಿದ್ರ್ಯವೂ ಕೂಡ ಈ ಕ್ಷೇತ್ರದಲ್ಲಿ ಸ್ವಾಮಿಯ ದೇವಿಯ ದರ್ಶನ ಮಾಡಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರೆ ದೂರವಾಗುತ್ತದೆ. ಕುಬೇರ ನಂತಹ ಐಶ್ವರ್ಯ ಬರುತ್ತದೆ ಎನ್ನುವಂತಹ  ಮಾತು ಇದೆ ಪದ್ಮ ಪುರಾಣದಲ್ಲಿ .ಹಿಂದೆ ನಮ್ಮ ಅಜ್ಜ ಅಜ್ಜಿಯರ ಕಾಲದಲ್ಲಿ ಭಾರೀ ಶ್ರೀಮಂತಿಕೆ ಇತ್ತು, ಅವರು ಹಾಗಿದ್ದರು, ಹೀಗಿದ್ದರು ರಾಜನಂತೆ ಮೆರೆಯುತ್ತಿದ್ದರು. ನಮ್ಮ ತಂದೆ ಹೀಗಿದ್ದರು .

 

 

ಭಾರಿ ಚೆನ್ನಾಗಿ  ಇದ್ದರು, ಒಳ್ಳೆಯ ಹೆಸರು , ಮಾನ , ಸಮ್ಮಾನ, ಗತ್ತು,  ಗೌರವ, ಪ್ರತಿಷ್ಠೆ, ಸ್ಥಾನ, ಪ್ರೀತಿ ಎಲ್ಲವೂ ಇತ್ತು. ಯಾಕೋ ಇತ್ತೀಚೆಗೆ ಎಲ್ಲವೂ ನಿಂತು ನೀರಾಗಿದೆ. ಆ ಸಿರಿವಂತಿಕೆಯೂ ಇಲ್ಲ, ಗೌರವವೂ ಇಲ್ಲದೇ ಹೋಗಿದೆ.  ಎಲ್ಲಿ ದುಡ್ಡು ಅಂದರೆ ಲಕ್ಷ್ಮೀ ದೇವಿ ಇರುತ್ತಾಳೋ  ಅಲ್ಲಿಯೇ  ಈಗಿನ ಕಾಲದಲ್ಲಿ ಗೌರವ, ದುಡ್ಡೇ ದೊಡ್ಡಪ್ಪನಾಗಿದ್ದಾನೆ.

ತುಂಬಾ ಚೆನ್ನಾಗಿ ಬಾಳಿ ಬದುಕಿದ್ದೇವೆ. ದೊಡ್ಡ ದಾದಂತಹ ಒಂದು ಸ್ಥಾನದಲ್ಲಿ ಇದ್ದೆವು. ಆದರೆ ಈಗ ನಾವು ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದೇವೆ, ಭಗವಂತ ಆ ಒಂದು ನೋವು ಶತ್ರುವಿಗೂ ಸಹ ಇರಬಾರದು ಎಂದು ಹೇಳುತ್ತೇವೆ. ನಾವು ನೂರು ರೂಪಾಯಿಯಲ್ಲಿ ಬದುಕಿದ್ದೇವೆ ಎಂದರೆ , ನಮಗೆ ಯಾವುದೇ ನೋವು ಇರುವುದಿಲ್ಲ. ಕೋಟಿ ರೂಪಾಯಿ ಇದೆ ಎಂದರೆ ನಾವು ಯಾರ ಕಡೆಗೂ  ಗಮನವನ್ನು ಕೊಡುವುದಿಲ್ಲ. ಅವರು ಅವರದ್ದೇ ಆದಂತಹ ಆಲೋಚನೆಯಲ್ಲಿ ಇರುತ್ತಾರೆ.

ಅದೇ ಕೋಟಿ ರೂಪಾಯಿಯಿಂದ ನಾವು ನೂರು ರೂಪಾಯಿಗೆ ಬಂದಿಳಿದರೆ ಆ ನೋವು ಇದೆಯಲ್ಲಾ ಅದು ಶತ್ರುವಿಗೂ ಕೂಡ ಬರಬಾರದು. ಯಾವ ಅಜ್ಞಾತ ಶತ್ರುವಿಗೂ ಕೂಡ ಅಂತಹ ನೋವು ಬೇಡ ಎಂದು ಹೇಳುತ್ತಾರೆ. ಅಂತಹ ದೋಷಗಳಿಂದ ನೀವೇನಾದರೂ ನಿಮ್ಮ ಜೀವನದಲ್ಲಿ ತುಂಬಾ ನೋವು , ಹಿಂಸೆ ಅನುಭವಿಸುತ್ತಿದ್ದರೆ ಹಣಕ್ಕೆ ಪರದಾಡುತ್ತಿದ್ದರೆ, ಸಿರಿವಂತಿಕೆ ಪಡೆಯುವುದಕ್ಕೆ ಮತ್ತೆ ಅದೇ ಸ್ಥಾನ ಗಳಿಸುವುದಕ್ಕೆ ನೀವು ಪರದಾಡುತ್ತಿದ್ದರೆ, ಆ ಗೌರವ ಪಡೆಯಬೇಕು ಎಂದರೆ

 

 

ಅಂತವರಿಗೆ ಈ ಕ್ಷೇತ್ರದಲ್ಲಿ ಒಂದು ಸ್ಥಾನವಿದೆ . ಅದು ಪದ್ಮ ಪುರಾಣದಲ್ಲಿ ಕೂಡ ಉಲ್ಲೇಖವಾಗಿದೆ. ಅದು ಯಾವ  ಕ್ಷೇತ್ರವೆಂದು ನಿಮಗೆ ಗೊತ್ತೇ ?  ಶ್ರೀಮಾನ್ ಮಹಾವಿಷ್ಣು ಶ್ರೀನಿವಾಸನಾಗಿ ಭೂಮಿಗೆ ಬಂದಾಗ ತನ್ನ ಗದೆಯಿಂದ ಆ ಒಂದು ಕ್ಷೇತ್ರವನ್ನು ನಿರ್ಮಾಣ ಮಾಡಿದ್ದಾನೆ.

ಒಂದು  ಕೊಳವನ್ನು  ಮತ್ತು ಸರೋವರವನ್ನು ಸಹ  ಸೃಷ್ಟಿ ಮಾಡಿದ್ದಾನೆ. ಅದುವೇ ಪದ್ಮ ಸರೋವರ ಮತ್ತು ಪದ್ಮಾವತಿ ಕ್ಷೇತ್ರ.  ಅದನ್ನೇ ತಿರುಷಂದೂರ  ಕ್ಷೇತ್ರ ಎಂದು ಹೇಳುತ್ತಾರೆ. ತಿರುಮಲಕ್ಕೆ ಹೋಗುವಾಗ ಮತ್ತು ಬರುವಾಗ ಪದ್ಮಾವತಿ ದರ್ಶನ ಮಾಡಬೇಕು.

 

 

ಆ ಪದ್ಮಾವತಿ ಸಾನಿಧ್ಯದಲ್ಲಿರುವ ಈ ಪದ್ಮ ಸರೋವರದಲ್ಲಿ ಯಾರು  ನಲವತ್ತು ಒಂದು ದಿನ ದೇವಿಗೆ ಸಂಕಲ್ಪ ಮಾಡಿಕೊಂಡು, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು , ಸ್ನಾನ ಮಾಡಿ, ದೇವಿಗೆ ಸಂಕಲ್ಪ, ಪೂಜೆ ಮತ್ತು ಕಮಲ ಪುಷ್ಪಗಳನ್ನು ಸಮರ್ಪಣೆ ಮಾಡುತ್ತಾರೋ,  ಅಂಥವರಿಗೆ ಕಳೆದು ಹೋದ, ಗತಿಸಿದ ವೈಭವವನ್ನು ಮತ್ತೆ ಮರಳಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮಾತು ಪದ್ಮ ಪುರಾಣ, ಶಿವಪುರಾಣ ಮತ್ತು ಲಿಂಗ ಪುರಾಣದಲ್ಲೂ ಸಹ ಉಲ್ಲೇಖವಾಗಿದೆ.

ನೀವು ಕೂಡ ಒಮ್ಮೆ ಪ್ರಯತ್ನ ಮಾಡಿ. ಆ ಗೌರವ, ಆ ಸಿರಿವಂತಿಕೆ ಮತ್ತೆ ಬರಬೇಕು, ನಿಮಗೆ ಸಿಗಬೇಕು ಎಂದರೆ ಖ್ಯಾತಿ, ಉನ್ನತ ಸ್ಥಾನ ಪಡೆಯಬೇಕೆಂದರೆ, ನೀವು ಕೂಡ ಈ ಪದ್ಮ ಸರೋವರಕ್ಕೆ ಹೋಗಿ ಸ್ನಾನ ಮಾಡಿ. ಭಕ್ತಿ, ಶ್ರದ್ಧೆಯಿಂದ ದೇವಿಗೆ ಪೂಜೆ ಪ್ರಾರ್ಥನೆಯನ್ನು ಸಲ್ಲಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top