ಉಪಯುಕ್ತ ಮಾಹಿತಿ

ಕೈ , ಕಾಲು ಮತ್ತು ಕುತ್ತಿಗೆಗೆ ಕಪ್ಪು ದಾರ ಏಕೆ ಕಟ್ಟಿಕೊಳ್ಳುತ್ತಾರೆ ಗೊತ್ತಾ? ಇದರ ಹಿಂದಿರೋ ಕಾರಣ ಗೊತ್ತಾ ?

ಕೈ ಕಾಲು ಮತ್ತು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರ ಹಿಂದಿರುವ ಕಾರಣ ಅಥವಾ ಮಹತ್ವ ಏನೆಂದು ತಿಳಿಯೋಣ ಬನ್ನಿ

 

 

 

 

 

 

 

ನಾವು ಸಾಮಾನ್ಯವಾಗಿ ಅಲ್ಲಲ್ಲಿ ನೋಡುತ್ತಿರುತ್ತೇವೆ ಕೆಲವರು ಕಾಲಿಗೆ ಅಥವಾ ಕುತ್ತಿಗೆಗೆ ಅಥವಾ ಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಏಕೆ ? ಈ ರೀತಿ ಕಪ್ಪು  ದಾರವನ್ನು ಕಟ್ಟಿಕೊಳ್ಳುತ್ತಾರೆ ? ಎಂದು ನಾವು ಸಹ ಮನಸ್ಸಿನಲ್ಲಿ ಯೋಚಿಸುತ್ತೇವೆ. ಆದರೆ ನಮಗೆ ಸರಿಯಾದ ಕಾರಣ ಸಿಗುವುದಿಲ್ಲ. ಇಂದು ನಾವು ಅದಕ್ಕೆ ಸೂಕ್ತ ಕಾರಣ ಮತ್ತು ಅದರ ಹಿಂದಿರುವ ಮಹತ್ವವೇನೆಂದು ತಿಳಿದುಕೊಳ್ಳೋಣ

ಕಪ್ಪು ದಾರವನ್ನು ಕಟ್ಟಿಕೊಂಡರೆ ನಮ್ಮ ಮನಸ್ಸಿನ ಆಸೆಗಳು ಬೇಗನೇ ಈಡೇರುತ್ತದೆ. ಆದರೆ ಎಲ್ಲಿ ? ಮತ್ತು ಹೇಗೆ  ಕಟ್ಟಿಕೊಳ್ಳಬೇಕು ? ಎನ್ನುವುದನ್ನು ಸಹ ನಾವು  ಅವಶ್ಯಕವಾಗಿ ತಿಳಿದುಕೊಳ್ಳಬೇಕು .

 

 

 

 

 

 

ದೃಷ್ಟಿಯನ್ನು ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ. ಕೆಟ್ಟ ಪ್ರಭಾವ ನಮ್ಮ ಮೇಲೆ ಬೀಳಬಾರದೆಂದರೆ ಕಪ್ಪು ದಾರವನ್ನು ನಾವು ಕಟ್ಟಿಕೊಳ್ಳಬೇಕು.

ಪ್ರತಿ ಮನುಷ್ಯನ ದೇಹಕ್ಕೂ ಪಂಚಭೂತಗಳ ಅವಶ್ಯಕತೆ ತುಂಬಾನೆ ಇದೆ. ಅಂತಹ ಪಂಚಭೂತಗಳು ನಮ್ಮ ದೇಹಕ್ಕೆ  ಈ ಕೆಟ್ಟ ಕಣ್ಣಿನ ದೃಷ್ಟಿ ಬೀಳದಂತೆ ತಡೆಯುತ್ತವೆ. ಹೀಗೆ ನೆಡೆಯಬಾರದು ಎಂದರೆ ನಾವು ಕಪ್ಪು ದಾರವನ್ನು ನಮ್ಮ ದೇಹಕ್ಕೆ ಯಾವುದಾದರೂ ಒಂದು ಜಾಗದಲ್ಲಿ ಅಂದರೆ ಕೈ ,ಕಾಲು ಅಥವಾ ಕತ್ತಿನಲ್ಲಿ ಕಟ್ಟಿಕೊಳ್ಳಬೇಕು.

 

 

 

 

 

 

ಹೀಗೆ ಕಟ್ಟಿಕೊಳ್ಳುವುದರಿಂದ ಆ ಕೆಟ್ಟ ದೃಷ್ಟಿಯನ್ನು ನಾಶ ಮಾಡಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಯನ್ನು ಮಾತ್ರ ನಮ್ಮ ದೇಹಕ್ಕೆ ತಲುಪುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಈ ದಾರವನ್ನು ಸೊಂಟಕ್ಕೆ , ಕೈಗೆ ಕಟ್ಟುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಲ್ಲದೆ ದೇಹದ ಸಮತೋಲನವನ್ನು ಕೂಡ ಕಾಪಾಡುತ್ತದೆ.  ಕಪ್ಪು ದಾರಕ್ಕೆ ಅಧಿಕ ರಕ್ತದ ಒತ್ತಡವೂ ಸಹ ಹೆಚ್ಚಾಗದಂತೆ ನಿಯಂತ್ರಿಸುವ ಶಕ್ತಿ ಇದೆಯಂತೆ. ಅಲ್ಲದೆ ದೇಹದ ತೂಕವನ್ನು ಸಹ ಹೆಚ್ಚಾಗದಂತೆ ಕಾಪಾಡುತ್ತದೆಯಂತೆ .

 

 

 

 

 

 

ಒಂದು ಕಪ್ಪು ದಾರವನ್ನು ಖರೀದಿಸಿ ಅದಕ್ಕೆ ಒಂಬತ್ತು ಗಂಟುಗಳನ್ನು ಬಿಗಿದು ಮಂಗಳವಾರ ಅಥವಾ ಶನಿವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಅದನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿ. ಆ ಕಪ್ಪು ದಾರಕ್ಕೆ ಆಂಜನೇಯಸ್ವಾಮಿಯ ಕುಂಕುಮ ಅಥವಾ ಸಿಂಧೂರವನ್ನು ಹಚ್ಚಬೇಕು ನಂತರ ಅದನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಅಭಾವವೂ ಎಂದಿಗೂ ಎದುರಾಗುವುದಿಲ್ಲ ಹಾಗೆಯೇ ಇದೇ ರೀತಿಯಲ್ಲಿ ನಾವು ಸಹ ಪೂಜೆ ಮಾಡಿಸಿ ನಮ್ಮ ದೇಹಕ್ಕೆ ಕಟ್ಟಿಕೊಂಡರೆ ನಕಾರಾತ್ಮಕ ಶಕ್ತಿಗಳು ನಮ್ಮ ಬಳಿ ಸುಳಿಯುವುದಿಲ್ಲ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top