ದೇವರು

ಮೇ 15 ನೇ ತಾರೀಖು ಶನಿ ಜಯಂತಿ ಮತ್ತು ಅಮಾವಾಸ್ಯೆ ಮಂಗಳವಾರ ಮಹಾ ಸಂಯೋಗ ಉಂಟಾಗಲಿದೆ,ಈ ದಿನ ಹೀಗೆ ಮಾಡಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ

ಮೇ 15 ನೇ ತಾರೀಖು ಶನಿ ಜಯಂತಿ ಮತ್ತು ಅಮಾವಾಸ್ಯೆ ಮಂಗಳವಾರ ಮಹಾ ಸಂಯೋಗ ಉಂಟಾಗಲಿದೆ,ಈ ದಿನ ಹೀಗೆ ಮಾಡಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ

ಮೇ ಹದಿನೈದನೇ ತಾರೀಖು 2018 ವೈಶಾಖ ಮಾಸದ ಅಮಾವಾಸ್ಯೆಯ ದಿನವಾಗಿದ್ದು, ಇಂದು ಶನಿ ಜಯಂತಿ ಆಚರಿಸಲಾಗುತ್ತಿದೆ. ಸೂರ್ಯದೇವನ ಪುತ್ರನಾದ ಶನೈಶ್ವರ ದೇವನ ಜನ್ಮ ದಿನವಾಗಿದೆ ಈ ದಿನ. ಈ ಪವಿತ್ರ ಪಾವನವಾದ ಪುಣ್ಯ ದಿನದಂದು ಈ ಬಾರಿ ಮಹಾ ಸಂಯೋಗವು ಉಂಟಾಗಲಿದೆ. ಮಂಗಳವಾರದ ದಿನ ಹನುಮಂತನ ದಿನವಾಗಿದ್ದು ಆ ದಿನವೇ ಶನಿ ಜಯಂತಿಯೂ ಬಂದಿರುವುದು ತುಂಬಾ ಉತ್ತಮವಾದ ಸಂಯೋಗವನ್ನು ಉಂಟು ಮಾಡುತ್ತದೆ. ತುಂಬಾ ಒಳ್ಳೆಯ ಶುಭ ಮುಹೂರ್ತ ಈ ದಿನವಿದ್ದು, ಈ ಸಮಯದಲ್ಲಿ ಇಬ್ಬರೂ ದೇವರ ಕೃಪೆ ನಿಮಗೆ ದೊರೆಯಲಿದೆ. ನಿಮಗೆ ಕುಜ ದೋಷ ಅಥವಾ ಮಂಗಳ ದೋಷವಿದ್ದರೆ ಈ ದಿನ ನೀವು ಎರಡೂ ಕೂಡ ಒಂದೇ ದಿನ ಬಂದಿರುವುದರಿಂದ ದೋಷ ಪರಿಹಾರ ಮಾಡಿಕೊಳ್ಳಲು ಈ ದಿನ ತುಂಬಾ ಶುಭ ದಿನವಾಗಿದೆ.

 

 

ನಿಮಗೆ ಮಂಗಳ ದೋಷವಿದ್ದರೆ ಸಂತಾನ ಇರುವುದಿಲ್ಲ, ವಿವಾಹಿತ ಜೀವನವೂ ಅಲ್ಲೋಲ ಕಲ್ಲೋಲವಾಗುತ್ತದೆ. ಅದೇ ಶನಿಯ ವಕ್ರ ದೃಷ್ಟಿ ಇದ್ದರೂ ಕೂಡ ಸಂತಾನ ಪ್ರಾಪ್ತಿಯ ಯೋಗವು ಸಮಾಪ್ತಿಯಾಗುತ್ತದೆ , ಈ ಎಲ್ಲ ರೀತಿಯಿಂದಲೂ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡ ಕೆಲಸವೂ ಅರ್ಧಕ್ಕೆ ನಿಂತು ಹೋಗುತ್ತದೆ. ಧನ ಹಾನಿ ಉಂಟಾಗುತ್ತದೆ . ಮನುಷ್ಯನು ಕಾಯಿಲೆಗಳಿಂದ ಪೀಡಿತನಾಗುತ್ತಾನೆ.

ಆದರೆ ನೀವು ಶನಿ ಜಯಂತಿಯ ದಿನ ಮಂಗಳವಾರದ ದಿನ ಸಾಸಿವೆ ಎಣ್ಣೆಯನ್ನು ಶನಿದೇವರಿಗೆ ಅರ್ಪಿಸಿದರೆ, ಈ ಸಾಸಿವೆ ಎಣ್ಣೆಯ ಅಭಿಷೇಕ ಸ್ನಾನ ಮಾಡಿಸಿದರೆ ನಿಮಗೆ ಹನುಮಂತನ ಮತ್ತು ಶನೈಶ್ಚರ ದೇವರ ಇಬ್ಬರ ಕೃಪೆಯೂ ದೊರೆಯಲಿದೆ. ಈ ಎಣ್ಣೆಯನ್ನು ಅರ್ಪಿಸುವ ಪರಂಪರೆಯೂ ಹನುಮಂತನೇ ಪ್ರಾರಂಭ ಮಾಡಿದ್ದು.

 

 

ಯಾವಾಗ ಸೀತಾಮಾತೆಯನ್ನು ಹುಡುಕಿಕೊಂಡು ಲಂಕೆಗೆ ಹೋದಾಗ, ಅಲ್ಲಿ ಶನಿದೇವನು ಅಗ್ನಿಯಿಂದ ಸುಟ್ಟು ಬೆಂದು ಹೋಗಿರುವ ಸ್ಥಿತಿಯಲ್ಲಿ ಶನೈಶ್ಚರ ದೇವನು ಇದ್ದನು.ಇದ್ದನ್ನು ಕಂಡ ಹನುಮಂತನನ್ನು ಈ ಬೆಂಕಿಯ ಗಾಯಗಳಿಂದ ಶನೈಶ್ಚರ ದೇವನನ್ನು ಮುಕ್ತ ಮಾಡಲು ಹನುಮಂತನು ಸಾಸಿವೆ ಎಣ್ಣೆಯ ಲೇಪನವನ್ನು ಶನಿದೇವನಿಗೆ ಹಚ್ಚುತ್ತಾನೆ. ಇದರಿಂದ ಅವನಿಗೆ ಆಗುತ್ತಿರುವ ಉರಿ ಮತ್ತು ನೋವಿನಿಂದ ಬಚಾವಾಗುತ್ತಾನೆ. ಅಲ್ಲಿಂದ ಈ ಪರಂಪರೆಯ ಶುರುವಾಗುತ್ತದೆ.

 

 

ಯಾವುದೇ ವ್ಯಕ್ತಿಯು ಶನಿವಾರ ಅಥವಾ ಮಂಗಳವಾರದ ದಿನ ಶನೇಶ್ಚರ ದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿದರೆ, ಅಭಿಷೇಕ, ಸ್ನಾನ ಮಾಡಿಸಿದರೆ ಈ ಎಣ್ಣೆಯಿಂದ ಆಗ ಆ ವ್ಯಕ್ತಿಗೆ ಇಬ್ಬರೂ ದೇವರ ಕೃಪೆ ದೊರೆಯಲಿದೆ. ಭಜರಂಗ ಬಲಿ ಮತ್ತು ಶನಿ ದೇವರು ಇಬ್ಬರೂ ಅಪಾರವಾದ ಕೃಪೆಯನ್ನು ನೀಡಿ ಆಶೀರ್ವದಿಸಲಿದ್ದಾರೆ. ಈ ಇಬ್ಬರು ಕುಜ ದೋಷದಿಂದ ಮತ್ತು ಶನೈಶ್ಚರ ದೋಷದಿಂದ ಮುಕ್ತಿ ಹೊಂದಲು ಸಹಾಯ ಮಾಡುತ್ತಾರೆ ಮತ್ತು ಶನಿ ಜಯಂತಿಯ ದಿನ ಈ ಅತ್ಯುತ್ತಮವಾದ ದಿನವೂ ಉತ್ತಮವಾದ ಸಂಯೋಗವನ್ನು ಹೊತ್ತು ತಂದಿದೆ.

 

 

ನೀವು ಶನಿ ಜಯಂತಿಯ ದಿನ ಈ ಉಪಾಯವನ್ನು ಮಾಡಿದರೆ, ಅಥವಾ ಪಾಲಿಸಿದರೆ ನೀವು ಎರಡು ಗ್ರಹಗಳ ದೋಷದಿಂದ ಮುಕ್ತಿಯನ್ನು ಪಡೆಯುವುದಲ್ಲದೆ. ಇಬ್ಬರೂ ದೇವರ ಕೃಪೆಯನ್ನು ಸಹ ಗಳಿಸಲಿದ್ದೀರಿ. ಆದ್ದರಿಂದ ಭಕ್ತಿ, ಶ್ರದ್ಧೆಯಿಂದ ಈ ದಿನ ಶನೈಶ್ಚರ ದೇವರ ಪೂಜೆ ಮಾಡಿ ಹನುಮಂತನಿಗೆ ಸಹ ಪೂಜೆ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

1 Comment

1 Comment

  1. Mahesh

    May 14, 2018 at 1:19 pm

    Jai shri ram

Leave a Reply

Your email address will not be published. Required fields are marked *

To Top