ಹೆಚ್ಚಿನ

ಸಾಲು ಸಾಲು ಕಷ್ಟಗಳಿಂದ ಹೊರಬರಬೇಕು ಅಂದ್ರೆ ಈ ಕಾರ್ಯವನ್ನು ಮಾಡಿ ಸಾಕು

ಸಾಲು ಸಾಲು ಕಷ್ಟಗಳು ಬಂದಾಗ ಪಟ್ ಅಂತ ಹೋಗ್ಬೇಕು ಅಂದ್ರೆ ಮಾಡಬೇಕಾದ ಕಾರ್ಯಗಳು ..

ಹೆಂಡತಿ ಮಕ್ಕಳ ಜೊತೆ ಜೀವನ ತುಂಬ ಚೆನ್ನಾಗಿ ನಡೆಯುತ್ತಾ ಇರುತ್ತೆ ಆದ್ರೆ ಯಾವುದೋ ಒಂದು ವಿಷ ಗಳಿಗೆಯಲ್ಲಿ ತಿಳಿದೋ ತಿಳಿಯದೆಯೋ ಒಂದು ದುರಾದೃಷ್ಟಕರ ಕೆಟ್ಟ ಸಮಯ ಶುರು ವಾಗಿಬಿಡುತ್ತದೆ.

ಖುಷಿಯ ಕ್ಷಣಗಳು ಮಾಸಿ ದುಃಖದ ಸಮಯ ಪ್ರಾರಂಭವಾಗಿಬಿಡುತ್ತದೆ ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಕೆಲವು ಪದ್ದತಿಗಳು ಈ ನೋವಿನ ಸನ್ನಿವೇಶಕ್ಕೆ ನಮಗೆ ನೆಮ್ಮದಿ ಕೊಡುವುದು .

 

 

೧ ಮನೆ ದೇವರ ಹೆಸರಲ್ಲಿ ಮೀಸಲು ಕಟ್ಟುವುದು ಅಂದರೆ ಒಂದು ಬಿಳಿ ಬಟ್ಟೆಯ ತುಂಡನ್ನು ತೆಗೆದು ಕೊಂಡು ಚೆನ್ನಾಗಿ ತೊಳೆದು , ಅರಶಿಣದಲ್ಲಿ ಅದ್ದಿ ದೇವರ ಮುಂದೆ ಇರಿಸಿ ಮನೆ ದೇವರ ಪೂಜೆ ಮಾಡಿ ನಂತರ ಒಂದೆರಡು ನಾಣ್ಯಗಳನ್ನು ಅದರಲ್ಲಿ ಹಾಕಿ ,ನಿಮ್ಮ ಕಷ್ಟಗಳು ಪರಿಹಾರವಾಗಬೇಕೆಂದು ಬೇಡಿಕೊಳ್ಳಬೇಕು , ನಾಲ್ಕು ವಾರಗಳ ನಂತರ ಆ ಮೀಸಲನ್ನು ಹರಿಯುವ ನೀರಿಗೆ ಹಾಕಬೇಕು ಅಥವಾ ಎಕ್ಕದ ಗಿಡಕ್ಕೆ ಕಟ್ಟಬೇಕು .

 

 

 

 

 

 

 

 

 

 

 

 

 

 

 

 

 

೨. ಒಂದು ನಾಣ್ಯವನ್ನು ತೆಗೆದುಕೊಂಡು ನಿಮ್ಮ ತೊಂದರೆಗಳು ಪರಿಹಾರವಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿ ತುಂಬಿರುವ ಕೊಳಕ್ಕೆ ಅಥವಾ ಬಕೆಟ್ ನೀರಿಗೆ ಹಾಕಿ ಒಂಬತ್ತು ದಿನ ಹಾಗೆ ಬಿಡುವುದು ನಂತರ ಆ ನಾಣ್ಯವನ್ನು ಹರಿಯುವ ನೀರಿಗೆ ಹಾಕಬೇಕು.

 

 

 

 

 

 

 

 

 

 

 

 

 

 

 

೩. ಒಂದು ಸಣ್ಣ ರಾಗಿ ಪಾತ್ರೆ ತುಂಬ ನೀರನ್ನು ತುಂಬಿಸಿ , ಸ್ವಲ್ಪ ಚಂದನವನ್ನು ಅದರಲ್ಲಿ ಬೆರೆಸಿ ,ತೊಂದರೆ ಯಾರಿಗೆ ಇರುತ್ತದೆಯೋ ಆ ವ್ಯಕ್ತಿಯ ಮಂಚದ ಕೆಳಗೆ ಇರಿಸಿ ಮತ್ತು ಬೆಳಗ್ಗೆ ಎದ್ದ ಮೇಲೆ ಸ್ನಾನ ಮಾಡಿ ಆ ನೀರನ್ನು ತುಳಸಿ ಗಿಡಕ್ಕೋ ಅಥವಾ ಯಾವುದಾದರೂ ಹೂವಿನ ಗಿಡಕ್ಕೆ ಸುರಿಯಿರಬೇಕು

 

 

 

 

 

 

 

 

 

 

 

 

 

 

ಹೀಗೆ ಒಂಬತ್ತು ಗುರುವಾರಗಳು ಈ ಕ್ರಮ ಅನುಸರಿಸಿದರೆ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಹತ್ತಿರ ಬರುತ್ತವೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top