ಹೆಚ್ಚಿನ

ನಿಮ್ಮ ಮದ್ವೆ ವಿಳಂಬವಾಗ್ತಾಯಿದ್ರೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕಾರ್ಯವನ್ನು ನೆರವೇರಿಸಿ ಸಾಕು .

ನಿಮ್ಮ ಮದ್ವೆ ವಿಳಂಬವಾಗ್ತಾಯಿದ್ರೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕಾರ್ಯವನ್ನು ನೆರವೇರಿಸಿ ಸಾಕು .

ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕಾರ್ಯವನ್ನು ನೆರವೇರಿಸುವುದರಿಂದ, ಅಲ್ಲಿನ ದೇವರ ದರ್ಶನ ಪಡೆಯುವುದರಿಂದ ವಿವಾಹ ದೋಷ ದೂರವಾಗುತ್ತದೆ.

 

 

ಯಾಕೋ ಮೂವತ್ತು ವರ್ಷ ವಯಸ್ಸು ದಾಟಿದರೂ ಕೂಡ ಮದುವೆಯಾಗುತ್ತಲೇ ಇಲ್ಲ. ನಾನು ಹುಡುಕುತ್ತಲೇ ಇದ್ದೇನೆ. ಆದರೂ ಕೂಡ ಮದುವೆಯಾಗುತ್ತಿಲ್ಲ ಎನ್ನುವ ನೋವು ಮನಸ್ಸಿನಲ್ಲಿ ಇರುತ್ತದೆ. ವಿವಾಹ ವಿಳಂಬವಾಗುತ್ತಿದೆ, ಎಷ್ಟೇ ಪ್ರಯತ್ನ ಪಟ್ಟರೂ ವಿವಾಹ ಉಂಟಾಗುತ್ತಿಲ್ಲ, ಅಡೆತಡೆಗಳು ಎದುರಾಗುತ್ತಿವೆ , ಎನ್ನುವವರಿಗೆ ಒಂದು ಪರಿಹಾರ ಇದೆ .

ಎಷ್ಟು ದೇವಸ್ಥಾನ, ಪೂಜೆ, ದೇವಾಲಯ, ವ್ರತ, ಸಂಕಲ್ಪಗಳನ್ನು ಮಾಡಿದರೂ ಸಹ ವಿವಾಹವಾಗುತ್ತಿಲ್ಲ. ಹಲವಾರು ರೀತಿಯ ದೋಷ ಪರಿಹಾರದ ಪೂಜೆಗಳನ್ನು ಮಾಡಿದರೂ ಸಹ ವಿವಾಹವಾಗುತ್ತಿಲ್ಲ ಎನ್ನುವವರು, ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಯಾಕೆ ಈ ರೀತಿಯ ವಿಳಂಬವಾಗುತ್ತಿದೆ ? ಇದಕ್ಕೆ ಏನಾದರೂ ಪರಿಹಾರ ಇದೆಯೇ ? ಎನ್ನುವ ಹುಡುಕಾಟದಲ್ಲಿ ಇರುವವರಿಗೆ ಒಂದು ಉಪಾಯ ಇದೆ.

 

 

ಪರಿಹಾರ ಅಥವಾ ಉಪಾಯ ಏನೆಂದರೆ ಇದಕ್ಕೆ ವಿಶೇಷವಾದ ಒಂದು ಕ್ಷೇತ್ರವಿದೆ. ಇದು ಸಹ ಪದ್ಮ ಪುರಾಣದಲ್ಲಿ ಉಲ್ಲೇಖವಾಗಿದೆ. ಇದು ಯಾವ ಜ್ಯೋತಿಷಿಗಳು ಸಹ ಹೇಳುತ್ತಿರುವುದಲ್ಲ. ಪದ್ಮ ಪುರಾಣದಲ್ಲಿ, ಶಿವ ಪುರಾಣದಲ್ಲಿ ಉಲ್ಲೇಖವಾಗಿದೆ.

ಯಾರಿಗೆ ಮದುವೆಯಾಗಿಲ್ಲ ವಯಸ್ಸು ಮೀರಿಹೋಗಿದೆ. ಅಂಥವರು ಬಹಳಷ್ಟು ಯೋಚನೆ ಮಾಡುತ್ತಿದ್ದರೆ ಅಂಥವರು ತಿರುಮಲ ಕ್ಷೇತ್ರಕ್ಕೆ ಬಂದಾಗ ಕಪಿಲ ತೀರ್ಥ ಎನ್ನುವ ಕ್ಷೇತ್ರವಿದೆ. ಆ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಕಪಿಲೇಶ್ವರ ಸಾನ್ನಿಧ್ಯದಲ್ಲಿ ದರ್ಶನ ಮಾಡಿಕೊಂಡು , ಅರ್ಚನೆಯನ್ನು ಮಾಡಿಸಿ ತಿರುಮಲನಾಥನ ಸೇವೆ ಮಾಡಿ, ನಂತರ ಅಲ್ಲಿರುವ ಪದ್ಮಾವತಿ ದೇವಿಯ ದರ್ಶನ ಮಾಡಿ, ಐದು ಜನ ಸುಮಂಗಲಿಯರಿಗೆ ಅಂದರೆ ಮುತೈದೆಯರಿಗೆ ಮಡಿಲಕ್ಕಿಯನ್ನು ತುಂಬಿಸಿದರೆ, ಆಗ ಎಷ್ಟೇ ಮದುವೆಯ ವಯಸ್ಸು ಮೀರಿ ಹೋಗಿದ್ದರೂ ನಲವತ್ತು ವಯಸ್ಸು ದಾಟಿದ್ದರೂ ಕೂಡ ಮದುವೆಯ ಸೌಭಾಗ್ಯ ಒಲಿದು ಬಂದು ಕಂಕಣ ಭಾಗ್ಯ ಕೂಡಿ ಬರುತ್ತದೆ .

 

 

ಆದ್ದರಿಂದ ಯಾರಿಗೆ ಮದುವೆ ಭಾಗ್ಯ ಇದುವರೆಗೂ ಕೂಡಿ ಬಂದಿಲ್ಲವೋ ಅಂಥವರು ಹೋಗಿ ಈ ಕ್ಷೇತ್ರಕ್ಕೆ ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಸೇವೆ ಸಲ್ಲಿಸಿ ದರ್ಶನ ಮಾಡಿದರೆ, ನಿಮಗೂ ಕೂಡ ಕಂಕಣ ಭಾಗ್ಯ ಕೂಡಿ ಒಂದು ಉತ್ತಮವಾದ ವಧು, ವರ ಅಥವಾ ಸಂಗಾತಿ ದೊರೆಯುತ್ತಾರೆ.ವಿವಾಹವಾಗಿ ಸುಖಮಯವಾದ ಜೀವನವನ್ನು ನೆಡೆಸಬಹುದಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top