ಭವಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ದಿನ ಗೊತ್ತಿದ್ರೆ ಸಾಕು ನಿಮ್ಮ ವ್ಯಕ್ತಿತ್ವ, ಅದೃಷ್ಟ ಸಂಖ್ಯೆ ಮತ್ತು ಅದೃಷ್ಟದ ಬಣ್ಣ ಚನ್ನಾಗಿ ತಿಳ್ಕೋಬೋದು

ಸಂಖ್ಯಾಶಾಸ್ತ್ರದ ಪ್ರಕಾರ ನೀವು ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಅದೃಷ್ಟ ಸಂಖ್ಯೆ ಮತ್ತು  ಅದೃಷ್ಟದ  
ಬಣ್ಣವನ್ನು ತಿಳಿದುಕೊಳ್ಳಬಹುದು.

ಸಂಖ್ಯೆ ಒಂದು.

ಯಾವುದೇ ತಿಂಗಳಿನಲ್ಲಿ ದಿನಾಂಕ ಒಂದು, ಹತ್ತು, ಹತ್ತೊಂಬತ್ತು ಮತ್ತು  28 ನೇ ತಾರೀಖಿನಂದು ಜನಿಸಿದ್ದರೆ ಅವರ ಸಂಖ್ಯೆ ಒಂದು ಎಂದು ಪರಿಗಣಿಸಲಾಗುವುದು.

ಇವರು ನೈಜತೆಯ ಸ್ವಭಾವವನ್ನು ಹೊಂದಿರುವವರು. ಹೊಸ ಹೊಸ ಆಲೋಚನೆಗಳು  ಇವರ ತಲೆಯಲ್ಲಿ ಸದಾಕಾಲ ಸಂಚರಿಸುತ್ತಿರುತ್ತವೆ. ಇದು  ಅವರ ನೈಸರ್ಗಿಕ ಪ್ರತಿಭೆ ಎನ್ನಬಹುದು . ತಮ್ಮದೇ ಆದ ರೀತಿಯಲ್ಲಿ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಅತ್ಯಂತ ಪ್ರಾಮಾಣಿಕ ಸ್ವಭಾವದವರು. ಇವರಿಗೆ ಸ್ವಲ್ಪ ಆಟ ಹೆಚ್ಚೆಂದು ಸಹ ಹೇಳಬಹುದಾಗಿದೆ. ಇವರು ರಾಜತಾಂತ್ರಿಕ ಕೌಶಲ್ಯವನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಕಲಿಯುತ್ತಾರೆ. ಇವರ ಗುಣ ಮತ್ತು ಸ್ವಭಾವವೂ ಸೂರ್ಯನ ರೀತಿಯಲ್ಲಿಯೇ ಇರುತ್ತದೆ . ಅಂದರೆ ತಂದೆಯ ರೀತಿಯಲ್ಲಿ ಇರುವುದು. ಇವರನ್ನು ಆಳುವ ಗ್ರಹ ಸೂರ್ಯ ಗ್ರಹ.

ಇವರ ಅದೃಷ್ಟದ ಸಂಖ್ಯೆ ಒಂದು ,ಮೂರು, ಐದು, ನಾಲ್ಕು ಮತ್ತು ಒಂಬತ್ತು.

ಅದೃಷ್ಟದ ಬಣ್ಣ ಕಿತ್ತಳೆ ಬಣ್ಣ, ಬಂಗಾರದ ಬಣ್ಣ ಮತ್ತು ಕೇಸರಿ ಬಣ್ಣ .

 

 

ಸಂಖ್ಯೆ ಎರಡು.

 

ಇವರು ಯಾವುದೇ ತಿಂಗಳಿನ ದಿನಾಂಕ ಎರಡು, ಹನ್ನೊಂದು, ಇಪ್ಪತ್ತು ಮತ್ತು 29 ನೇ ತಾರೀಖಿನಂದು ಜನಿಸಿದ್ದರೆ. ಇವರ ಸಂಖ್ಯೆ ಎರಡು ಆಗುವುದು.

ಇವರು ಸದಾ ಬೇರೆಯವರ ಅಗತ್ಯತೆಗಳನ್ನು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆ ಹೆಚ್ಚು ತಿಳಿದಿರುತ್ತಾರೆ.ನೈಸರ್ಗಿಕವಾಗಿ ವಿಶ್ಲೇಷಣಾ ಸಾಮರ್ಥ್ಯವನ್ನು ಹೊಂದಿರುತ್ತಾರೆ .ಇವರು ಹೆಚ್ಚು ಕಾಲ ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಯೋಗ್ಯವಾದ ಜೀವನ ನಡೆಸಲು ಸ್ನೇಹಿತರು ಮತ್ತು ಬಂಧು ಬಾಂಧವರ ನಡುವೆ ಒಡನಾಟ ಇರಬೇಕೆಂದು ಬಯಸುತ್ತಾರೆ .ಇವರ ಸಂಖ್ಯೆ ಎರಡು ಆದ್ದರಿಂದ ತಾಯಿಯ ಗುಣ ಮತ್ತು ಶಾಂತವಾದ ಸ್ವಭಾವವನ್ನು ಹೊಂದಿರುತ್ತಾರೆ . ಇವರನ್ನು ಆಳುವ ಗ್ರಹ ಚಂದ್ರಗ್ರಹ .

ಇವರ ಅದೃಷ್ಟ ಸಂಖ್ಯೆ ಐದು ,ಆರು, ಮೂರು, ಏಳು .

ಇವರ  ಅದೃಷ್ಟದ ಬಣ್ಣ ಹಳದಿ, ಹಸಿರು .

 

ಸಂಖ್ಯೆ ಮೂರು.

ಇವರು ಯಾವುದೇ ತಿಂಗಳಿನಲ್ಲಿ ದಿನಾಂಕ ಮೂರು ,ಹನ್ನೆರಡು, ಇಪ್ಪತ್ತೊಂದು ಮತ್ತು  31 ನೇ ತಾರೀಖಿನಂದು  ಜನಿಸಿದ್ದರೆ ಇದರ ಸಂಖ್ಯೆ ಮೂರು ಆಗುವುದು.

ಇವರು ಆದರ್ಶವಾದಿಗಳು .ಅತ್ಯಂತ ಸೃಜನಾತ್ಮಕ, ಸಾಮಾಜಿಕ ,ಆಕರ್ಷಕ, ಪ್ರಣಯ ಭಾವ ಹೊಂದಿದವರಾಗಿರುತ್ತಾರೆ. ಎಲ್ಲರೊಂದಿಗೆ ಸುಲಭವಾಗಿ ಹೊಂದಿಕೊಂಡು ಹೋಗುವ ಸ್ವಭಾವ ಇವರದ್ದು. ಹೆಚ್ಚು ಜನಪ್ರಿಯವಾದ ವ್ಯಕ್ತಿತ್ವ ಇವರದ್ದು. ವಾಸ್ತವಿಕ ದೃಷ್ಟಿಕೋನದಿಂದ ಜಗತ್ತನ್ನು ನೋಡುತ್ತಾರೆ. ಇತರರು ಸಂತೋಷವಾಗಿರುವಂತೆ ಕಾಣಲು ಬಯಸುತ್ತಾರೆ. ಇವರನ್ನು ಆಳುವ ಗ್ರಹ ಗುರು ಗ್ರಹ .

ಇವರಿಗೆ ಅದೃಷ್ಟದ ಸಂಖ್ಯೆ ಒಂಬತ್ತು, ಒಂದು, ಎಂಟು ಮತ್ತು  ಆರು. ಅತ್ಯಂತ ಹೆಚ್ಚು ಹೊಂದಾಣಿಕೆಯಾಗುವ ಸಂಖ್ಯೆ ಒಂಬತ್ತು ಮತ್ತು ಮೂರು.  ಒಂಬತ್ತು ಮತ್ತುಮೂರರ ನಡುವಿನ ಸಂಬಂಧ ಅರಿಶಿನ ಮತ್ತು ಕುಂಕುಮ ರೀತಿಯಲ್ಲಿ ಇರುವುದು.

ಇವರ ಅದೃಷ್ಟದ ಬಣ್ಣ  ಹಳದಿ ಬಣ್ಣ ಮತ್ತು ಕೆಂಪು ಬಣ್ಣ. ಮತ್ತು ಎಲ್ಲಾ ಹಳದಿ ಬಣ್ಣದ ಹಣ್ಣುಗಳು ಸಹ ಇವರಿಗೆ ಅದೃಷ್ಟವನ್ನು ತಂದುಕೊಡುತ್ತವೆ.

 

ಸಂಖ್ಯೆ ನಾಲ್ಕು.

ಯಾವುದೇ ತಿಂಗಳಿನಲ್ಲಿ ದಿನಾಂಕ ನಾಲ್ಕು ,ಹದಿಮೂರು,22 ಮತ್ತು 31ನೇ ತಾರೀಖಿನಂದು  ಹುಟ್ಟಿದ್ದರೆ ಅವರ ಸಂಖ್ಯೆ ನಾಲ್ಕು ಎಂದು ಪರಿಗಣಿಸಲಾಗುವುದು .

ಇವರು ಸಂವೇದನಾಶೀಲರು ಮತ್ತು ಸಾಂಪ್ರದಾಯಿಕ ಪ್ರಿಯರು. ಇವರು ಸದಾ ಆದೇಶ ಮಾಡುವ ಸ್ವಭಾವದವರು. ಕೆಲವೊಮ್ಮೆ ಮೊಂಡುತನದ ಸ್ವಭಾವವನ್ನು ಸಹ ತೋರುತ್ತಾರೆ .ಸುಳ್ಳು ಹಾಗೂ ನಾಟಕವನ್ನು ದ್ವೇಷಿಸುತ್ತಾರೆ. ಇನ್ನೂ  ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳಲಾರರು. ತುಂಬಾ ಸೂಕ್ಷ್ಮವಾದ ಮನಸ್ಸನ್ನು ಹೊಂದಿರುವವರು .ಇವರನ್ನು ಆಳುವ ಗ್ರಹ ರಾಹು ಗ್ರಹ ಅಂದರೆ ಹಾವಿನ ತಲೆಯ ಭಾಗ.

ಇವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಎಂದರೆ ಆರು, ಎಂಟು, ಏಳು, ಒಂದು, ಮೂರು ಮತ್ತು ಐದು .ಇದರಲ್ಲಿ ಅತ್ಯುತ್ತಮ ಹೊಂದಾಣಿಕೆಯಾಗುವ ಸಂಖ್ಯೆ ಎಂದರೆ ನಾಲ್ಕು ಮತ್ತು ಆರು.

ಇವರಿಗೆ ಅದೃಷ್ಟದ ಬಣ್ಣ ನೀಲಿ ಬಣ್ಣ. ರಾಹು ದೋಷಕ್ಕೆ ಒಣ ಹಣ್ಣುಗಳಾದ ದ್ರಾಕ್ಷಿ, ಬಾದಾಮಿ, ಗೋಡಂಬಿ ಮತ್ತು  ಖರ್ಜೂರವನ್ನು ಶಿವನ ದೇವಸ್ಥಾನದಲ್ಲಿ ದಾನ ಮಾಡಬೇಕು.

 

 ಸಂಖ್ಯೆ ಐದು.

ಇವರು ಯಾವುದೇ ತಿಂಗಳಿನಲ್ಲಿ ದಿನಾಂಕ ಐದು, ಹದಿನಾಲ್ಕು ಮತ್ತು 23 ನೇ ತಾರೀಖಿನಂದು ಹುಟ್ಟಿದ್ದರೆ ಇವರ ಸಂಖ್ಯೆ ಐದು ಎಂದು ಪರಿಗಣಿಸಲಾಗುವುದು .

ಇವರು ಪರಿಶೋಧಕರು ಎಂದು ಹೇಳುತ್ತಾರೆ .ತುಂಬಾ ಕುತೂಹಲಕಾರಿ ಸ್ವಭಾವ ಇವರದ್ದು. ಇವರು ಸದಾ ವೈವಿಧ್ಯತೆಯಿಂದ ಇರುವುದನ್ನು ಬಯಸುತ್ತಾರೆ. ತುಂಬಾ ಬುದ್ಧಿವಂತರು. ಇವರ ಬುದ್ಧಿವಂತಿಕೆಯನ್ನು ಧನಾತ್ಮಕವಾಗಿಯೂ ಬೇಕಾದರೂ ಉಪಯೋಗಿಸಬಹುದು ನಕಾರಾತ್ಮಕತೆಗೆ ಬೇಕಾದರು ಉಪಯೋಗಿಸಬಹುದು. ಅಂದರೆ ಕೆಟ್ಟದ್ದಕ್ಕೂ ಮತ್ತು ಒಳ್ಳೆಯದಕ್ಕೂ ಎರಡಕ್ಕೂ ಸಹ ಇವರ ಬುದ್ಧಿವಂತಿಕೆಯನ್ನು ಇವರು ಉಪಯೋಗಿಸುತ್ತಾರೆ.ಇವರನ್ನು ಆಳುವ ಗ್ರಹ ಬುಧ ಗ್ರಹ.

ಇವರಿಗೆ ಅದೃಷ್ಟದ ಸಂಖ್ಯೆ ಎರಡು, ಒಂದು ,ಮತ್ತು ಆರು .ಅದರಲ್ಲೂ ಅತ್ಯುತ್ತಮವಾದ ಸಂಖ್ಯೆ ಎಂದರೆ ಐದು ಮತ್ತು ಎರಡು .ಐದು ಮತ್ತು ಮೂರಕ್ಕೆ ಆಗುವುದಿಲ್ಲ.

ಇವರಿಗೆ ಅದೃಷ್ಟದ ಬಣ್ಣ ಹಸಿರು ನೀಲಿ ಕೆಂಪು ಮತ್ತು ಬಿಳಿ .

ಸಂಖ್ಯೆ ಆರು.

ಯಾವುದೇ ತಿಂಗಳಿನಲ್ಲಿ ದಿನಾಂಕ ಆರು, ಹದಿನೈದು, ಇಪ್ಪತ್ತ್ನಾಲ್ಕನೇ ತಾರೀಖಿನಂದು  ಹುಟ್ಟಿದ್ದರೆ ಇವರ ಸಂಖ್ಯೆ ಆರು ಎಂದು ಪರಿಗಣಿಸಲಾಗುವುದು.

ಇವರು ಶ್ರೀಮಂತ ಮಕ್ಕಳಾಗಿ ಹುಟ್ಟುತ್ತಾರೆ.ಹುಟ್ಟುತ್ತಾ ಶ್ರೀಮಂತರಾಗಿ ಹುಟ್ಟದೇ ಇರದಿದ್ದರೂ ಸಹ ದೊಡ್ಡವರಾಗಿ ಬೆಳೆದ ಮೇಲೆ ಇವರು ಖಂಡಿತವಾಗಿಯೂ ಶ್ರೀಮಂತ ವ್ಯಕ್ತಿಗಳಾಗಿ ಜೊತೆಗೆ ಹೆಸರನ್ನು ಗಳಿಸಿ ಜನಪ್ರಿಯ ವ್ಯಕ್ತಿಗಳಾಗುತ್ತಾರೆ ಆದರ್ಶವಾದಿಗಳು ಇವರು .ಸದಾ ಸಂತೋಷವಾಗಿರಲು ಇಷ್ಟಪಡುತ್ತಾರೆ. ಬೇರೆಯವರ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ . ನಿಷ್ಠಾವಂತರಾದ ಇವರು ಉತ್ತಮ ಶಿಕ್ಷಕರು ಎಂದು ಹೇಳಬಹುದು ಹಾಗೆ ಉತ್ತಮ ಸಹಾಯಕರು ಕೂಡ.ಇವರನ್ನು ಆಳುವ ಗ್ರಹ ಶುಕ್ರ ಗ್ರಹ.

ಇವರಿಗೆ ಅದೃಷ್ಟದ ಸಂಖ್ಯೆ ನಾಲ್ಕು, ಎಂಟು ,ಎರಡು ಮತ್ತು ಐದು.

ಇವರಿಗೆ ಅದೃಷ್ಟದ ಬಣ್ಣ ನೀಲಿ ಮತ್ತು ಬಿಳಿ.

ಈ ಆರನೇ ಸಂಖ್ಯೆ ಬರುವ ಸಂಖ್ಯೆಯಲ್ಲಿ ಹುಟ್ಟಿದ ಜನಪ್ರಿಯ ವ್ಯಕ್ತಿಗಳೆಂದರೆ ತಮಿಳುನಾಡಿನ ಮಾಜಿ  ದಿವಂಗತ ಮುಖ್ಯಮಂತ್ರಿ ಜಯಲಲಿತಾ,ಸಚಿನ್ ತೆಂಡೂಲ್ಕರ್, ಡಾಕ್ಟರ್ ರಾಜಕುಮಾರ ಮತ್ತು ಅಬ್ದುಲ್ ಕಲಾಂ .

ಸಂಖ್ಯೆ ಏಳು .

ಯಾವುದೇ ತಿಂಗಳಿನಲ್ಲಿ ದಿನಾಂಕ ಏಳು ಹದಿನಾರು ಮತ್ತು 25 ನೇ ತಾರೀಖಿನಂದು ಹುಟ್ಟಿದ್ದರೆ ಅವರ ಸಂಖ್ಯೆ ಏಳು ಎಂದು ಪರಿಗಣಿಸಲಾಗುತ್ತದೆ.

ಇವರು ಸಂಶೋಧಕ ಸ್ವಭಾವದವರು. ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲಾರರು . ಭಾವನೆಗಳನ್ನು ಸುಲಭವಾಗಿ  ಯಾರೊಂದಿಗೂ ವ್ಯಕ್ತಪಡಿಸುವುದಿಲ್ಲ. ಇವರು ಎಲ್ಲವನ್ನೂ ಪ್ರಶ್ನಿಸುವ ಸ್ವಭಾವದವರು. ಬೇರೆಯವರು ಇವರನ್ನು ಪ್ರಶ್ನಿಸುವುದನ್ನು  ಇಷ್ಟಪಡದವರು. ಜ್ಞಾನಿಗಳಾದ ಇವರು ತತ್ವ ಜ್ಞಾನಿಗಳಂತೆ ವರ್ತಿಸುತ್ತಾರೆ .ದೈವಿಕ ಗುಣ ಉಳ್ಳವರು ಧಾರ್ಮಿಕತೆಯ ಕಡೆಗೆ ಹೆಚ್ಚು ಒಲವನ್ನು ತೋರುತ್ತಾರೆ .ಯಾರ ಜೊತೆಗೂ ಸಹ ಹೆಚ್ಚು ಮಾತನಾಡುವುದಿಲ್ಲ. ಒಂಟಿಯಾಗಿ ಇರಲು ಅಧಿಕವಾಗಿ ಇಷ್ಟಪಡುವ ವ್ಯಕ್ತಿಗಳು.ಇವರನ್ನು ಆಳುವ ಗ್ರಹ ಕೇತು ಗ್ರಹ.

ಇವರಿಗೆ ಅದೃಷ್ಟದ ಸಂಖ್ಯೆಗಳು ಎರಡು ಮತ್ತು ನಾಲ್ಕು .

ಇವರಿಗೆ ಅದೃಷ್ಟದ ಬಣ್ಣ ಎಲ್ಲಾ ತೆಳುವಾದ ಬಣ್ಣಗಳು ಅದೃಷ್ಟದ ಬಣ್ಣಗಳೇ .

 

 

ಸಂಖ್ಯೆ ಎಂಟು .

ಯಾವುದೇ ತಿಂಗಳಿನಲ್ಲಿ ದಿನಾಂಕ ಎಂಟು, ಹದಿನೇಳು ಮತ್ತು ಇಪ್ಪತ್ತಾರನೇ ತಾರಿಖಿನಂದು ಹುಟ್ಟಿದ್ದರೆ ಅವರ ಸಂಖ್ಯೆ ಎಂಟು ಎಂದು ಪರಿಗಣಿಸಲಾಗುವುದು.

ಇವರು ಮೊಂಡು ಸ್ವಭಾವದವರು. ಇವರು ಉತ್ತಮ ತೀರ್ಪುಗಾರರು ಎಂದು ಸಹ ಹೇಳಬಹುದು .ನಾಯಕ ಸ್ವಭಾವ ಇವರದ್ದು. ಜನರನ್ನು ಹೆಚ್ಚು ನಿಷ್ಠೆಯಿಂದ ಸ್ವೀಕರಿಸುತ್ತಾರೆ. ಬೇರೆಯವರು ಏನು ಹೇಳಲು ಬಯಸುತ್ತಾರೆ ಎನ್ನುವುದನ್ನು ಕೇಳುವ ತಾಳ್ಮೆ ಇವರಲ್ಲಿ ಇದೆ.ಇವರಲ್ಲಿ ಹೆಚ್ಚು ಕ್ಷಮಾ ಗುಣ ಇದೆ ಮತ್ತು  ಅಷ್ಟೇ ಕಠಿಣ ಪರಿಶ್ರಮ ಜೀವಿಗಳು ಕೂಡ. ಇವರನ್ನು ಆಳುವ ಗ್ರಹ  ಶನಿ ಗ್ರಹ .

ಇವರಿಗೆ ಅದೃಷ್ಟದ ಸಂಖ್ಯೆ ಮೂರು ನಾಲ್ಕು ಮತ್ತು ಆರು.

ಇವರಿಗೆ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು.

 

ಸಂಖ್ಯೆ ಒಂಬತ್ತು.

ಯಾವುದೇ ತಿಂಗಳಿನಲ್ಲಿ ದಿನಾಂಕ ಒಂಬತ್ತು, ಹದಿನೆಂಟು ಮತ್ತು  27ನೇ ತಾರೀಖಿನಂದು ಹುಟ್ಟಿದ್ದರೆ ಅವರ ಸಂಖ್ಯೆ ಒಂಬತ್ತು ಎಂದು ಪರಿಗಣಿಸಲಾಗುವುದು.

 

ಇವರು ಉತ್ತಮ ಪ್ರದರ್ಶನಕಾರರು. ನೈಸರ್ಗಿಕವಾಗಿಯೇ ಮನರಂಜನೆ ನೀಡಬಲ್ಲ ಸಾಮರ್ಥ್ಯ ಉಳ್ಳವರು. ಉದಾರ ಸ್ವಭಾವದವರೂ. ಇವರು ಇತರರ ಬಗ್ಗೆ ಕಾಳಜಿ ಹೆಚ್ಚಾಗಿ ವಹಿಸುತ್ತಾರೆ. ಜೊತೆಗೆ ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ .ಸಮಯಕ್ಕೆ ತಕ್ಕಂತೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವವರು. ಇವರು ಅದೃಷ್ಟವಂತರು ಎಂದು ಸಹ ಹೇಳಬಹುದಾಗಿದೆ. ಇವರನ್ನು ಆಳುವ ಗ್ರಹ ಕುಜ ,ಮಂಗಳ ಅಥವಾ ಅಂಗಾರಕ ಗ್ರಹ .

ಇವರಿಗೆ ಅದೃಷ್ಟದ ಸಂಖ್ಯೆ ಒಂದು ಮತ್ತು ಮೂರು.

ಅದೃಷ್ಟದ ಬಣ್ಣ ಕಿತ್ತಳೆ ಬಣ್ಣ, ಕೇಸರಿ ಬಣ್ಣ ಮತ್ತು ಕೆಂಪು ಬಣ್ಣ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top