ಹೆಚ್ಚಿನ

ಇದನ್ನು ಒಮ್ಮೆ ಓದಿದರೆ, ನಿಮ್ಮ ಜೀವನದಲ್ಲಿ ನೀವು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದರೆ, ಅವುಗಳನ್ನು ಎದುರಿಸುವ ಧೈರ್ಯ ಬಂದೇ ಬರುತ್ತದೆ .

ಇದನ್ನು ಒಮ್ಮೆ ಓದಿದರೆ, ನಿಮ್ಮ ಜೀವನದಲ್ಲಿ ನೀವು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದರೆ, ಅವುಗಳನ್ನು ಎದುರಿಸುವ ಧೈರ್ಯ ಬಂದೇ ಬರುತ್ತದೆ .

ನಮ್ಮ ಅಕ್ಕಪಕ್ಕ ಮತ್ತು ನಮ್ಮ ಜೊತೆಗೆ ಇರುವವರು ಸಂತೋಷವಾಗಿದ್ದಾರೆ. ಆದರೆ ನನಗೆ ಮಾತ್ರ ಯಾಕೆ ಇಷ್ಟೊಂದು ಕಷ್ಟ ಬರುತ್ತಿದೆ ? ಅಂತ ನೀವು ಚಿಂತೆ ಮಾಡುತ್ತಿದ್ದೀರಾ ? ಹಾಗಾದರೆ ಈ ಕಥೆಯನ್ನು ಓಮ್ಮೆ ಓದಿ. ಕೊನೆಯಲ್ಲಿ ನಿಮಗೆ ಕಷ್ಟ ಯಾಕೆ ಬರುತ್ತದೆ ? ಯಾವ ಸಮಯದಲ್ಲಿ ಕಷ್ಟ ಬರುತ್ತದೆ ? ಯಾರಿಗೆ ಕಷ್ಟ ಬರುತ್ತದೆ ? ಕಷ್ಟ ಬಂದಾಗ ಏನು ಮಾಡಬೇಕು ? ಈ ಎಲ್ಲ ಪ್ರಶ್ನೆಗಳಿಗೂ ಈ ಒಂದು ಕಥೆಯ ಮೂಲಕ ಉತ್ತರ ಸಿಗುತ್ತದೆ.

ದಟ್ಟವಾದ ಕಾಡಿನಲ್ಲಿ ಒಂದು ಗರ್ಭವತಿಯಾಗಿರುವ ಜಿಂಕೆ ಇತ್ತು. ಅದು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲು ಇರುವ ಸಮತಟ್ಟಾದ ಸುರಕ್ಷಿತವಾದ ಸ್ಥಳವನ್ನು ಹುಡುಕಿಕೊಂಡಿತ್ತು. ಪ್ರಸವ ವೇದನೆ ಪ್ರಾರಂಭವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ ತೊಡಗಿತು. ನಡೆಯುತ್ತಾ ನಡೆಯುತ್ತಾ ತಾನು ಹುಡುಕಿಕೊಂಡ ಸ್ಥಳಕ್ಕೆ ತಲುಪಿದ ಜಿಂಕೆ, ಪ್ರಸವ ವೇದನೆಯ ನೋವನ್ನು ತಾಳದೇ ಹೋಯಿತು.

 

 

ಆ ಕ್ಷಣಕ್ಕೆ ಆಕಾಶದಲ್ಲಿ ಕಾರ್ಮೋಡಗಳು ದಟ್ಟವಾಗಿ ಕಾಣಿಸುತ್ತಿದ್ದವು. ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಕೂಡ ಹತ್ತಿಕೊಂಡಿತ್ತು. ಇದನ್ನು ಕಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಲು ಆತ ಇತ್ತ ತಿರುಗಿ ನೋಡಿತು. ಅತ್ತ ತಿರುಗಿದ ಜಿಂಕೆಗೆ ಕಂಡದ್ದು ಏನೆಂದರೆ ಎಡಕ್ಕೆ ಒಬ್ಬ ಬೇಟೆಗಾರ , ಜಿಂಕೆಗೆ ಗುರಿ ಮಾಡಿ ಬಾಣ ಹೂಡಿದ್ದಾರೆ ಇದನ್ನು ಕಂಡು ಜಿಂಕೆಗೆ ಆಘಾತವಾಗಿತ್ತು. ಬಲಕ್ಕೆ ತಿರುಗಿದಾಗ ಅಲ್ಲೊಂದು ಹಸಿದ ಸಿಂಹ ಜಿಂಕೆಯ ಕಡೆಗೆ ಬರುತ್ತಿದೆ. ಪ್ರಸವ ವೇದನೆಯನ್ನು ತಾಳಲಾರದೆ ಜಿಂಕೆ ಈಗ ಏನು ಮಾಡಿತು ?

 

 

ಉತ್ತರ 

ಈ ಕ್ಷಣಕ್ಕೆ ಜಿಂಕೆ ತನ್ನ ಗಮನವನ್ನೆಲ್ಲ ತನ್ನ ಮಗುವಿಗೆ ಜನ್ಮ ನೀಡುವುದರಲ್ಲಿ ಮಾತ್ರ ಕೇಂದ್ರೀಕರಿಸಿತ್ತು. ತನ್ನ ಆತಂಕ , ಚಿಂತೆ, ದುಗುಡವನ್ನೆಲ್ಲ ಬದಿಗಿಟ್ಟು ಪರಮಾತ್ಮನಲ್ಲಿ ನಂಬಿಕೆ ಇಟ್ಟು, ತನ್ನ ಕರ್ತವ್ಯ ಮತ್ತು ತನ್ನ ತಾಯಿಯ ಧರ್ಮವನ್ನು ಪಾಲಿಸಲು ತನ್ನ ಕುಡಿಯ ಜನನ ಕಾರ್ಯದಲ್ಲಿ ಮಗ್ನವಾಯಿತು. ಚಿಂತೆಯನ್ನೆಲ್ಲ ಆ ಚಿನ್ಮಯನಾದ ದೇವರಿಗೆ ಕೊಟ್ಟ ಮೇಲೆ ಜಗದೊಡೆಯ ಜಗನ್ನಾಥನನ್ನು ನಂಬಿದ ಮೇಲೆ ಎಲ್ಲವೂ ಅವನ ಭಾರ ತಾನೆ.
ಆಗ ಆ ಒಂದು ಕ್ಷಣದಲ್ಲಿ ದಟ್ಟವಾದ ಕಾರ್ಮೋಡಗಳಿಂದ ಕಣ್ಣು ಕೋರೈಸುವ ಮಿಂಚು ಹೊಡೆಯಿತು. ಬೇಟೆಗಾರನ ಕಣ್ಣಿಗೆ ಕತ್ತಲು ಆವರಿಸಿತ್ತು. ಆತ ಹೂಡಿದ ಬಾಣ ಗುರಿ ತಪ್ಪಿ ಹಸಿದ ಸಿಂಹಕ್ಕೆ ತಗುಲಿತು. ದಟ್ಟವಾದ ಕರಿ ಮೋಡಗಳಿಂದ ಬಿರುಸಾಗಿ ಮಳೆ ಸುರಿಯತೊಡಗಿತು. ಮಳೆಯ ಆರ್ಭಟಕ್ಕೆ ಕಾಡಿಗೆ ಹತ್ತಿದ ಬೆಂಕಿ ಪ್ರಶಾಂತವಾಯಿತು .ಆ ಕ್ಷಣಕ್ಕೆ ತಾಯಿ ಜೀವ ತನ್ನ ಮುದ್ದಾದ ಮಗುವಿಗೆ ಜನ್ಮ ನೀಡಿತು.

 

 

ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ಯಾವ ಫಲದ ಅಪೇಕ್ಷೆಯೂ ಇಲ್ಲದೇ , ಯಾವ ಪರಿಣಾಮದ ಬಗ್ಗೆಯೂ ಯೋಚಿಸದೆ , ತನ್ನ ತಾಯಿಯ ಧರ್ಮ ಪಾಲಿಸಿತು ಗೆದ್ದಿತ್ತು. ಕಷ್ಟ ಬಂದಾಗ ನಾವು ಸಂಭವಿಸಬಹುದಾದ ಎಲ್ಲಾ ಸಂಭವನೀಯತೆಯನ್ನು ಯೋಚಿಸಿ, ದಿಕ್ಕು ತಪ್ಪುತ್ತೇವೆ, ಹೆದರುತ್ತೇವೆ. ಮಾಡುವ ಕರ್ತವ್ಯದಿಂದ ನಮ್ಮ ಧರ್ಮದಿಂದ ವಿಮುಖವಾಗುತ್ತೇವೆ. ಭಗವಂತನನ್ನು ನೆನೆದು ನಮ್ಮ ಕರ್ತವ್ಯವನ್ನು ಮಾಡೋಣ. ಧರ್ಮ ಕರ್ಮಗಳ ಫಲ ಎಲ್ಲಾ ಪರಮಾತ್ಮನ ಭಾರ.

“ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ
ಮಾ ಕರ್ಮಫಲಹೇತು ಭುರ್ವಃ
ಮಾತೆ ಸಂಗೋಸ್ತ್ವ ಕರ್ಮಣಿ”
“ ಧರ್ಮೋ ರಕ್ಷತಿ ರಕ್ಷಿತಃ” ಅದಕ್ಕೆ ಹೇಳುವುದು ಧರ್ಮವನ್ನು ನಾವು ಪಾಲಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top