ಹೆಚ್ಚಿನ

ಮೇ 3ನೇ ತಾರೀಖು ಮಕರ ರಾಶಿಯಲ್ಲಿ ಕೇತು ಮತ್ತು ಕುಜ ಗ್ರಹಗಳ ಸಂಯೋಗವಾಗಿದ್ದು .ಇದರ ಪ್ರಭಾವ ಇನ್ನು 21 ದಿನಗಳ ಕಾಲ ಇದ್ದು ಈ 4 ರಾಶಿಗಳ ಮೇಲೆ ಬಾರಿ ಪರಿಣಾಮ ಬೀರಲಿದೆ

 ಮೇ 3ನೇ ತಾರೀಖು ಮಕರ ರಾಶಿಯಲ್ಲಿ ಕೇತು ಮತ್ತು ಕುಜ ಗ್ರಹಗಳ ಸಂಯೋಗವಾಗಿದ್ದು .ಇದರ ಪ್ರಭಾವ ಇನ್ನು 21 ದಿನಗಳ ಕಾಲ ಇದ್ದು ಈ 4 ರಾಶಿಗಳ ಮೇಲೆ ಬಾರಿ ಪರಿಣಾಮ ಬೀರಲಿದೆ  

ಕುಜ ಗ್ರಹವು ಧನಸ್ಸು ರಾಶಿಯಿಂದ ಮಕರ ರಾಶಿಗೆ ಮೇ ಮೂರನೇ ತಾರೀಖಿನಂದು ಪ್ರವೇಶ ಮಾಡಿದೆ. ಈ ಕಾರಣದಿಂದಾಗಿ ಕುಜ ಮತ್ತು ಕೇತು ಗ್ರಹದ ಸಮ್ಮಿಲನದಿಂದ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಕೆಲವು ರಾಶಿಗಳ ಮೇಲೆ ಗಂಭೀರ ಪರಿಣಾಮ ಕೂಡ ಬೀರಲಿದೆ. ಬನ್ನಿ ಆ ರಾಶಿಗಳು ಯಾವುವು ? ಯಾವ ರೀತಿಯ ಮುಂಜಾಗ್ರತೆ ಮತ್ತು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ? ಯಾವ ರೀತಿಯ ಪ್ರಭಾವ ಬೀರುತ್ತದೆ ? ಎಂಬುದನ್ನು ತಿಳಿದುಕೊಳ್ಳೋಣ.

 

ಈ ಕುಜ ಮತ್ತು ಕೇತು ಗ್ರಹಗಳ ಸಮ್ಮಿಲನವು ಇಪ್ಪತ್ತು ರಿಂದ ಇಪ್ಪತ್ತೊಂದು ದಿನಗಳ ಕಾಲ ಅಂದರೆ ಮೂರನೇ ತಾರೀಖಿನಿಂದ ಪ್ರಾರಂಭವಾಗಿ 21 ದಿನಗಳ ಕಾಲ ಅದರ ಪ್ರಭಾವ ಬೀರಲಿದೆ.ಸಾಮಾನ್ಯವಾಗಿ ಕುಜ ಉಚ್ಚದಲ್ಲಿದ್ದು, ಉಚ್ಚ ಕುಜನ ಜೊತೆಯಲ್ಲಿ ಕೇತು ಬಂದಿಯಾಗಿರುವುದರಿಂದ ಈ ರೀತಿಯಾದ ಒಂದು ಸಂದರ್ಭ ಸನ್ನಿವೇಶ ಬರುತ್ತದೆ .ಈ ಸಂದರ್ಭದಲ್ಲಿ ಯಾವುದೇ ರಾಶಿಯವರು ಸಹ ಭೂ ವ್ಯವಹಾರಗಳಿಗೆ ಕೈ ಹಾಕಬೇಡಿ. ಯಾವುದೇ ಭೂಮಿ ಖರೀದಿಸಿದರೂ ಸಹ, ಭೂಮಿ ದೋಷ ಅದರಲ್ಲಿ ಕಂಡುಬರುತ್ತದೆ . ಭೂಮಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ ಅಥವಾ ಭೂಮಿಗೆ ಸಂಬಂಧಪಟ್ಟ ಕಾಗದ ಪತ್ರದಲ್ಲಿ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ. ನೀವು ತೆಗೆದುಕೊಳ್ಳುವಂತಹ ಭೂಮಿ ಅಥವಾ ಆಯ್ಕೆ ಮಾಡುವ ಭೂಮಿ ಇಪ್ಪತ್ತು ಅಥವಾ 21 ದಿನಗಳ ಕಾಲದವರೆಗೆ ಇದೇ ಪರಿಸ್ಥಿತಿ ಇರುತ್ತದೆ.

ನೀವು ಆಯ್ಕೆ ಮಾಡುವ ಭೂಮಿಯಲ್ಲಿ ದೋಷವಿರುತ್ತದೆ. ಸಾಧ್ಯವಾದರೆ ಆಯ್ಕೆ ಮಾಡಿರುವ ಭೂಮಿಯ ಹಿನ್ನೆಲೆಯನ್ನು ತಿಳಿದುಕೊಳ್ಳಿ ಅಥವಾ ಕೂಲಂಕುಷವಾಗಿ ವಿಷಯವನ್ನು ಪರಿಶೀಲಿಸಿ. ಅಲ್ಲಿ ಪಾಳು ಬಿದ್ದ ಸ್ಥಿತಿ ಇರುತ್ತದೆ ಅಥವಾ ಆ ಹುತ್ತ ಇರುತ್ತದೆ. ಆ ಭೂಮಿಯಲ್ಲಿ ಸರ್ಪವಿದೆ, ಅಲ್ಲಿ ಅದು ಸಂಚಾರ ಮಾಡುವುದು. ನೀವು ಆಯ್ಕೆ ಮಾಡಿದ ಈ 20 -21 ದಿವಸಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರೊ ಆ ಆಯ್ಕೆ ಮಾಡುವಂತಹ ಭೂಮಿಯಲ್ಲಿ ಇಂತಹ ಒಂದು ದೋಷಗಳು ಕಂಡು ಬಂದೇ ಬರುತ್ತವೆ. ಆದ್ದರಿಂದ ನೀವು ಈ 21 ದಿನಗಳವರೆಗೆ ಯಾವುದೇ ಭೂ ವ್ಯವಹಾರಕ್ಕೆ ಕೈ ಹಾಕದೇ ಇರುವುದೇ ಒಳ್ಳೆಯದು.

ಇನ್ನು ರಾಶಿಗಳ ವಿಷಯಕ್ಕೆ ಬರುವುದಾದರೆ ಮುಖ್ಯವಾಗಿ .

ಮೇಷ ರಾಶಿ .

]

ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಅನುಕೂಲ ಪ್ರಾಪ್ತಿಯಾಗುತ್ತದೆ, ಉದ್ಯೋಗದಲ್ಲಿ ಪ್ರಗತಿ ಯಾಗುವುದಕ್ಕೆ ದಾರಿಯಾಗುತ್ತದೆ.

ಕುಂಭ ರಾಶಿ.

]

ದುಷ್ಟಶಕ್ತಿಗಳ ಕಾಟ, ಕನಸಿನಲ್ಲಿ ಬರೀ ದುಷ್ಟಶಕ್ತಿಗಳ ಕಾಟ, ಸಾವಿನ ಸುದ್ದಿಗಳು ಕನಸಿನಲ್ಲಿ ಬೀಳುತ್ತವೆ. ಸಾವಿನ ಕನಸುಗಳು ಬೀಳುತ್ತದೆ. ಆತ್ಮದ ಕನಸುಗಳು ಕೆಟ್ಟ ಕೆಟ್ಟ ಕನಸುಗಳು ಕಾಣಿಸುತ್ತವೆ. ಯಾರೂ ಸಾಯುತ್ತಿರುವ ಸ್ಥಿತಿಯಲ್ಲಿ ಕನಸುಗಳು ಬೀಳುವುದು, ಸರ್ಪಗಳು ಕನಸಿನಲ್ಲಿ ಕಾಣಿಸುವುದು, ಯಾರಿಗೂ ಏನು ತೊಂದರೆಯಾಗಿದೆ ಎನ್ನುವ ರೀತಿಯಲ್ಲಿ ಕಾಣುವಂಥದ್ದು ಅಥವಾ ನಿಮಗೆ ತೊಂದರೆಯಾಗಿದೆ ಎನ್ನುವ ರೀತಿಯಲ್ಲಿ ಕನಸು ಬೀಳುವುದು. ಇವೆಲ್ಲವೂ ಕೂಡ ಈ ಕುಂಭ ರಾಶಿಯವರಿಗೆ ಕೆಟ್ಟ ಪರಿಣಾಮವಾಗಿ ಈ 21 ದಿನಗಳವರೆಗೆ ಗೋಚರಿಸುತ್ತವೆ.

ಕನ್ಯಾ ರಾಶಿ.

]

ಯಾರೂ ಗರ್ಭವತಿಯಾಗಿರುವ ಸ್ತ್ರೀಯರು ಅಥವಾ ಗರ್ಭವನ್ನು ಧರಿಸಬೇಕು ಎನ್ನುವ ಸ್ತ್ರೀಯರು ಈ ಇಪ್ಪತ್ತು ದಿವಸಗಳ ಕಾಲ ಮುಂದೂಡುವುದು ಬಹಳ ಒಳ್ಳೆಯದು. ಎರಡನೆಯದಾಗಿ ಗರ್ಭವನ್ನು ಬೇರೆ ಧರಿಸಿರುವ ಗರ್ಭವತಿ ಸ್ತ್ರೀಯರು ಬಹಳ ಜಾಗ್ರತೆ ಮತ್ತು ಎಚ್ಚರಿಕೆಯಿಂದ ಇರಬೇಕಾದ ಸನ್ನಿವೇಶ ಅದರಲ್ಲೂ ಕೂಡ ನಾಲ್ಕನೇ ತಿಂಗಳು ಗರ್ಭವತಿಯಾಗಿರುವ ಸ್ತ್ರೀಯರು ಈ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಇಪ್ಪತ್ತೊಂದು ದಿವಸಗಳ ಕಾಲಾವಧಿಯಲ್ಲಿ ಈಗಾಗಲೇ ಏಳು ದಿವಸ ಕಳೆದು ಹೋಗಿರುವುದರಿಂದ ಇನ್ನು ಕೇವಲ ಹದಿನೈದು ದಿನಗಳವರೆಗೆ ಎಚ್ಚರಿಕೆಯಿಂದ ಇರಬೇಕು.

ಕಟಕ ರಾಶಿ.

]

ದಾಂಪತ್ಯದಲ್ಲಿ ವಿರಸಗಳು, ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು. ಅನಗತ್ಯ ವಿಚಾರಗಳು ಮಧ್ಯದಲ್ಲಿ ಸಿಲುಕಿ ಹಾಕಿ ಕೊಳ್ಳುತ್ತೀರಾ , ಅನಗತ್ಯವಾದ ಭಾವನೆಗಳು, ಪೆಟ್ಟು ಕೊಡುವಂತಹ ಸಾಧ್ಯತೆಗಳು ಇರುತ್ತವೆ.
ಇನ್ನುಳಿದ ಬಾಕಿ ರಾಶಿಗಳಿಗೆ ಸಣ್ಣಪುಟ್ಟ ವ್ಯತ್ಯಾಸಗಳು ಬಿಟ್ಟರೆ. ಉಳಿದೆಲ್ಲ ರಾಶಿಯವರಿಗೆ ಯಾವುದೇ ಗಂಭೀರ ಸಮಸ್ಯೆಗಳು ಕಾಡುವುದಿಲ್ಲ. ಈ ನಾಲ್ಕು ರಾಶಿಯವರಿಗೆ ಮಾತ್ರ ವ್ಯತ್ಯಾಸಗಳು ಕಾಣಿಸುತ್ತವೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top