ಹೆಚ್ಚಿನ

ನಿಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿ ಉಳಿಯ ಬೇಕು ಅಂದ್ರೆ ಶುಕ್ರವಾರದ ದಿನ ಸ್ತ್ರೀಯರು ದೇವಿಗೆ ಈ ವಸ್ತುವನ್ನು ಸಮರ್ಪಣೆ ಮಾಡಿ ಸಾಕು

ನಿಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿ ಉಳಿಯ ಬೇಕು ಅಂದ್ರೆ ಶುಕ್ರವಾರದ ದಿನ ಸ್ತ್ರೀಯರು ದೇವಿಗೆ ಈ ವಸ್ತುವನ್ನು ಸಮರ್ಪಣೆ ಮಾಡಿ ಸಾಕು .

ಸ್ತ್ರೀಯರು ದೇವಿಗೆ ಏನೇನನ್ನು ಕೊಟ್ಟರೆ ಅಥವಾ ಅರ್ಪಿಸಿದರೆ ನಮಗೆ ಒಳ್ಳೆಯದಾಗುತ್ತದೆ ಮತ್ತು ಮಾಂಗಲ್ಯ ಭಾಗ್ಯ ಗಟ್ಟಿಯಾಗುತ್ತದೆ. ಎಂದು ನಿಮಗೆ ಗೊತ್ತಾ ?
ನಿಮ್ಮ ಮಾಂಗಲ್ಯ ದೋಷಕ್ಕೆ ಒಂದು ಪುಟ್ಟ ಅದ್ಭುತವಾದಂತಹ ಪರಿಹಾರ ಇದೆ. ಇದನ್ನು ದೇವಿಗೆ ಪ್ರತಿ ಶುಕ್ರವಾರ ಅರ್ಪಿಸುತ್ತಾ ಬಂದರೆ, ನಿಮ್ಮ ಮಾಂಗಲ್ಯ ದೋಷ ಹೋಗಿ ನೆಮ್ಮದಿಯಾದ ಸಂತೋಷ ಭರಿತವಾದ ಜೀವನ ನಿಮ್ಮದಾಗುತ್ತದೆ.. ನಿಮಗೆ ಇದು ಗೊತ್ತಾ ?

 

ಎಷ್ಟೋ ಜನಕ್ಕೆ ಗೊತ್ತಿಲ್ಲ ? ಯಾವ ದೇವರಿಗೆ ಯಾವ ನೈವೇದ್ಯ ಇಡಬೇಕು ? ಏನನ್ನು ಅರ್ಪಿಸಬೇಕು ? ಯಾವ ಹಣ್ಣನ್ನು ಇಡಬೇಕು ? ಯಾವ ವಾರ ? ಯಾವ ದೇವರಿಗೆ ? ಹೇಗೆ ಪೂಜೆ ಮಾಡಬೇಕು ? ಯಾವ ಆರತಿ ಬೆಳಗಬೇಕು ? ಎಷ್ಟು ಇಂಚಿನ ದೀಪವನ್ನು ಇಡಬೇಕು ? ಯಾವ ಸಂದರ್ಭದಲ್ಲಿ ದೀಪವನ್ನು ಇಡಬೇಕು ? ಎನ್ನುವುದು ಗೊತ್ತಿರುವುದಿಲ್ಲ.

 

 

ಒಂದು ದೇವಿ ಪೂಜೆಗೆ ಅದರಲ್ಲೂ ವಿಶೇಷವಾಗಿ ಮಾಂಗಲ್ಯ ದೋಷ ಇದೆ ಅಥವಾ ನನ್ನ ಮಾಂಗಲ್ಯ ಗಟ್ಟಿಯಾಗಿರಬೇಕು ಏನೂ ? ತೊಂದರೆ ಆಗಬಾರದು ಎನ್ನುವವರು ಖಂಡಿತವಾಗಿಯೂ ಪ್ರತಿ ತಿಂಗಳು ಶುಕ್ರವಾರ ಯಾವುದಾದರೂ ನಿಮ್ಮ ಮನೆಯ ಹತ್ತಿರದಲ್ಲಿ ಕಾಳಿ ಸ್ವರೂಪಿಯಾದ, ದುರ್ಗಿ ಸ್ವರೂಪಿಯಾದ ರಾಜರಾಜೇಶ್ವರಿ ದೇವಿ ಸ್ವರೂಪವಾದ, ಬನಶಂಕರಿ ಸ್ವರೂಪವಾಗಿರುವ, ಪಾರ್ವತಿ ದೇವಿಯ ಅಂಶವಿರುವ ದೇವಿಯ ದೇವಾಲಯಗಳಿಗೆ ಹೋಗಿ ಒಂದು ಬಟ್ಟಲಿನ ತುಂಬಾ ಅರಿಶಿನವನ್ನು ದೇವಿಗೆ ಸಮರ್ಪಣೆ ಮಾಡುತ್ತಾ ಬಂದರೆ ನಿಮ್ಮ ಮಾಂಗಲ್ಯ ದೋಷವು ಹೋಗಿ ಜೀವನ ಪರ್ಯಂತ ಸುಮಂಗಲಿಯಾಗಿ ನೀವು ಬದುಕುತ್ತೀರಿ,

 

 

ಯಾಕೆಂದರೆ ಆ ದೇವಿ ಅರಿಶಿಣ ಪ್ರಿಯೆ ಎಂದು ಹೇಳುತ್ತಾರೆ. ಅರಿಶಿಣವನ್ನು ಅರ್ಪಿಸುವುದರಿಂದ ಆ ದೇವಿ ಸಂಪ್ರೀತಳಾಗಿ ನಿಮ್ಮನ್ನು ಗೌರಿ ಸ್ವರೂಪಳಾಗಿ, ಜೀವನ ಪರ್ಯಂತ ನಿಲ್ಲಿಸುತ್ತಾರೆ. ಆದ್ದರಿಂದ ಇದನ್ನು ತಿಳಿದುಕೊಂಡ ಮೇಲಾದರೂ ನೀವು ದೇವಿಯ ದೇವಸ್ಥಾನಕ್ಕೆ ಹೋದಾಗ ಅರಿಶಿನವನ್ನು ಕೊಡಿ , ಅರ್ಪಿಸಿ ಇದರಿಂದ ನಿಮ್ಮ ಮಾಂಗಲ್ಯ ಭಾಗ್ಯವೂ ಸಹ ಗಟ್ಟಿಯಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top