ದೇವರು

ಹಿಂದೂಗಳು ಶಿವನ ಪೂಜೆ ಮಾಡೋವಾಗ ಈ ನಿಯಮಗಳನ್ನು ತಪ್ಪಿಸದೇ ಪಾಲಿಸಿದರೆ ತುಂಬಾ ಒಳ್ಳೇದು.

ಪ್ರತಿ ಸೋಮವಾರ ಮಹಾಶಿವನನ್ನು ಭಕ್ತಿ , ಶ್ರದ್ಧೆಯಿಂದ ನಾವು ಸಾಮಾನ್ಯವಾಗಿ ಪೂಜಿಸುತ್ತೇವೆ. ಶಿವನಿಗೆ ಒಂದು ಚೊಂಬಿನ ನೀರಿನಿಂದ ಅಭಿಷೇಕ ಮಾಡಿದರು ಸಾಕು , ಆ ಶಂಕರ ನಮ್ಮ ಇಷ್ಟಾರ್ಥವನ್ನು ಪೂರೈಸುತ್ತಾನೆ, ಆದರೆ ಶಿವನ ಪೂಜೆಯನ್ನು ಮಾಡುವಾಗ ಮಾತ್ರ ಕೆಲವು ನಿಯಮಗಳನ್ನು ಖಚಿತವಾಗಿಯೂ ಪಾಲಿಸಬೇಕು. ಅದು ಏನು ? ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ..

 

 

ಶಿವನಿಗೆ ಬಿಲ್ವ ಪತ್ರೆಯನ್ನು ಸಮರ್ಪಿಸುವುದು ತುಂಬಾ ಮುಖ್ಯವಾದದ್ದು ಮೂರು ಎಲೆಗಳು ಒಳಗೊಂಡಿರುವ ಈ ಬಿಲ್ವ ಪತ್ರೆ ಶಿವನ ಮೂರು ಕಣ್ಣುಗಳು ಎನ್ನುವ ಅರ್ಥವನ್ನು ಹೊಂದಿದೆ. ಆದರೆ ಈ ಪತ್ರೆಗಳನ್ನು ಮರದಿಂದ ತೆಗೆದುಕೊಳ್ಳುವಾಗ ತುಂಬಾ ಜಾಗ್ರತೆಯನ್ನು ಅನುಸರಿಸಬೇಕು.
ಬಿಲ್ವ ಪತ್ರೆಯನ್ನು ಸೋಮವಾರ, ಅಮವಾಸ್ಯೆ ,ಪೌರ್ಣಮಿ, ಮಕರ ಸಂಕ್ರಾಂತಿ ಹಬ್ಬದ ದಿನ, ಅಷ್ಟಮಿ ಮತ್ತು ನವಮಿಯ ದಿನಗಳಲ್ಲಿ ಮರದಿಂದ ಬೇರೆ ಮಾಡಬಾರದು ಅಥವಾ ಕೀಳಬಾರದು. ಹಾಗೆಯೇ ಒಣಗಿ ಹೋಗಿರುವ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಬಾರದು , ಅಷ್ಟೇ ಅಲ್ಲದೆ ಬಿಲ್ವ ಪತ್ರೆಯನ್ನು ನೀರಿನಿಂದ ಶುಭ್ರಗೊಳಿಸಸಿದ ನಂತರವೇ ದೇವರಿಗೆ ಅರ್ಪಿಸಬೇಕು.

 

 

ಶಿವಲಿಂಗಕ್ಕೆ ಯಾವಾಗಲೂ ಕುಂಕುಮವನ್ನು ಇಡಬಾರದು, ಕೇವಲ ಗಂಧ ಮತ್ತು ವಿಭೂತಿಯನ್ನು ಮಾತ್ರವೇ ಉಪಯೋಗಿಸಬೇಕು, ಏಕೆಂದರೆ ಶಿವನು ತುಂಬಾ ಏಕಾಗ್ರತೆಯಿಂದ ಧ್ಯಾನ ಮಾಡುತ್ತಾ ಇರುತ್ತಾರೆ .ಶಿವನಿಗೆ ಕೆಂಪಾಗಿರುವ ಈ ಕುಂಕುಮವನ್ನು ಸಮರ್ಪಿಸುವುದರಿಂದ ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುತ್ತದೆ, ಅದ್ದರಿಂದಲೇ ಕುಂಕುಮದ ಬದಲಿಗೆ ತಂಪನ್ನು ನೀಡುವ ಗಂಧವನ್ನು ಉಪಯೋಗಿಸಬೇಕು .

 

 

ಶಿವನಿಗೆ ಎಲ್ಲಾ ಹಣ್ಣುಗಳನ್ನು ಸಮರ್ಪಿಸಬಾರದು ,ಆದರೆ ಬೇಲದ ಹಣ್ಣು ಎಂದರೆ ಶಿವನಿಗೆ ತುಂಬಾ ಇಷ್ಟ ಇದನ್ನು ಸಮರ್ಪಿಸುವುದರಿಂದ ನಮಗೆ ದೀರ್ಘ ಆಯುಷ್ಯ ಸಿಗುತ್ತದೆ .
ಸಂಪಿಗೆ ಹೂವನ್ನು ಎಂತಹ ಪರಿಸ್ಥಿತಿಯಲ್ಲಿಯೂ ಸಹ ಶಿವನ ಪೂಜೆಯಲ್ಲಿ ಉಪಯೋಗಿಸಬಾರದು. ಶಿವನು ಈ ಹೂವಿಗೆ ಶಾಪವನ್ನು ಕೊಟ್ಟಿದ್ದಾನೆ, ಎಂದು ಶಿವ ಪುರಾಣಗಳು ಹೇಳುತ್ತವೆ .ಸೃಷ್ಟಿಕರ್ತನಾದ ಬ್ರಹ್ಮನ ಸಂಪಿಗೆ ನಿಮ್ಮನ್ನು ಒಂದು ಬಾರಿ ತಪ್ಪು ಸಾಕ್ಷಿ ಹೇಳಲು ಕೇಳುತ್ತಾನೆ, ಅದು ಶಿವನಿಗೆ ಗೊತ್ತಾದ ನಂತರ ಸಂಪಿಗೆ ಹೂವಿಗೆ ಪೂಜೆಗೆ ಉಪಯೋಗಿಸಿವ ಅರ್ಹತೆ ಇಲ್ಲದಂತೆ ಶಾಪವನ್ನು ಕೊಡುತ್ತಾನೆ .

ಶಿವಲಿಂಗವನ್ನು ಉಕ್ಕಿನ ಮೇಜಿನ ಮೇಲೆ ಇಟ್ಟು ಅಭಿಷೇಕ ಮಾಡಬಾರದು, ಒಂದು ವೇಳೆ ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡಿದ್ದರೆ ಜಲಧಾರೆಯನ್ನು ಖಂಡಿತವಾಗಿಯೂ ಮಾಡಬೇಕು. ಜಲಧಾರೆ ಇಲ್ಲದೆ ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಂಡಲ್ಲಿ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಉತ್ಪತ್ತಿಯಾಗುತ್ತದೆ .

 

 

 

ಶಿವನಿಗೆ ಪೂಜೆ ಮಾಡುವ ಮೊದಲು ವಿನಾಯಕನಿಗೆ ಪೂಜೆ ಮಾಡಬೇಕು, ಅಂದರೆ ನೀರು, ಹಾಲು ಅಂತಹದ್ದನ್ನು ಮೊದಲಿಗೆ ಗಣೇಶನ ವಿಗ್ರಹಕ್ಕೆ ಸಮರ್ಪಿಸಿದ ನಂತರ ಬೇರೆ ದೇವರಿಗೆ ಉಪಯೋಗಿಸಬೇಕು.

ಶಿವ ಪುರಾಣದ ಪ್ರಕಾರ ಶಿವನು ತುಳಸಿಯ ಪತಿಯಾದ ಜಲಂಧರನನ್ನು ಕೊಂದನು. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಶಿವನಿಗೆ ತುಳಸಿ ಪತ್ರೆಯನ್ನು ಸಮರ್ಪಿಸಬಾರದು ಒಂದು ವೇಳೆ ಅದನ್ನು ಸಮರ್ಪಿಸಿದ್ದರೂ ಅದರ ಫಲಿತಾಂಶ ನಮಗೆ ದೊರಕುವುದಿಲ್ಲ .ಸೂರ್ಯೋದಯದ ಸಮಯದಲ್ಲಿ ಈಗ ಹೇಳಿರುವ ನಿಯಮವನ್ನು ಅನುಸರಿಸಿ ಶಿವನಿಗೆ ಶ್ರದ್ಧೆ , ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಇಷ್ಟಾರ್ಥಗಳು ಬೇಗನೆ ಸಿದ್ದಿಯಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top