fbpx
ಕಿರುತೆರೆ

ನಾಡು ಬಿಟ್ಟು ಮತ್ತೆ ಕಾಡು ಪಾಲಾದ ಪುಟ್ಟಗೌರಿ: ಈಕೆಯ ಕಷ್ಟಗಳಿಗೆ ಕೊನೆ ಎಂದು? ಕಾಳಿಯ ಅವತಾರವನ್ನೆತ್ತುತ್ತಾಳೆಯೇ ಗೌರಿ?

ಬಹುಷಃ ಕಿರುತೆರೆಯಲ್ಲಿನ ಅತಿ ಜನಪ್ರಿಯ ಧಾರಾವಾಹಿ ಎನಿಸಿಕೊಂಡಿರುವ ‘ಪುಟ್ಟಗೌರಿ ಮದುವೆ’ ಕೊಡುವಷ್ಟು ಚಿತ್ರಹಿಂಸೆಯನ್ನ ಮತ್ಯಾವ ದಾರಾವಾಹಿಯೂ ಕೊಡೋದಿಲ್ಲ ಅಂತ ಕಾಣುತ್ತೆ. ಯಾಕೆಂದರೆ ಬರಿ ಅಬ್ಬೊ ಎನ್ನಿಸುವ ಮಳ್ಳು ದೃಶ್ಯಗಳನ್ನ, ಸನ್ನಿವೇಶಗಳನ್ನೇ ತೋರಿಸಿ ವೀಕ್ಷಕರಿಗೆ ಕಾಟಕೊಡುವುದು ಈ ಧಾರಾವಾಹಿ ಚಟವಾಗಿಸಿಕೊಂಡಂತಿದೆ ಆದರೂ ಕಿರುತೆರೆಯಲ್ಲಿ ಇದೇ ನಂಬರ್ ಆನ್ ಸೀರಿಯಲ್. ಸುಮಾರು ವರ್ಷಗಳಿಂದ ಪ್ರಸಾರ ವಾಗುತ್ತಿರುವ ಈ ಧಾರಾವಾಹಿ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಲೇ ಇದೇ ಈ ಮೂಲಕ ಈಗ ಮುಗಿಯುತ್ತದೆ, ಆಗ ಮುಗಿಯುತ್ತದೆ ಇನ್ನೇನು ಮುಗಿದೇ ಹೋಯ್ತು ಎಂದು ಖುಷಿಪಡುವ ನೊಂದ ವೀಕ್ಷಕರ ಕನಸಿಗೆ ಕೊಲ್ಲಿ ಹಿಡುತ್ತಿದೆ.

 

 

ತರ್ಕಕ್ಕೆ ನಿಲುಕದಂತಹ ದೃಶ್ಯಗಳನ್ನೆಲ್ಲಾ ತೋರಿಸುವ ಮೂಲಕ ಮುಗ್ದ ವೀಕ್ಷಕರನ್ನು ದಡ್ಡರನ್ನಾಗಿಸಿ ಈಗಾಗಲೇ ನಗೆಪಾಟಲಿಗೀಡಾಗಿರುವ ಈ ಧಾರಾವಾಹಿಯಲ್ಲಿ ನಿರ್ದೇಶಕ ಮಹಾಶಯ ನಾಯಕಿಯ ಕೈನಲ್ಲಿ ಯಾರಿಂದಲೂ ಸಾಧ್ಯವಾಗದಂತಹ ಮಹಾ ಪವಾಡಗಳನ್ನೆಲ್ಲಾ ಮಾಡಿ ಮುಗಿಸಿದ್ದಾನೆ.. ಧಾರಾವಾಹಿಯಲ್ಲಿ ನಾಯಕಿ(ಪುಟ್ಟಗೌರಿ ಉರ್ಫ್ ರಂಜನಿ ರಾಘವನ್)ಯನ್ನು ಒಮ್ಮೆ ಗರ್ಭವತಿಯನ್ನಾಗಿಸಿ ಆಷ್ಟುಬೇಗ ಅಬಾರ್ಷನ್ ಮಾಡಿಸಿದ್ದ, ಆಕೆಗೆ ಮಹಾಮಾರಿ ಕ್ಯಾನರ್ ಕಾಯಿಲೆಯನ್ನು ಕರುಣಿಸಿದ್ದ, ಅಷ್ಟೇ ಯಾಕೆ ವಿಷವನ್ನು ಕುಡಿಸಿದ್ದ ಆದರೂ ಆಕೆಯೆನ್ನು ಸಾಯಿಸಲು ಆಗಿರಲಿಲ್ಲ ನಂತ್ರ ರೋಸುಹೋಗಿ ನೂರಾರು ಅಡಿ ಎತ್ತರದ ಬೆಟ್ಟದಿಂದ ಬೀಳಿಸಿ ಸೀರೆ ಸೆರಗು ಕೂಡ ಮಾಸದಂತೆ, ಮೂಡಿದ ಹೂವು ಬಾಡದಂತೆ ಜೋಪಾನವಾಗಿ ಭೂಮಿ ಮೇಲೆ ಲ್ಯಾಂಡ್ ಮಾಡಿಸಿದ್ದ.

ಕಾಡಿನಲ್ಲಿ ಬಿದ್ದ ಪುಟ್ಟಗೌರಿ ಹಾವು, ಹುಲಿಗಳಂತ ವ್ಯಾಘ್ರಜೀವಿಗಳಿಂದ ಮತ್ತು ಕಾಡು ಮನುಷ್ಯರಿಂದ ರಕ್ಷಿಸಿ ಪವಾಡವನ್ನೇ ಮಾಡಿ ನಾಡಿಗೆ ವಾಪಸ್ಸು ಕರೆದುಕೊಂಡು ಬಂದಿದ್ದ ನಿರ್ದೇಶಕ ಅದ್ಯಾಕೋ ಪುಟ್ಟಗೌರಿ ನಾಡಿನಲ್ಲಿರಲು ಬಿಡದೆ ಮತ್ತೆ ಕಾಡಿಗೆ ಕಳುಹಿಸಿದ್ದಾರೆ. ಈ ಭಾರಿ ಸ್ವಲ್ಪ ಡಿಫರೆಂಟಾದ ಆಟಕಟ್ಟಿರುವ ನಿರ್ದೇಶಕ ಕ್ಯಾನ್ಸರ್, ಅಬಾಷನ್, ವಿಷದ ಕುಡಿಸಿದ ನಂತರ ಪಾಪ ಪುಟ್ಟಗೌರಿ ಮೇಲೆ ಕಿಡ್ನಾಪ್ ಅಸ್ತ್ರ ಪ್ರಯೋಗಿಸಿದ್ದಾರೆ.

 

 

ಕೆಲವು ದಿನಗಳ ಹಿಂದೆಯಷ್ಟೇ ಹಳ್ಳಿಹುಡುಗಿಯಾಗಿದ್ದ ಗೌರಿಯನ್ನು ಏಕ್ ದಮ್ ಸಿಟಿ ಹುಡುಗಿ(ಕರೀಶ್ಮಾ)ಯನ್ನಾಗಿ ಬದಲಾಯಿಸಿದ್ದರಲ್ಲ ಅದೇ ಗೌರಿಯನ್ನು ನೂತನ್ ಎಂಬ ಖದೀಮ ಕಿಡ್ನಾಪ್ ಮಾಡಿ ಕಾಡಿಗೆ ಎಳೆದು ತಂದಿದ್ದಾವೆ, ಆಕೆಯನ್ನು ಬಲಾತ್ಕಾರ ಮಾಡುವ ಸ್ಕೆಚ್ ಆತನದು. ಈ ವಿಷಯವನ್ನು ಅರಿತು ಕೆರಳಿ ಕೆಂಡವಾಗಿರುವ ಗೌರಿ ಕಾಡಿನಲ್ಲಿರು ಗುಹೆಯಲ್ಲಿ ಸೇರಿಕೊಂಡು ಸಾಕ್ಷಾತ್ ಕಾಳಿಯ ಮೊರೆ ಹೋಗಿದ್ದಾಳೆ. ಥೇಟು ಹಳೆ ಸಿನಿಮಾಗಳಲ್ಲಿ ಕಾಳಿ ಮಾತೇ ಮುಂದೆ ಡ್ಯಾನ್ಸ್ ಮಾಡುವ ಹಾಗೆ ಕುಣಿದಿರುವ ಪುಟ್ಟುಗೌರಿ ಆ ಕೀಚಕನಿಂದ ತನ್ನನ್ನು ರಕ್ಷಿಸುವಂತೆ ದೇವಿಯಲ್ಲಿ ಅಂಗಲಾಚಿದ್ದಾಳೆ.. ಏನೇ ಆದರೂ ನಿನ್ನನ್ನು ಬಲಾತ್ಕಾರ ಮಾಡಿಯೇ ತೀರುತ್ತೇನು ಎಂದು ಪಣ ತೊಟ್ಟಿರುವ ನೂತನ್ ಒಂದು ಕಡೆಯಿದ್ದರೆ ನಿನ್ನಿಂದ ನನ್ನನ್ನು ಕಾಪಾಡಲು ದೇವಿ ಬಂದೆ ಬರುತ್ತಾಳೆ ಎಂದು ನಿರೀಕ್ಧೆಯಲ್ಲಿರುವ ಗೌರಿ ಮತ್ತೊಂದು ಕಡೆಯಿದ್ದಾಳೆ. ನೆನ್ನೆಯ ಸಂಚಿಕೆ ಇಲ್ಲಿಗೆ ಮುಗಿದಿದ್ದು ಇಂದು ಏನಾಗುತ್ತದೆ ಎಂದು ಕಾದುನೋಡಬೇಕು. ನೂತನ್ ಆಕೆಯನ್ನು ಬಲಾತ್ಕಾರ ಮಾಡುತ್ತಾನೆಯೇ? ದೇವಿ ಪ್ರತ್ಯಕ್ಷಳಾಗುತ್ತಾಳೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಇಂದು ರಾತ್ರಿ ಹೊತ್ತಿಗೆಲ್ಲಾ ಸ್ಪಷ್ಟ ಉತ್ತರ ಸಿಗಲಿದೆ.

 

 

ನಿರ್ದೇಶಕ ಈ ಹಿಂದೆ ಗೌರಿ ಮೇಲೆ ಪ್ರಯೋಗಿಸಿರುವ ಅಸ್ತ್ರಗಳನ್ನ ಗಮನಿಸಿದರೆ ಗೌರಿ ಮೈಮೇಲೆ ಸಾಕ್ಷಾತ್ ಕಾಳಿ ಮಾತೆಯನ್ನು ಬರಿಸುವ ಹುನ್ನಾರವೇನಾದರೂ ಇದೆಯಾ ಎಂಬ ಅನುಮಾನ ಧಾರಾವಾಹಿ ಮುಗಿಯುತ್ತದೆ ಎಂಬ ನಿರೀಕ್ಷೆಯಲ್ಲಿರುವವರನ್ನು ದಟ್ಟವಾಗಿ ಕಾಡುತ್ತಿದ್ದು ಮತ್ತೊಂದು ಭಯಂಕರ ಟ್ವಿಸ್ಟ್ ಕೊಡುವ ಮೂಲಕ ಧಾರಾವಾಹಿಯನ್ನು ಇನ್ನಷ್ಟು ಎಳೆಯಲು ಸಂಚು ನಡೆಸುತ್ತಿರುವ ಎಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿರುವುದರಿಂದ ಪುಟ್ಟಗೌರಿಗೆ ಟಾಟಾ ಹೇಳಬೇಕು ಎಂದು ಕೊಂಡವರಲ್ಲಿ ಒಂದು ರೀತಿಯ ಭೀಕರ ಭಯವೂ ಹುಟ್ಟುಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top