fbpx
ವಿಶೇಷ

ಯಜಮಾನ ಬದುಕಿ ಬಾಳಿದ ಮನೆಯಲ್ಲಿ ಏನೆಲ್ಲಾ ನಡೆದೋಯ್ತು ಗೊತ್ತಾ, ವಿಷ್ಣು ಆತ್ಮ ಅದೆಷ್ಟು ಕೊರಗುತಿದೆಯೋ.

ಸಾಹಸ ಸಿಂಹ ಬದುಕಿ ಬಾಳಿದ ಜಯನಗರದ ಗುಹೆ ಈಗ ಕಳಾಹೀನವಾಗಿದೆ. ವಿಷ್ಣು ಇದ್ದಾಗ ಸದಾ ಜನಜಂಗುಳಿಯಿಂದ ಕಿಕ್ಕಿರಿದಿರುತ್ತಿದ್ದ ಜನ, ಮನೆಯೊಳಗೆ ಮನೆಯವರಂತೆಯೇ ಬದುಕು ಸಾಗಿಸುತ್ತಿದ್ದ ಕೆಲಸದವರೂ ಕಾಣೆಯಾಗಿದ್ದಾರೆ. ವಿಷ್ಣು ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರ ಮಾಡಿದರಲ್ಲಾ? ಅವರ ಮನೆ ಅಡುಗೆ ಮಾಡುತ್ತಿದ್ದ ವ್ಯಕ್ತಿ – ಶ್ರೀಧರ್ ಅವರಿಂದ ಹಿಡಿದು ವಿಷ್ಣು ಅವರ ಮ್ಯಾನೇಜರ್ ಎನಿಸಿಕೊಂಡಿದ್ದ ರಾಧಾ ಕೂಡಾ ಈಗ ಮನೆಯಿಂದ ಹೊರಬಿದ್ದಿದ್ದಾರೆ.

 

 

ಯಜಮಾನನಿಲ್ಲದ ಮನೆಯಲ್ಲಿ…
ವಿಷ್ಣು ಅವರ ಡೇಟ್ಸ್ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಎಲ್ಲ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದವರು. ರಾಧಾಕೃಷ್ಣ. ವಿಷ್ಣು ಆಪ್ತರ ನಡುವೆ ಇವರು ರಾಧಾ ಅಂತಲೇ ಪರಿಚಿತರು. ವರ್ಷಗಟ್ಟಲೆ ವಿಷ್ಣುವರ್ಧನ್ ಅವರ ಬೇಕು ಬೇಡಗಳನ್ನು ಪೂರೈಸಿದ್ದ ರಾಧಾ ಸಾಹಸಸಿಂಹನ ಬಲಗೈನಂತಿದ್ದರು. ವಿಷ್ಣು ಇದ್ದಲ್ಲಿ ರಾಧಾ ಇರಲೇಬೇಕಿತ್ತು.

ಅದೊಂದು ದಿನ ಯಜಮಾನರಿಗೆ ತಾನಿನ್ನು ಉಳಿಯುವುದಿಲ್ಲ ಎನ್ನುವ ಸೂಚನೆ ಸಿಕ್ಕಿಹೋಗಿತ್ತೋ ಏನೋ. ರಾಧಾನನ್ನು ಕರೆದು `ಇಷ್ಟು ವರ್ಷ ನನ್ನ ನೆರಳಾಗಿ ದುಡಿದಿರುವ ನಿನಗೆ, ನಿನ್ನ ಮುಂದಿನ ಬದುಕಿಗೆ ಏನಾದರೂ ವ್ಯವಸ್ಥೆ ಮಾಡಬೇಕು’ ಅಂದಿದ್ದರಂತೆ. ಅಷ್ಟರಲ್ಲಾಗಲೇ ತಮ್ಮ ಮಾನಸ ಪುತ್ರ ಶ್ರೀಧರ್ ಮತ್ತು ರಾಧಾಕೃಷ್ಣ ಇಬ್ಬರಿಗೂ ಕಗ್ಗಲೀಪುರದ ಬಳಿ ಸೈಟು ಕೊಡಿಸಿದ್ದರು. ಇನ್ನು ಇವರಿಬ್ಬರಿಗೂ ಇರಲು ಮನೆ ಕಟ್ಟಿಸಿಕೊಡಬೇಕು ಅನ್ನೋದು ವಿಷ್ಣು ಬಯಕೆಯಾಗಿತ್ತು. ವಿಷ್ಣು ಮನಸ್ಸು ಮಾಡಿದ್ದೇನೋ ಆಗಿತ್ತು ಆದರದು ಕಾರ್ಯರೂಪಕ್ಕೆ ಬರೋ ಮುಂಚೆಯೇ ಸಾಹಸಸಿಂಹ ಉಸಿರು ನಿಲ್ಲಿಸಿಬಿಟ್ಟಿದ್ದರು.

 

 

ವಿಷ್ಣು ಇಲ್ಲದ ಮನೆಯಲ್ಲಿ ರಾಧಾ ಹೆಚ್ಚು ದಿನ ಇರಲು ಸಾಧ್ಯವಾಗಲಿಲ್ಲ ಅನ್ನೋದು ಮೂಲಗಳ ಮಾತು. ವರ್ಷಾಂತರಗಳ ಕಾಲ ವಿಷ್ಣು ಅವರನ್ನೇ ಜಗತ್ತೆಂಬಂತೆ ಪರಿಭಾವಿಸಿಕೊಂಡಿದ್ದ ರಾಧಾ ಈಗೇನು ಮಾಡುತ್ತಿದ್ದಾರೆ? ಅಂತಾ ಹುಡುಕಹೊರಟರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ರಾಧಾ ಸದ್ಯ ಸಾಲ ಮಾಡಿ ಸ್ವಂತ ಇನೋವಾ ಕಾರೊಂದನ್ನು ಖರೀದಿಸಿ ಅದರ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೇಗೂ ವಿಷ್ಣು ಜೊತೆಯಿದ್ದಾಗ ಇತರೆ ಭಾಷೆಯ ಸ್ಟಾರ್‌ಗಳೊಂದಿಗಿನ ಪರಿಚಯವಿತ್ತಲ್ಲಾ? ಅದೀಗ ಪ್ರಯೋಜನಕ್ಕೆ ಬಂದಿದೆಯಂತೆ. ಚಿರಂಜೀವಿ, ರಜನಿಕಾಂತ್ ರಂಥಾ ನಟರು ಬೆಂಗಳೂರಿಗೆ ಬಂದಾಗ ರಾಧಾ ಅವರ ಕಾರಿನಲ್ಲೇ ಓಡಾಡುತ್ತಾರೆ ಅನ್ನೋ ಮಾತಿದೆ.

ಇನ್ನು ವಿಷ್ಣು ಅವರ ಚಿತೆಗೆ ಬೆಂಕಿಯಿಟ್ಟ ಅವರ ಅಡುಗೆ ಭಟ್ಟ ಶ್ರೀಧರ್ ಕೂಡಾ ಮನೆ ತೊರೆದು ಹೋಗಿದ್ದಾರಂತೆ. ಅವರಿದ್ದಾಗ ದಿನಕ್ಕೆ ಬರುತ್ತಿದ್ದ ಹದಿನೆಂಟು ಲೀಟರು ಹಾಲು ಮೂರು ಲೀಟರ್‌ಗೆ ಇಳಿಯಿತಂತೆ. ಅನಿರುದ್ಧ್ ಆಳ್ವಿಕೆ ಜಾರಿಗೆ ಬಂದಮೇಲೆ ಮನೆಯ ವಾತಾವರಣ ಉಸಿರುಗಟ್ಟಿಸಲು ಶುರುವಾದ ಕಾರಣ ಶ್ರೀಧರ್ ಮನೆಯಿಂದ ಹೊರನಡೆದರು ಅನ್ನೋ ಮಾತು ಕೇಳಿಬರುತ್ತಿದೆ.

 

 

ವಿಷ್ಣು ಬದುಕಿದ್ದಷ್ಟೂ ದಿನಗಳ ಕಾಲವೂ ತಮ್ಮ ಅಡುಗೆ ಭಟ್ಟರಾಗಿದ್ದ ಶ್ರೀಧರ್ ಅವರನ್ನು ಮಗನಂತೆಯೇ ಕಂಡಿದ್ದರು. ವಿಷ್ಣು ಜೊತೆಗೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಮನೆ ಮಕ್ಕಳಂತೆಯೇ ಇದ್ದವರಲ್ಲಿ ಈ ಶ್ರೀಧರ್ ಮತ್ತು ಮ್ಯಾನೇಜರ್ ರಾಧಾ ಪ್ರಮುಖರು. ಶ್ರೀಧರ್ ವಿಷ್ಣು ಜೊತೆ ಮೂವತ್ತು ವರ್ಷ ಕೆಲಸ ಮಾಡಿದ್ದರೆ, ರಾಧಾಕೃಷ್ಣ ಮೂವತ್ತೇಳು ವರ್ಷಗಳಿಂದಲೂ ಸಾಹಸಸಿಂಹನ ದೇಖಾರೇಖಿ ನೋಡಿಕೊಳ್ಳುತ್ತಿದ್ದರು. ಆದರೆ ವಿಷ್ಣು ಮರೆಯಾದ ಬಳಿಕ ಅವರ ಮನೆಯಲ್ಲಿ ಎಲ್ಲವೂ ಅದಲು ಬದಲಾದ ಕಾರಣದಿಂದ ಶ್ರೀಧರ್ ಮತ್ತು ರಾಧಾ ಕರುಳ ಬಳ್ಳಿ ಕಡಿದುಕೊಂಡಂಥಾ ಸಂಕಟದಿಂದಲೇ ಆ ಮನೆಯಿಂದ ಹೊರ ಬಿದ್ದು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ನೋವೇನೇ ಇದ್ದರೂ ವಿಷ್ಣುವರ್ಧನ್ ಅವರ ಆಶೀರ್ವಾದದಿಂದಲೇ ಆರಾಮಾಗಿದ್ದೇವೆಂಬ ನಂಬಿಕೆ ಇವರಿಬ್ಬರದ್ದು.

ಶ್ರೀಧರ್ ವಿಷ್ಣು ಮನೆಯಿಂದ ಹೊರ ಬಿದ್ದು ಈಗ ಐದಾರು ವರ್ಷ ಕಳೆದಿದೆ. ವಿಷ್ಣು ಇದ್ದಾಗಲೇ ಶ್ರೀಧರ್‌ಗೊಂದು ಸೈಟು ಕೊಟ್ಟಿದ್ದರಲ್ಲಾ? ಅದರಲ್ಲಿ ತಾವೇ ಮುಂದೆ ನಿಂತು ಚೆಂದದ್ದೊಂದು ಮನೆ ಕಟ್ಟಿಕೊಡುವ ಮನಸನ್ನೂ ಹೊಂದಿದ್ದರು. ಆದರೆ ಅದಕ್ಕೂ ಮೊದಲೇ ಅವರು ಮರೆಯಾದ ಬಳಿಕ ಅಲ್ಲಿ ಮನೆ ಮಗನಂತಿದ್ದ ಶ್ರೀಧರ್ ಪರಕೀಯರಂತಾಗಿದ್ದರು. ಕಡೆಗೂ ಅಲ್ಲಿಂದ ಹೊರ ಬಿದ್ದಿರೋ ಶ್ರೀಧರ್ ಅಡುಗೆ ಕೆಲಸವನ್ನೂ ಬಿಟ್ಟು ಖಾಸಗಿ ಕಂಪೆನಿ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

 

 

ಇನ್ನು ವಿಷ್ಣುವರ್ಧನ್ ಅವರ ಸಿನಿಮಾ ಸಂಬಂಧಿತವಾದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಲೇ ಬಲಗೈ ಬಂಟ ಅಂತಲೇ ಗುರುತಿಸಿಕೊಂಡಿದ್ದವರು ರಾಧಾಕೃಷ್ಣ. ಅವರು ರಾಧಾ ಅಂತಲೇ ಕರೆಸಿಕೊಳ್ಳುತ್ತಿದ್ದರು. ಆದರೆ ವಿಷ್ಣು ಮರೆಯಾದ ನಂತರ ಅವರ ಸ್ಥಾನಮಾನವೂ ಆ ಮನೆಯಲ್ಲಿ ದಯನೀಯವಾಗಿತ್ತು. ಅಖಂಡ ಮೂರು ದಶಕಗಳ ಕಾಲ ಒಡನಾಡಿದ್ದ ಮನೆ. ವಿಷ್ಣು ಅವರೆಡೆಗಿನ ಸೆಂಟಿಮೆಂಟು ರಾಧಾರನ್ನು ಆ ಮನೆಯಲ್ಲಿಯೇ ಉಳಿಸಿತ್ತು. ಆದರೆ ವಿಷ್ಣು ಮರೆಯಾದ ನಂತರ ಬೇರ್‍ಯಾವ ಕೆಲಸವನ್ನೂ ಹೇಳದೆ ಸತಾಯಿಸುತ್ತಾ ಈ ಮನೆಯಲ್ಲಿ ಪದೇ ಪದೆ ಅವಮಾನ ಎದುರಾಗಿತ್ತು. ಇದನ್ನು ತಡಕೊಳ್ಳಲಾರದೆ ಅವರು ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.

ರಾಧಾಗೂ ವಿಷ್ಣು ಒಂದು ನಿವೇಶನ ಕೊಟ್ಟಿದ್ದರಂತೆ. ಅದರ ಹೊರತಾಗಿ ರಾಧಾಗಿರುವುದು ಡ್ರೈವಿಂಗ್ ಕಲೆ ಮಾತ್ರ. ಅವಮಾನ ತಡೆಯಲಾರದೆ ವಿಷ್ಣು ಮನೆಯಿಂದ ಹೊರ ಬಿದ್ದ ರಾಧಾ ಹೇಗೋ ಕಷ್ಟಪಟ್ಟು ಇನೋವಾ ಕಾರು ಕೊಂಡು ಅದನ್ನು ಬಾಡಿಗೆಗೆ ಓಡಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಇದರಿಂದಲೇ ಮಗನ ಇಂಜಿನೀರಿಂಗ್ ಓದು ಮತ್ತು ಸಂಸಾರ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಭಾರತಿ ಮೇಡಂ ಮತ್ತು ಅನಿರುದ್ಧ ಮಾತ್ರ ಯಾರ್‍ಯಾರದ್ದೋ ಮಾತು ಕೇಳಿ ವಿಷ್ಣು ಆತ್ಮದಂಥಾ ಸಂಬಂಧಗಳನ್ನೇ ಬೀದಿಪಾಲು ಮಾಡುತ್ತಿದ್ದಾರೆ. ಬದುಕಿದ್ದಷ್ಟೂ ದಿನ ಇಂಥಾ ಹತ್ತಿರದ ಬಂಧಗಳನ್ನು ಗೌರವಿಸುತ್ತಿದ್ದ ವಿಷ್ಣು ಆತ್ಮ ತನ್ನ ಮನೆಯಲ್ಲೇ ಆಗುತ್ತಿರೋ ಪಲ್ಲಟಗಳನ್ನು ಕಂಡು ನಿಜಕ್ಕೂ ಒದ್ದಾಡುತ್ತಿರಬಹುದು!

 

 

ಯಾರಿವನು ನಾಯಿರಾಜ?

ವಿಷ್ಣು ಇದ್ದಾಗ ಅವರ ಮನೆಯಲ್ಲಿದ್ದ ಡ್ರೈವರುಗಳು, ಕೆಲಸದವರು, ಅಡುಗೆಯವರೆಲ್ಲಾ ಮನೆ ತೊರೆಯಲು ಮುಖ್ಯ ಕಾರಣ ರಾಜು ಎನ್ನುವ ವ್ಯಕ್ತಿ. ಆರಂಭದಲ್ಲಿ ವಿಷ್ಣು ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಈತ ಕ್ರಮೇಣ ಡ್ರೈವರ್ ಪೋಸ್ಟ್ ಪಡೆದ. ನಾಯಿಗಳ ಜೊತೆ ಮನೆಯ ಹೊರಗಿದ್ದವನು ಒಳಗೆ ಬರುತ್ತಿದ್ದಂತೇ ದಿನೇ ದಿನೇ ಉಳಿದ ಕೆಲಸಗಾರರ ಮೇಲೆ ದಬ್ಬಾಳಿಗೆ ಮಾಡಿ ಒಬ್ಬೊಬ್ಬರನ್ನೇ ಮನೆಯಿಂದ ಹೊರಹಾಕಿದ ಅನ್ನೋ ಮಾತಿದೆ. ಕೆಲಸಕ್ಕಿರುವವರು ಹೆಚ್ಚು ಮಾತಾಡಿದರೆ ತನ್ನ ಹುಡುಗರನ್ನು ಅವರ ಮನೆಗೇ ಕಳಿಸಿ ಬೆದರಿಸುತ್ತಾನಂತೆ.

ಸಿಂಹ ಬಾಳಿದ ಮನೆಯಲ್ಲಿ ಈಗ ಸಿಂಗ್ರಿ ರಾಜನದ್ದೇ ದರ್ಬಾರಂತೆ. ಇದರ ಪ್ರತಿಫಲವಾಗಿ ಅಭಿನಯ ಭಾರ್ಗವನ ಮನೆಯೀಗ ಅಂಬೋ ಅನ್ನುವಂತಾಗಿದೆ. ಸಮಾಧಿಯ ವಿಚಾರದಲ್ಲಿ ನೂರೆಂಟು ರಾಜಕೀಯ, ಬದುಕಿದ್ದ ಮನೆಯಲ್ಲಿ ನಂಬಿಕಸ್ಥರೇ ಇಲ್ಲ… ವಿಷ್ಣು ಆತ್ಮ ಎಷ್ಟು ಕೊರಗುತ್ತಿದೆಯೋ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top