ಹೆಚ್ಚಿನ

ಅಪ್ಪಿ-ತಪ್ಪಿನೂ ಈ ಗಿಡಗಳನ್ನೂ ನಿಮ್ಮ ಮನೆಯಲ್ಲಿ ಬೆಳೆಸಬೇಡಿ ,ಬೆಳೆಸಿದ್ದಾರೆ ಅಷ್ಟ ಕಷ್ಟಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತೆ .

ಯಾವ ಯಾವ ಗಿಡಗಳನ್ನು ಮನೆಯ ಒಳಗೆ ಮತ್ತು ಹತ್ತಿರ ಬೆಳೆಸಬಾರದು. ಅಂತಹ ಗಿಡಗಳು ದುರಾದೃಷ್ಟದ ಸಂಕೇತ ಎಂದು ಪರಿಗಣಿಸಲಾಗಿದೆ.ಅವು ಯಾವುವು ಎಂದು ನಿಮಗೆ ಗೊತ್ತಾ ?

ಸಾಮಾನ್ಯವಾಗಿ ಜನರು ತುಳಸಿ ಗಿಡವನ್ನು ಮತ್ತು ಹಣದ ಗಿಡ(ಮನಿ ಪ್ಲಾಂಟ್) ವನ್ನು ಮನೆಯ ಹತ್ತಿರ ಬೆಳೆಸುತ್ತಾರೆ ಯಾಕೆಂದರೆ ಶಾಸ್ತ್ರದ ಪ್ರಕಾರ ಈ ಗಿಡಗಳು ಸಮೃದ್ಧಿ ಮತ್ತು ಒಳ್ಳೆಯ ಅದೃಷ್ಟವನ್ನು ಜೀವನದಲ್ಲಿ ತರುತ್ತವೆಂದು. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತು ಕೆಲವು ರೀತಿಯ ಗಿಡಗಳನ್ನು ಮನೆಯ ಹತ್ತಿರ ಬೆಳೆಸಬಾರದೆಂದು ಯಾಕೆಂದರೆ ವೇದ ವಿಜ್ಞಾನದ ಮತ್ತು ಫೆಂಗ್ ಶುಯ್ ಪ್ರಕಾರ ಈ ಸಸ್ಯಗಳು ನಾಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವೇಶ ಮಾಡುವಂತೆ ಮಾಡುತ್ತವೆ ಎಂದು ಪರಿಗಣಿಸಲಾಗಿದೆ.

ಫೆಂಗ್ ಶುಯ್ ಪ್ರಕಾರ ಜೀವಂತವಾಗಿರುವ ಸಸ್ಯಗಳನ್ನು ಮನೆಯ ಹತ್ತಿರ ಬೆಳೆಸುವುದರಿಂದ ಶಕ್ತಿಯನ್ನು ಸಮಾನವಾಗಿ ವಿಸ್ತರಿಸುವಂತೆ ಮಾಡುತ್ತವೆ.ನಿಮ್ಮ ಮನೆಯನ್ನು ವಾಸ್ತು ಸ್ನೇಹಿಯಾಗಿ ಮಾಡಿಕೊಳ್ಳಬಹುದು. ಅದಕ್ಕೆಂದೇ ಇಲ್ಲಿ ಕೆಲವು ಸಲಹೆಗಳಿವೆ. ಏನೆಂದರೆ ಕೆಲವು ಗಿಡಗಳನ್ನು ನೀವು ಮನೆಯಲ್ಲಿ ಇಟ್ಟು ಬೆಳೆಸುವುದನ್ನು ತಡೆಗಟ್ಟಬೇಕು.ಅವು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ….

1.ಕಳ್ಳಿ ಗಿಡ.

 

 

ಕಳ್ಳಿ ಅಥವಾ ಅದರ ರೀತಿಯಲ್ಲಿ ಹೋಲುವ ಮುಳ್ಳಿರುವ ಗಿಡಗಳನ್ನು ಎಂದಿಗೂ ಸಹ ಮನೆಯಲ್ಲಿ ಇಟ್ಟು ಬೆಳೆಸಬಾರದು.

2.ಬೋನ್ಸಾಯ್.

 

 

ವಾಸ್ತುವಿನ ಪ್ರಕಾರ ಕೆಂಪು ಹೂವುಗಳನ್ನು ಬಿಡುವ ಗಿಡಗಳನ್ನು ಮತ್ತು ಬೋನ್ಸಾಯ್ ನಂತಹ ಗಿಡಗಳನ್ನು ಮನೆಯ ಒಳಗೆ ಇಟ್ಟು ಬೆಳೆಸಬಾರದು.ಆದರೂ ಸಹ ನೀವು ಅವುಗಳನ್ನು ನಿಮ್ಮ ಮನೆಯ ಹೊರಗೆ ಇರುವ ಸ್ಥಳದಲ್ಲಿ ,ಉದ್ಯಾನದಲ್ಲಿ ಜಾಗವಿದ್ದರೆ ಬೆಳೆಸಬಹುದು.

3.ಹುಣಸೆ ಮರ(ಇಮಲಿ).

 

 

ಹುಣಸೆ ಮರದಲ್ಲಿ ದೆವ್ವಗಳು ಅಂದರೆ ಪ್ರೇತಾತ್ಮಗಳು ವಾಸ ಮಾಡುತ್ತವೆ ಎಂದು ನಂಬಲಾಗಿದೆ.ಆದ್ದರಿಂದ ಇಂತಹ ಮರಗಳು ಇರುವ ಸ್ಥಳಗಳಲ್ಲಿ ಮನೆ ಮತ್ತು ಕಟ್ಟಡಗಳನ್ನು ನಿರ್ಮಿಸಬಾರದು ಅವು ವಾಸ ಮಾಡುವುದಕ್ಕೆ ಯೋಗ್ಯವಲ್ಲ ಅಲ್ಲಿ ಅತೀ ಹೆಚ್ಚಾಗಿ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.

4.ಒಣಗಿದ ಮತ್ತು ಬಾಡಿ ಹೋದ ಗಿಡಗಳು.
ಒಣಗಿದ ಮತ್ತು ಬಾಡಿ ಹೋದ ಗಿಡಗಳನ್ನು ಇಂದಿಗೂ ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗೆ ಒಣಗಿ, ಬಾಡಿ ಹೋದ ಹೂವುಗಳು ಸಹ ಮನೆಗೆ ದುರಾದೃಷ್ಟ ತರುತ್ತವೆ ಎಂದು ಪರಿಗಣಿಸಲಾಗಿದೆ.

5.ಬಾಬೂಲ್.

 

 

ಮುಳ್ಳಿರುವ ಮರದ ಜೊತೆಗೆ ಬಾಬೂಲ್ ಗಿಡವನ್ನು ಮನೆಗಳಲ್ಲಿ ಇಟ್ಟು ಬೆಳಸಬಾರದು.ಅವು ಮನೆಗಳಲ್ಲಿ ಜಗಳವನ್ನು ಸೃಷ್ಟಿಯಾಗುವಂತೆ ಮಾಡುತ್ತವೆ ಎಂದು ನಂಬಲಾಗಿದೆ.

6.ಹತ್ತಿ.

 

 

ಹತ್ತಿಯ ಗಿಡ, ರೇಶಿಮೇ ಹತ್ತಿಯ ಗಿಡ ಮತ್ತು ತಾಳೆ ಮರವನ್ನು ಮನೆಯ ಹತ್ತಿರ ಬೆಳೆಸಬಾರದು.ಇವುಗಳನ್ನು ಮನೆಯ ಸುತ್ತ ಮುತ್ತ ಬೆಳೆಸಿದರೆ ಮಂಗಳಕರವಲ್ಲ ಎಂದು ಪರಿಗಿಣಿಸಿದ್ದಾರೆ.

7.ಉತ್ತರ ಪುರ್ವ ದಿಕ್ಕಿನ ಗೋಡೆಗಳು.
ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳಿಗೆ ಯಾವುದೇ ಗಿಡ ಮತ್ತು ಮರ ಅದು ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಮನೆಯ ಪೂರ್ವ ಉತ್ತರ ದಿಕ್ಕಿನ ಗೋಡೆಗಳಿಗೆ ತಾಗುವಂತೆ ಬೆಳೆಸಬಾರದು.

8.ದೊಡ್ಡದಾದ ಮತ್ತು ಉದ್ದನೆಯ ಮರಗಳು.

 

 

ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಬೃಹತ ಮತ್ತು ಉದ್ದನೆಯ ಮರಗಳನ್ನು ಬೆಳೆಸಬಾರದು.ಅದು ನಕಾರಾತ್ಮಕ ಶಕ್ತಿಯನ್ನು ಹೊರ ಹೊಮ್ಮಿಸುತ್ತವೆ.

9.ನುಗ್ಗೆಕಾಯಿ ಮರ.

 

 

ನುಗ್ಗೆಕಾಯಿ ಮರವನ್ನು ಮನೆಯ ಬಳಿ ಬೆಳೆಸಬಾರದು ಅದು ಒಳ್ಳೆಯದಲ್ಲ. ಅದರ ಜೊತೆಗೆ ಮುಳ್ಳುರಿವ ಗಿಡಗಳು, ಗುಲಾಭಿ ಗಿಡ ಮತ್ತು ಅಂಟು ಮತ್ತು ಹಾಲು ಬರುವ ಯಾವುದೇ ಗಿಡ ಮತ್ತು ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು ಅವು ಕೂಡ ಅಷ್ಟಾಗಿ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top