ದೇವರು

ಕೆಟ್ಟ ಜನರ ಕಣ್ಣು ದೃಷ್ಟಿ ತಾಕಿ ಏನೇ ಮಾಡಿದ್ರು ಕೆಟ್ಟದಾಗ್ತಿದೆ ಅನ್ನೋರು ಸಾಸಿವೆ ಬಳ್ಸಿ ಈ ರೀತಿ ದೃಷ್ಟಿ ತಗಿರಿ ಸಾಕು ಎಲ್ಲಾ ಸರಿ ಹೋಗುತ್ತೆ

ಸಾಸಿವೆಯಿಂದ ಈ ರೀತಿಯಾಗಿ ದೃಷ್ಟಿ ತೆಗೆದರೆ ಯಾವ ನರ ದೃಷ್ಟಿಯೂ ಕೂಡ ನಿಮಗೆ ತಗಲುವುದಿಲ್ಲ.

 

 

ಕೆಲವರಿಗೆ ಬಹುಬೇಗ ದೃಷ್ಟಿಯಾಗುತ್ತದೆ. ಅದರಲ್ಲೂ ನವಜಾತ ಶಿಶುಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಬೇಗನೆ ದೃಷ್ಟಿಯೂ ತಗಲುತ್ತದೆ. ದೃಷ್ಟಿ ಎನ್ನುವುದು ಒಂದು ಬಗೆಯ ಮಾನಸಿಕ ಅಸಮತೋಲನವನ್ನು ಉಂಟು ಮಾಡುತ್ತದೆ .ದೂರ ಪ್ರಯಾಣ ಮಾಡಿದಾಗ ಅಥವಾ ಯಾವುದೇ ಶುಭ ಕಾರ್ಯ ಸಮಾರಂಭಗಳಿಗೆ ಹೋಗಿ ಬಂದಾಗ ಮೈಯೆಲ್ಲಾ ನೋವು ಕಾಣಿಸುತ್ತದೆ ಅಥವಾ ಮೈಯೆಲ್ಲಾ ಭಾರ ಅನಿಸುತ್ತದೆ. ಹೀಗೆ ಶರೀರ ಮಾತು ದೇಹ ನಿಸ್ತೇಜವಾಗಿ ಶಕ್ತಿಹೀನವಾದಂತೆ ನಿಮಗೆ ಭಾಸವಾಗುತ್ತದೆ. ಅದರ ಅರ್ಥ ಏನಪ್ಪ ಎಂದರೆ ದೃಷ್ಟಿ ಆಗಿದೆ ಎಂದು ತಿಳಿದುಕೊಳ್ಳಬೇಕು.

ಆದ್ದರಿಂದ ನಿಮ್ಮ ಮನೆಯಲ್ಲಿ ಹಿರಿಯರು ಇದ್ದಾರೆ ಎಂದರೆ ಅದಕ್ಕೆ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಹಿಂದಿನ ಕಾಲದಲ್ಲಿ ನೋಡಬಹುದಾಗಿತ್ತು ಹಾಗೂ ಈಗಲೂ ಕೆಲವು ಮನೆಗಳಲ್ಲಿ ನೋಡಬಹುದು .ದೃಷ್ಟಿಗಳು ಕೆಲವೊಮ್ಮೆ ಕೆಟ್ಟದಾಗಿ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

 

 

ಆಗ ಮಾಡಬೇಕಾಗಿರುವ ಕೆಲಸ ಏನೆಂದರೆ ಕೆಲವು ಸಾಸಿವೆ ಕಾಳುಗಳನ್ನು ತೆರೆದುಕೊಂಡು ಒಂದು ಚಮಚದಷ್ಟು ಸಾಸಿವೆಯನ್ನು ತೆಗೆದುಕೊಂಡು ದೃಷ್ಟಿ ಆದವರನ್ನು ಮುಂದೆ ಕೂಡಿಸಿಕೊಂಡು, ಮೌನವಾಗಿ ಇರಬೇಕು , ಅಂದರೆ ದೃಷ್ಟಿ ತೆಗೆಯುವವರು ಮತ್ತು ದೃಷ್ಟಿ ತೆಗೆಸಿಕೊಳ್ಳುವವರು  ಇಬ್ಬರೂ ಮೌನವಾಗಿ ಇರಬೇಕು.

ಸಾಸಿವೆ ಕಾಳನ್ನು ನಿಮ್ಮ ಕೈಯ ಮುಷ್ಟಿಯಲ್ಲಿ ಹಿಡಿದುಕೊಂಡು, ಕೆಳಗಿನಿಂದ ಮೇಲಿನವರೆಗೆ, ಮುಂಭಾಗದಿಂದ ಹಿಂಭಾಗದವರೆಗೆ, ಅಕ್ಕ ಪಕ್ಕ, ಹೀಗೆ ನಾಲ್ಕು ದಿಕ್ಕುಗಳಲ್ಲಿಯೂ ಕೂಡ  ಮೂರು ಬಾರಿ ದೃಷ್ಟಿ ತೆಗೆದು ಆ ಸಾಸಿವೆ ಕಾಳುಗಳನ್ನು ತೆಗೆದುಕೊಂಡು ಹೋಗಿ ಉರಿಯುತ್ತಿರುವ ಬೆಂಕಿಯಲ್ಲಿ ಹಾಕಿದರೆ, ಆ ಸಾಸಿವೆ ಕಾಳು ಚಿಟಪಟ ಎಂದು ಒಂದು ಬಗೆಯ ಕೆಟ್ಟದಾದ ವಾಸನೆಯನ್ನು ಮನೆಯಲ್ಲಿ ಹರಡುತ್ತದೆ. ಆಗ ಇಂತಹ ವಾಸನೆಯೂ ನಮಗೆ ಕೆಟ್ಟ ದೃಷ್ಟಿ ತಾಗಿದೆ ಎಂದು ಖಚಿತಪಡಿಸುತ್ತದೆ. ಹೀಗೆ ಸಾಸಿವೆ ಕಾಳಿನ ಹೊಗೆಯು ಸಹ ಮನೆಯಲ್ಲಿ ಹರಡುವುದರಿಂದ ಕೂಡ ಮನೆಗೆ ಒಳ್ಳೆಯದು ಮನೆಯಲ್ಲಿರುವ ಕೆಟ್ಟ ಮತ್ತು ನಕಾರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತವೆ .

 

 

ಆ ದೃಷ್ಟಿ ತೆಗೆಸಿಕೊಂಡ ವ್ಯಕ್ತಿಗೆ, ಮಾನಸಿಕವಾಗಿಯೂ ಒಂದು ರೀತಿಯಲ್ಲಿ ಧೈರ್ಯ ಮತ್ತು ವಿಶ್ವಾಸ ಉಂಟಾಗಿ ಮತ್ತೆ ಯಶಸ್ಸು ಮತ್ತು ಚೈತನ್ಯ ಆ ವ್ಯಕ್ತಿಯ ಮನಸ್ಸಿನಲ್ಲಿ ಮೂಡುತ್ತದೆ. ಹೀಗೆ ಸಾಸಿವೆ ಕಾಳಿನಿಂದ ದೃಷ್ಟಿಯನ್ನು ತೆಗೆಸಿಕೊಳ್ಳುವುದು ಇದು ಇಂದಿನ ಪದ್ಧತಿಯಲ್ಲ, ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.

 

 

ಇದು ವಿಜ್ಞಾನದ ದೃಷ್ಟಿಯಿಂದ ನೋಡಿದರೂ ಕೂಡ ಸತ್ಯವಾಗಿದೆ ಹಾಗೂ ಮನೋವಿಜ್ಞಾನದ ದೃಷ್ಟಿಯ ರೀತಿಯಲ್ಲಿ ನೋಡಿದರೂ ಕೂಡ ಇದು ಅಕ್ಷರಶಃ ಸತ್ಯ ಎಂದು ತಿಳಿಯಬಹುದು. ಇದು ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುವ ಶಾರೀರಿಕವಾಗಿ ಶರೀರಕ್ಕೆ ಶಕ್ತಿಯನ್ನು ಒದಗಿಸುವಂತಹ ಒಂದು ಪ್ರಕ್ರಿಯೆಯಾಗಿದೆ. ಆದ್ದರಿಂದ ಯಾರಿಗಾದರೂ ಕೆಟ್ಟ ದೃಷ್ಟಿ ಆಗಿದೆ ಎಂದರೆ, ನೀವು ಮನೆಯಲ್ಲಿ ಸಾಸಿವೆ ಕಾಳನ್ನು ಬಳಸಿ ಸುಲಭವಾಗಿ ದೃಷ್ಟಿ ತೆಗೆದು ಹಾಕಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top