ಹೆಚ್ಚಿನ

ನಿಮ್ಮ ಹೆಸರು ‘M’ ಅಕ್ಷರದಿಂದ ಸ್ಟಾರ್ಟ್ ಆಗ್ತಾಇದ್ರೆ ಸಂಖ್ಯಾ ಶಾಸ್ತ್ರ ನಿಮ್ ಬಗ್ಗೆ ಈ ತರ ಹೇಳುತ್ತೆ

ನಿಮ್ಮ ಹೆಸರು ‘M’ ಅಕ್ಷರದಿಂದ ಶುರುವಾಗುತ್ತಾ ಹಾಗಾದ್ರೆ ನಿಮ್ಮ ಬಗ್ಗೆ ಸಂಖ್ಯಾ ಶಾಸ್ತ್ರ ಏನ್ ಹೇಳುತ್ತೆ ಕೇಳಿ ..

 

M ಅಕ್ಷರ 13 ನೇ ಸಂಖ್ಯೆಯಾಗಿದ್ದು ಕೂಡಿಸಿದಾಗ ಸಂಖ್ಯೆ ನಾಲ್ಕು ಬರುವುದು ಇದನ್ನು ರಾಹುವಿನ ಸ್ಥಾನ ಎಂದೇ ಹೇಳಲಾಗುತ್ತದೆ ,
ಹೆಚ್ಚು ಕಠೋರವಾದ ನಿರ್ಧಾರ ತೆಗೆದುಕೊಳ್ಳುವವರು , ಬಹಳ ಶಕ್ತಿ ಶಾಲಿ ವ್ಯಕ್ತಿತ್ವ ,ಎಲ್ಲರು ನನ್ನ ಮಾತು ಕೇಳಬೇಕೆಂಬ ಬುದ್ದಿ , ಅತಿಯಾದ ಹಠ ,
ನಿಷ್ಟೂರದ ಮಾತುಗಳನ್ನು ಆಡುವುದು ಈ ಹೆಸರಿನವರ ಗುಣಗಳು .

ಧೈರ್ಯ, ಬುದ್ಧಿವಂತ ಮತ್ತು ಕಷ್ಟಕರ ಜೀವಿಗಳು , ನಿಮಗೆ ಹೆಚ್ಚು ನಿಷ್ಠಾವಂತ ಸ್ನೇಹಿತರು ಸಿಗುವುದಿಲ್ಲ ಅನ್ನುವ ಕೊರಗು ಯಾವಾಗಲೂ ಇರುತ್ತದೆ .
ಇತರರಿಗೆ ಸಲಹೆಯನ್ನು ನೀಡುವಲ್ಲಿ ಬಹಳ ನಿಪುಣರು ,ಸಂಗಾತಿಯ ಜೊತೆ ವಿಶ್ವಾಸಾರ್ಹ ಜೀವನ ನಡೆಸುತ್ತಾರೆ , ಭಾವನಾತ್ಮಕ ಮತ್ತು ತೀಕ್ಷ್ಣ ಸ್ವಭಾವವನ್ನು ಹೊಂದಿರುತ್ತಾರೆ ,

 

ಒಂದು ಸಂಬಂಧದಲ್ಲಿ ತೊಡಗಿದಾಗ, ಅವರು ಅದರೊಳಗೆ ತಮ್ಮ ಸಂಪೂರ್ಣ ಅಸ್ತಿತ್ವವನ್ನು ತೊಡಗಿಸುತ್ತಾರೆ , ಅವರ ಸಂಪೂರ್ಣ ನಿರ್ಣಯ ಮತ್ತು ಆತ್ಮ ವಿಶ್ವಾಸವು ಅವ್ರ ಯಶಸ್ಸಿಗೆ ಕಾರಣವಾಗುತ್ತದೆ.

ಕೋಪ ಎಂಬುವುದು ಮೂಗಿನ ಮೇಲೆ ಇದೆ ಆದಷ್ಟು ನಿಮ್ಮ ಹುಟ್ಟಿದ ಹೆಸರಿನ ಅಕ್ಷರ ಕೂಡಿಸಿದರೆ ನಾಲ್ಕು ಅಂಕಿ ಬರುವ ಹೆಸರನ್ನು ಇಟ್ಟುಕೊಳ್ಳಬೇಡಿ ,
ದುರಂತ ಅಂತ್ಯವನ್ನು ಕಂಡವರು ಈ ಅಕ್ಷರದವರು ಹೆಚ್ಚು , ಆದರೆ ನ್ಯಾಯ ವಿನಯದಿಂದ ನಡೆದುಕೊಂಡರೆ ಒಳ್ಳೆಯದು .
ಬಹಳ ಬೇಗ ದುಡ್ಡು ಒಲಿಯುತ್ತದೆ ಅಷ್ಟೇ ಬೇಗ ಕಳೆದು ಬಿಡುತ್ತೀರಿ ಆದ್ದರಿಂದ ಆದಷ್ಟು ನೋಡಿಕೊಂಡು ಖರ್ಚು ಮಾಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top