ದೇವರು

ಶನಿವಾರ ದಿನ ಅಪ್ಪಿತಪ್ಪಿನ್ನು ಈ ಕೆಲಸಗಳನ್ನು ಮಾಡಿ ಕಷ್ಟದ ಸರಮಾಲೆಯನ್ನು ಆಹ್ವಾನ ಮಾಡ್ಕೋಬೇಡಿ.

ಶನಿವಾರ ದಿನ ಅಪ್ಪಿತಪ್ಪಿನ್ನು ಈ ಕೆಲಸಗಳನ್ನು ಮಾಡಿ ಕಷ್ಟದ ಸರಮಾಲೆಯನ್ನು ಆಹ್ವಾನ ಮಾಡ್ಕೋಬೇಡಿ.

ಶನಿವಾರದ ದಿನ ಅಪ್ಪಿತಪ್ಪಿ ನೀವೇನಾದರೂ ಈ ಕೆಲಸಗಳನ್ನು ಮಾಡಿದರೆ ಸಮಸ್ಯೆಗಳನ್ನು ನೀವು ನಿಮ್ಮ ಕೈಯಾರೆ ಮನೆಗೆ ಕಷ್ಟಗಳನ್ನು ಸಮಸ್ಯೆಗಳನ್ನು ತಂದು ಕೊಳ್ಳುತ್ತೀರ. ಹೌದೂ ಈ ಮಾತು ನಿಜ ಎನ್ನುತ್ತಿದ್ದಾರೆ ತಜ್ಞರು ಪಂಡಿತೋತ್ತಮರು. ನಮ್ಮ ಸೌರ ವ್ಯವಸ್ಥೆಯಲ್ಲಿ ಒಂಬತ್ತು ಗ್ರಹಗಳ ಇರುವುದು ಪ್ರತಿಯೊಬ್ಬರಿಗೆ ಗೊತ್ತಿದೆ.

ಈ ಒಂಬತ್ತು ಗ್ರಹಗಳು ಆಯಾ ಜಾತಕದವರು ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿ ಆಯಾ ಫಲಗಳನ್ನು ನೀಡುತ್ತಾ ಇರುತ್ತವೆ. ರಾಹು ,ಕೇತು ಗ್ರಹಗಳನ್ನು ಬಿಟ್ಟರೆ, ಶನಿಗ್ರಹವೂ ಅಧಿಪತ್ಯ ವಹಿಸುವ ದಿನ ಶನಿವಾರ ಇನ್ನು ಅದೇ ವಿಧಾನದಲ್ಲಿ ವಾರದಲ್ಲಿರುವ ಪ್ರತಿಯೊಂದು ದಿನವೂ ಒಂದೊಂದು ಗ್ರಹಕ್ಕೆ ಸಂಕೇತವಾಗಿ ನಿಲ್ಲುತ್ತದೆ. ಹಾಗೆ ಶನಿವಾರ ಶನಿದೇವನ ವಾರ ಎಂದು ನಾವೆಲ್ಲಾ ಶನೈಶ್ಚರನನ್ನು ಪೂಜಿಸುತ್ತೇವೆ . ಇನ್ನು ಶನಿವಾರ ದಿನ ಯಾವ ಕೆಲಸಗಳನ್ನು ಅಪ್ಪಿತಪ್ಪಿ ಮಾಡಬಾರದು ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

 

 

ಈ ರೀತಿಯ ಕೆಲವು ಕೆಲಸಗಳನ್ನು ಮಾಡಿದರೆ ಇಲ್ಲದ ಸಮಸ್ಯೆಗಳನ್ನು ಮನೆಗೆ ತಂದುಕೊಂಡು ಅನಗತ್ಯವಾದ ತೊಂದರೆಯನ್ನು ಅನುಭವಿಸಬೇಕಾಗಬಹುದು ಎಂದು ತಿಳಿಸುತ್ತಿದ್ದಾರೆ ಶಾಸ್ತ್ರಕಾರರು.
ಇನ್ನು ಮುಖ್ಯವಾಗಿ ಶನಿವಾರ ದಿನ ನೇರಳೆ ಬಣ್ಣದ ಬದನೆಕಾಯಿಯನ್ನು ಉಪಯೋಗಿಸಬಾರದು, ತಿನ್ನಬಾರದು ಎಂದು ಹೇಳಲಾಗುತ್ತಿದೆ. ಹಾಗೇನಾದರೂ ನೇರಳೆ ಬಣ್ಣದ ಬದನೆಕಾಯಿಗಳನ್ನು ಶನಿವಾರ ತಿಂದರೆ ಅಡಿಗೆ ಮಾಡಿಕೊಂಡು ತಿನ್ನುವುದರಿಂದ ಅನಗತ್ಯವಾದ ಅನಾರೋಗ್ಯ ತೊಂದರೆಗಳು ಬಂದು ಕಾಡುತ್ತವೆ. ಹೀಗಾಗಿ ಸಾಧ್ಯವಾದಷ್ಟು ಬದನೆಕಾಯಿಯನ್ನು ಬಳಸಬೇಡಿ ಅಷ್ಟೇ ಆಲ್ಲ ಕರಿಮೆಣಸನ್ನು ಕೂಡ ಶನಿವಾರ ತಿನ್ನಬಾರದು ಎಂದು ಹೇಳಲಾಗುತ್ತಿದೆ. ಅದರಿಂದ ಕೂಡ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಿ ತೊಂದರೆಗಳು ಅನುಭವಿಸಬೇಕಾಗಬಹುದು.

ಸಾಧಾರಣವಾಗಿ ಉಪ್ಪನ್ನು ನಾವು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ತೆಗೆದುಕೊಳ್ಳುವುದಿಲ್ಲ. ಆದರೆ ಶುಕ್ರವಾರ ದಿನ ಉಪ್ಪನ್ನು ಖರೀದಿಸಬಹುದು. ಅದು ಒಳ್ಳೆಯ ದಿನ ಎಂದು ಹೇಳಲಾಗುತ್ತಿದೆ. ಅಂತೆಯೇ ಶನಿವಾರ ದಿನ ಅಪ್ಪಿತಪ್ಪಿ ಕೂಡ ಮನೆಗೆ ಉಪ್ಪನ್ನು ತರಬೇಡಿ ಎಂದು ಹೇಳಲಾಗುತ್ತಿದೆ. ಅಷ್ಟೇ ಆಲ್ಲ ಸಾಧ್ಯವಾದರೆ ಶನಿವಾರ ದಿನ ಉಪ್ಪನ್ನು ಮತ್ತೊಬ್ಬರಿಗೆ ದಾನ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ನಿವಾರಣೆ ಹೊಂದುತ್ತವೆ. ಮನೆಯಲ್ಲಿ ಏನಾದರೂ ತೊಂದರೆಗಳಿದ್ದರೆ ಅವು ಕೂಡ ಪರಿಹಾರ ಹೊಂದುತ್ತಾ ಹೋಗುತ್ತವೆ.ಆರೋಗ್ಯ ತೊಂದರೆಗಳಿದ್ದರೆ ಅವು ಕೂಡ ಸುಧಾರಿಸುತ್ತಾ ಹೋಗುತ್ತವೆ.

 

 

ಪ್ರತಿಯೊಬ್ಬರಿಗೆ ತಿಳಿದಂತೆಯೇ ಶನಿವಾರ ದಿನ ಸಾಧ್ಯವಾದಷ್ಟು ಹೊಸ ವಾಹನಗಳ ಖರೀದಿ ಮಾಡಬಾರದು. ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಅಪ್ಪಿತಪ್ಪಿ ಕೂಡ ಗೋತ್ತೋ ಗೊತ್ತಿಲದೆಯೋ ಮನೆಗೆ ತಂದರೆ ಅನಗತ್ಯವಾದ ಅಪಘಾತಗಳು ಉಂಟಾಗುತ್ತವೆಯಂತೆ.ಮುಖ್ಯವಾಗಿ ಹೊಸ ವಾಹನಗಳ ಖರೀದಿಗೆ, ಹೊಸ ಬಟ್ಟೆಗಳು ಖರೀದಿಗೆ, ಹೊಸ ಕಬ್ಬಿಣದ ವಸ್ತುಗಳ ,ಖರೀದಿಗೆ ಶನಿವಾರ ಅತ್ಯುತ್ತಮವಾದ ದಿನ ಅಲ್ಲ ಎಂದು ಪಂಡಿತೋತ್ತಮರು ಹೇಳುತ್ತಿದ್ದಾರೆ

ಶನೇಶ್ಚರನಿಗೆ ಪ್ರಿಯವಾದ ಉದ್ದಿನ ಬೇಳೆ ಅದರಲ್ಲೂ ಹೊಟ್ಟು ಸಹಿತ ಇರುವ ಕಪ್ಪು ಉದ್ದಿನ ಬೇಳೆಯನ್ನು ಶನಿವಾರ ದಿನ ಮನೆಗೆ ತರಬಾರದು ಅಷ್ಟೆ ಆಲ್ಲಾ ಸಾಧ್ಯವಾದಷ್ಟು ಉದ್ದಿನಬೇಳೆಯನ್ನು ಶನಿವಾರ ಅಡಿಗೆ ಮಾಡಿಕೊಂಡು ಊಟ ಕೂಡ ಮಾಡಬಾರದು ಎಂದು ಹೇಳಲಾಗಿದೆ. ಆದರೆ ಇದೇ ಉದ್ದಿನ ಬೇಳೆಯನ್ನು ನೀವು ಇತರರಿಗೆ ದಾನ ಮಾಡಬಹುದು. ಹೀಗೆ ಉದ್ದಿನಬೇಳೆಯನ್ನು ಮತ್ತೊಬ್ಬರಿಗೆ ದಾನ ಮಾಡುವುದು ಅಥವಾ ಬಡ ಬಗ್ಗರಿಗೆ ಆದ್ದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳನ್ನು ದಾನವಾಗಿ ನೀಡುವುದು ಮತ್ತು ಕಾಗೆಗಳಿಗೆ ಈ ಉದ್ದಿನ ಬೇಳೆಯನ್ನು ಆಹಾರವಾಗಿ ಹಾಕುವುದರಿಂದ ಶನಿಗ್ರಹವು ಶಾಂತಗೊಂಡು ಅನುಗ್ರಹ ನೀಡುತ್ತದೆ ಎಂದು ಹೇಳುತ್ತಿದ್ದಾರೆ ಪಂಡಿತರು .ಹೀಗೆ ಸಾಧ್ಯವಾದಷ್ಟು ಶನಿವಾರ ಈ ಕೆಲವು ಕೆಲಸಗಳನ್ನು ಮಾಡುವುದರಿಂದ ಶನೈಶ್ವರನ ಆನುಗ್ರಹ ಪ್ರಾಪ್ತಿಯಾಗುವುದು.

 

 

ಕೆಲವರಿಗೆ ಕಪ್ಪು ಬಣ್ಣ ಅಂದ್ರೆ ಬಹಳ ಇಷ್ಟ ಇರುತ್ತದೆ. ಗೊತ್ತಿಲ್ಲದೆಯೇ ಕಪ್ಪು ಬಣ್ಣ ಅವರ ಫೇವರೆಟ್ ಕಲರ್ ಆಗಿರುತ್ತದೆ. ಸಾಧ್ಯವಾದಷ್ಟು ಶನಿವಾರಗಳು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಬಾರದು. ಇದರಿಂದ ಶನಿಗೆ ಆಗ್ರಹ ಬರುತ್ತದೆಯಂತೆ. ಹೀಗೆ ಶನಿವಾರದ ದಿನ ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ಇಲ್ಲದ ಸಮಸ್ಯೆಗಳು ಉತ್ಪನ್ನವಾಗುತ್ತವೆ.

ಹಾಗೆಯೇ ಶನಿವಾರ ದಿನ ಮತ್ತೊಂದು ಕೆಲಸ ಕೂಡ ಮಾಡಬಾರದು. ಸಾಸಿವೆ ತಿನ್ನಬಾರದು.ಹಾಗೆ ಶನಿವಾರದ ದಿನ ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ಮನೆಯಲ್ಲಿ ಉಪಯೋಗಿಸಬಾರದು ಹಾಗೆ ಆ ಎಣ್ಣೆಯನ್ನು ಬಳಸಿ ಅಡಿಗೆಯನ್ನು ಮಾಡಬಾರದು.ಇದರಿಂದ ಶನಿಯ ಅಗ್ರಹಕ್ಕೆ ಪಾತ್ರರಾಗಬೇಕಾಗುತ್ತದೆ ಎಂದು ಸೂಚನೆ ನೀಡುತ್ತಿದ್ದಾರೆ. ದಾನವಾಗಿ ಬಡವರಿಗೆ ಮತ್ತು ಪಂಡಿತರಿಗೆ ನೀಡಬಹುದು ಎಂದು ಹೇಳಲಾಗುತ್ತದೆ

 

 

 

ಪ್ರತಿ ಶನಿವಾರ ಎಳ್ಳೆಣ್ಣೆಯನ್ನು ಮತ್ತು ಸಾಸಿವೆ ಎಣ್ಣೆಯನ್ನು ಶನೈಶ್ವರನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದು,ಕೇವಲ ಪೂಜೆಗೆ ಮತ್ತು ಅಭಿಷೇಕಕ್ಕೆ ತೆಗೆದುಕೊಂಡು ಹೋದರೆ ಒಳ್ಳೆಯದಾಗುತ್ತದೆ. ಆದರೆ ಅವುಗಳನ್ನು ಮನೆಯಲ್ಲಿ ಉಪಯೋಗಿಸಬಾರದು ಎಂದು ಹೇಳುತ್ತಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top