ತಿಂಡಿ ತೀರ್ಥ

ಕರಾವಳಿ ಸ್ಪೆಷಲ್ ರುಚಿಕರವಾದ ಕೋರಿ ಸುಕ್ಕಾ ಮಾಡುವ ಸುಲಭ ವಿಧಾನ..

ಕೋರಿ ಸುಕ್ಕ /ಚಿಕನ್ ಸುಕ್ಕ :

 

ಬೇಕಾಗುವ ಸಾಮಗ್ರಿಗಳು :

 

ಚಿಕ್ಕದಾಗಿ ಕತ್ತರಿಸಿಕೊಂಡ ಚಿಕನ್ 1 ಕೆಜಿ
ಚೆನ್ನಾಗಿ ತುರಿದುಕೊಂಡ ತೆಂಗಿನ ಕಾಯಿ ಒಂದು ಕಪ್
ಶುಂಠಿ
ಬೆಳ್ಳುಳ್ಳಿ
ಜೀರಿಗೆ ಒಂದು ಚಮಚ

20 ಬ್ಯಾಡಗಿ ಮೆಣಸಿನ ಕಾಯಿ
10 ಗುಂಟೂರ್ ಮೆಣಸಿನ ಕಾಯಿ
3 ಚಮಚ ಧನಿಯಾ ಬೀಜ
1 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಜೀರಿಗೆ

ಕಾಲು ಚಮಚ ಮೆಂತ್ಯ
1 ಚಮಚ ಅರಿಶಿಣ ಪುಡಿ
ಸ್ವಲ್ಪ ಹುಣಸೆ
2 ಚೆನ್ನಾಗಿ ಕತ್ತರಿಸಿಕೊಂಡ ಈರುಳ್ಳಿ
ಉಪ್ಪು

ಎಣ್ಣೆ
ತುಪ್ಪ

ಮಾಡುವ ವಿಧಾನ :

 

 

ಒಂದು ಬಾಣಲೆಯಲ್ಲಿ ಜೀರಿಗೆ ,ಬೆಳ್ಳುಳ್ಳಿ ಮತ್ತು ತುರಿದುಕೊಂಡ ತೆಂಗಿನ ಕಾಯಿಯನ್ನು ಚೆನ್ನಾಗಿ ಹುರಿದು ಕೊಳ್ಳಿ .

ಇನ್ನೊಂದು ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ ನಂತರ ಅದಕ್ಕೆ ಧನಿಯಾ ಬೀಜ ,ಜೀರಿಗೆ ,ಕಾಳು ಮೆಣಸು ,ಬ್ಯಾಡಗಿ ಮೆಣಸಿನ ಕಾಯಿ ಮತ್ತು ಗುಂಟೂರ್ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಬಡಿಸಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ .

ನಂತರ ಮೊದಲಿಗೆ ಡ್ರೈ ರೋಸ್ಟ್ ಮಾಡಿಕೊಂಡ ಜೀರಿಗೆ ,ಬೆಳ್ಳುಳ್ಳಿ ಮತ್ತು ತುರಿದುಕೊಂಡ ತೆಂಗಿನ ಕಾಯಿಯನ್ನು ಚೆನ್ನಾಗಿ ನೀರು ಹಾಕದೆ ರುಬ್ಬಿಕೊಳ್ಳಿ .

ನಂತರ ಮಿಕ್ಸಿಯಲ್ಲಿ ತುಪ್ಪದಲ್ಲಿ ಹುರಿದುಕೊಂಡ ಧನಿಯಾ ಬೀಜ ,ಜೀರಿಗೆ ,ಕಾಳು ಮೆಣಸು ,ಬ್ಯಾಡಗಿ ಮೆಣಸಿನ ಕಾಯಿ ಮತ್ತು ಗುಂಟೂರ್ ಮೆಣಸಿನ ಕಾಯಿ ಅದಕ್ಕೆ ಅರಿಶಿಣ ಪುಡಿ ,4 ಎಸಳು , ಬೆಳ್ಳುಳ್ಳಿ ,ಸ್ವಲ್ಪ ಹುಣಸೆ ಮತ್ತು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ .

ಅನಂತರ ಒಂದು ಬಾಣಲೆಯನ್ನು ಬಿಸಿಮಾಡಿ ಅದಕ್ಕೆ 4 ಚಮಚ ತುಪ್ಪ ಹಾಕಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ಬಡಿಸಿಕೊಳ್ಳಿ ನಂತರ ಇದಕ್ಕೆ ಚೆನ್ನಾಗಿ ತೊಳೆದಿಟ್ಟುಕೊಂಡ ಚಿಕನ್ ಹಾಕಿಕೊಂಡು ಸ್ವಲ್ಪ ಹೊತ್ತು ಬೇಯಿಸಿ ನಂತರ ರುಬ್ಬಿಕೊಂಡ ಧನಿಯಾ ಬೀಜ ,ಜೀರಿಗೆ ,ಕಾಳು ಮೆಣಸು ,ಬ್ಯಾಡಗಿ ಮೆಣಸಿನ ಕಾಯಿ ಮತ್ತು ಗುಂಟೂರ್ ಮೆಣಸಿನ ಕಾಯಿ , ಅರಿಶಿಣ ಪುಡಿ ,4 ಹೆಸಲು ಬೆಳ್ಳುಳ್ಳಿ ,ಸ್ವಲ್ಪ ಹುಣಸೆ ಮತ್ತು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡ ಮಸಾಲಾ ,ಡ್ರೈ ರೋಸ್ಟ್ ಮಾಡಿಕೊಂಡ ಮಿಶ್ರಣ ,2 ಲೋಟ ನೀರು ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಚೆನ್ನಾಗಿ ಸ್ವಲ್ಪ ಹೊತ್ತು ಬೇಯಿಸಿ .

ಬಹಳ ಸುಲಭವಾಗಿ ಸುಕ್ಕ ಚಿಕನ್ ಮಾಡಿಕೊಂಡು ತಿನ್ನಿ ಇದನ್ನು ಚಪಾತಿ ,ರೋಟಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top