ಆರೋಗ್ಯ

ಹೃದಯದ ಸಮಸ್ಯೆಯಿಂದ ,ಹೃದಯಾಘಾತದ ಸಮಸ್ಯೆಯಿಂದ ಬಳಲುತ್ತಿರುವವರು ಕಲ್ಲಂಗಡಿ ತಿನ್ನಲೇಬೇಕು

ಬೇಸಿಗೆಯ ಬಾಯಾರಿಕೆ ಮಾತ್ರ ನೆನಪಾಗುವ ಕಲ್ಲಂಗಡಿ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳನ್ನೂ ದೂರ ಇಡುವುದರ ಜೊತೆಗೆ ದೇಹದ ತೂಕ ಮತ್ತು ಕೊಬ್ಬನ್ನೂ ಕಡಿಮೆ ಮಾಡುತ್ತದೆ.

 

 

ಪ್ರತಿದಿನ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗಿ, ಹೃದಯಾಘಾತ, ಅಧಿಕ ರಕ್ತದೊತ್ತಡ ಮೊದಲಾದ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕದ ಪುರ್ಡ್ಯು ವಿವಿ ನಡೆಸಿದ ಸಂಶೋಧನೆ ತಿಳಿಸಿದೆ.

ರಕ್ತದೊತ್ತಡವನ್ನು ಇದು ಕೂಡಲೇ ಶಮನ ಮಾಡುವಂತಹ ಗುಣವನ್ನು ಹೊಂದಿದೆ. ಜೊತೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಕುಡಿಯುವ ಬದಲು ಹೋಳುಗಳ ರೂಪದಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ನೀರಿಗಿಂತ ಈ ಹಣ್ಣು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

 

 

ಸಂಶೋಧನೆಗೆ ಒಂದಷ್ಟು ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಕೆಲವು ತಿಂಗಳಕಾಲ ಒಂದು ಗುಂಪಿಗೆ ನೀರನ್ನೂ, ಇನ್ನೊಂದು ಗುಂಪಿಗೆ ಕಲ್ಲಂಗಡಿ ರಸವನ್ನು ಸೇವಿಸಲು ಕೊಡಲಾಯಿತು. ಕಲ್ಲಂಗಡಿ ರಸ ಸೇವಿಸಿದ ಗುಂಪಿನವರ ದೇಹಸ್ಥಿತಿ, ನೀರು ಸೇವಿಸಿದವರಿಗಿಂತ ಶೇ 50ರಷ್ಟು ಸಮತೋಲನ ಕಾಯ್ದುಕೊಂಡಿತ್ತು` ಎಂದು ತಮ್ಮ ಸಂಶೋಧನೆ ಕುರಿತು ವಿವರಿಸುತ್ತಾರೆ ಡಾ. ಶುಬಿನ್ ಶಾಹ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top