ಭವಿಷ್ಯ

ವಾರ ಭವಿಷ್ಯ ಮೇ 14 ನೇ ತಾರೀಖಿನಿಂದ 20 ನೇ ತಾರೀಖಿನವರೆಗೆ.

ಮೇಷ (Mesha)

 

 

ಅನಾವಶ್ಯಕ ಖರ್ಚಿಗೆ ನೂರಾರು ದಾರಿಯನ್ನು ಮಾಡಿಕೊಳ್ಳುತ್ತೀರಾ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಮಾನಸಿಕ ನೆಮ್ಮದಿ ಈ ವಾರ ನಿಮಗೆ ಲಭಿಸಲಿದೆ, ಶೀತ ಸಂಬಂಧಿತ ರೋಗಗಳು  ಭಾಧಿಸಲಿವೆ,ಆರೋಗ್ಯದ ಕಡೆ ಗಮನ ಹರಿಸಿ, ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವ ಯೋಗ ಈ ವಾರ ನಿಮಗೆ ಇದೆ . ಆದರೆ ಯಾರನ್ನೂ ಕೂಡ ಈ ವಾರ ಹೆಚ್ಚಿಗೆ ನಂಬಬೇಡಿ.

ಪರಿಹಾರ.

ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿ ಬುಧವಾರ ಬಡ ಮಕ್ಕಳಿಗೆ ಅನ್ನದಾನವನ್ನು ಮಾಡಿ.

ವೃಷಭ (Vrushabha)

 

 

ಸ್ತ್ರೀಯರಿಗೆ ಬಹಳಷ್ಟು ಶುಭವಾಗಲಿದೆ, ಈ ವಾರ ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ,ವಾಹನ ಖರೀದಿ ಮಾಡುವ ಯೋಗವಿದೆ, ನಿರೀಕ್ಷಿತ ಆದಾಯ ನಿಮ್ಮ ಪಾಲಿಗೆ ಲಭ್ಯವಾಗಲಿದೆ, ಆದರೆ ತಾಳ್ಮೆ ಅಗತ್ಯ, ತಾಳ್ಮೆಯಿಂದ ವ್ಯವಹಾರವನ್ನು ಮಾಡಿ, ಆಕಸ್ಮಿಕ ಬಂಧುಗಳ ಭೇಟಿಯನ್ನು ಮಾಡಲಿದ್ದೀರಿ, ರಾಜಕಾರಣಿಗಳಿಗೆ ಬಹಳ ಉತ್ತಮವಾಗಿದೆ ಈ ವಾರ, ಸುಖ ಭೋಜನ ಪ್ರಾಪ್ತಿ.

ಪರಿಹಾರ.

ಪ್ರತಿನಿತ್ಯ ತಂದೆ ತಾಯಿಗಳ ಪಾದಪೂಜೆಯನ್ನು ಮಾಡಿ ಆಶೀರ್ವಾದವನ್ನು ಪಡೆಯಿರಿ .

 

ಮಿಥುನ (Mithuna)

 

ಪಾಲುದಾರಿಕೆಯಲ್ಲಿ ಬಹಳಷ್ಟು ಲಾಭವಾಗಲಿದೆ , ಉನ್ನತ ಸ್ಥಾನಮಾನ ಲಭ್ಯವಾಗಲಿದೆ, ಉದ್ಯೋಗ ಪ್ರಾಪ್ತಿ, ಉತ್ತಮ ಯಶಸ್ಸು ಲಭಿಸಲಿದೆ, ಯಾರು ವಾಹನ ಚಾಲನೆಯನ್ನು ಮಾಡುತ್ತೀರೋ ಅವರಿಗೆ ವಾಹನದಲ್ಲಿ ಕಂಟಕ ಅಥವಾ ತೊಂದರೆ ಉಂಟಾಗಲಿದೆ, ಬಹಳಷ್ಟು ಜಾಗ್ರತೆಯಿಂದ ವಾಹನವನ್ನು ಚಲಾಯಿಸಿ , ಅನ್ಯ ಜನರಲ್ಲಿ ಪ್ರೀತಿ ಉಂಟಾಗುತ್ತದೆ, ನಿಮ್ಮ ಉದಾಸೀನತೆಯಿಂದ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುತ್ತೀರಿ, ಆದಷ್ಟು ಸ್ವಲ್ಪ ಎಚ್ಚರಿಕೆಯಿಂದ ಇರಿ.

ಪರಿಹಾರ.

ಪ್ರತಿನಿತ್ಯ ಗೋ ಪೂಜೆ ಮಾಡಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ.

 

ಕರ್ಕ (Karka)

 

ಇಲ್ಲ ಸಲ್ಲದ ಅಪವಾದಗಳು ಈ ವಾರ ನಿಮ್ಮ ಮೇಲೆ ಬರಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ ಪ್ರಾಪ್ತಿ, ಸಮಾಜದಲ್ಲಿ ಉತ್ತಮ ಹೆಸರು ಗೌರವ ಲಭಿಸಲಿದೆ , ಸಣ್ಣಪುಟ್ಟ ವಿಷಯಗಳಿಂದ ಕಲಹ ಉಂಟಾಗಲಿದೆ, ತಾಳ್ಮೆ ಅತ್ಯಗತ್ಯ, ವಾರದ ಮಧ್ಯಭಾಗದಲ್ಲಿ ಕಲಹಗಳಾಗುವ ಸಾಧ್ಯತೆ ಇದೆ.

ಪರಿಹಾರ .

ಅಶ್ವತ್ಥ ವೃಕ್ಷ ಪ್ರದಕ್ಷಿಣೆಯನ್ನು ಪ್ರತಿನಿತ್ಯ ಹದಿನೆಂಟು ಬಾರಿ ಮಾಡಿ, ಬುಧವಾರ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

 

ಸಿಂಹ (Simha)

 

ಸಿಂಹ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಬಡ್ತಿ, ಹಿರಿಯರಿಂದ ಬೋಧನೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ಥಗಿತ ಕಾರ್ಯಗಳಲ್ಲಿ ಮನ್ನಣೆ, ಮಾತಿನಿಂದ ಸಹಾಯವನ್ನೂ ಪಡೆಯುತ್ತೀರಿ.

ಪರಿಹಾರ.

ಸೂರ್ಯ ನಮಸ್ಕಾರವನ್ನು ಮಾಡಿ ಕಪ್ಪು ನಾಯಿಗೆ ಊಟವನ್ನು ಹಾಕಿ .

 

ಕನ್ಯಾರಾಶಿ (Kanya)

 

ಶ್ರಮಕ್ಕೆ ತಕ್ಕ ಫಲ ಪ್ರತಿಫಲ ಲಭ್ಯವಾಗಲಿದೆ, ಹಿತೈಷಿಗಳು ನಿಮ್ಮ ಸಾಧನೆಯನ್ನು ಹೊಗಳುತ್ತಾರೆ , ವಾರಾಂತ್ಯದಲ್ಲಿ ಶರೀರದಲ್ಲಿ ಏನೋ ಒಂದು ರೀತಿಯ ತಳಮಳ ಉಂಟಾಗಲಿದೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ , ಅನಿರೀಕ್ಷಿತ ಖರ್ಚು ಹೆಚ್ಚಾಗಲಿದೆ , ಖರ್ಚಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ.

ಪರಿಹಾರ.

ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ಮಂಗಳವಾರದ ದಿನ ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಗೆ ನೂರಾ ಎಂಟು ವೀಳ್ಯದೆಲೆಯ ಒಂದು ಹಾರವನ್ನು ಅರ್ಪಿಸಿ ನಮಸ್ಕಾರ ಮಾಡಿ.

 

ತುಲಾ (Tula)

 

ಆಸ್ತಿ ವಿಚಾರದಲ್ಲಿ ಈ ವಾರ ವಾದ ವಿವಾದಗಳು ಉಂಟಾಗಲಿವೆ, ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಅನಗತ್ಯ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ, ಅಪರಿಚಿತರಿಂದ ತೊಂದರೆ ಉಂಟಾಗಲಿದೆ, ಪರರಿಂದ ವಂಚನೆಗೆ ಒಳಗಾಗಲಿದ್ದೀರಿ, ಹಿತ ಶತ್ರುಗಳಿಂದ ತೊಂದರೆ .

ಪರಿಹಾರ.

ಪ್ರತಿನಿತ್ಯ ಶಿವಾಲಯಕ್ಕೆ ಭೇಟಿ ನೀಡಿ  ಸೋಮವಾರ ಬಿಲ್ವಾರ್ಚನೆಯನ್ನು ಮಾಡಿಸಿ ದಶ  ಪ್ರದಕ್ಷಿಣಾ ನಮಸ್ಕಾರವನ್ನು ಮಾಡಿ.

 

ವೃಶ್ಚಿಕ (Vrushchika)

 

 

ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಗಳಿಸಲಿದ್ದೀರಿ , ವಿದೇಶ ಪ್ರಯಾಣ ಮಾಡುವ ಶುಭಯೋಗ , ಕೋಪ  ಜಾಸ್ತಿ ಮಾಡಿಕೊಳ್ಳಲಿದ್ದೀರಿ, ಆದ್ದರಿಂದ ಸ್ವಲ್ಪ ತಾಳ್ಮೆ ಇರಲಿ, ವಾಹನ ಚಾಲಕರಿಗೆ ಈ ವಾರ ತೊಂದರೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಯ , ವ್ಯಾಪಾರದಲ್ಲಿ ಉತ್ತಮ ವಹಿವಾಟು ನಡೆಯಲಿದೆ.

ಪರಿಹಾರ.

ಪ್ರತಿನಿತ್ಯ “ಓಂ ಸೂರ್ಯ ನಾರಾಯಣಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಪಕ್ಷಿಗಳಿಗೆ ಧಾನ್ಯವನ್ನು ಹಾಕಿ.

 

ಧನು ರಾಶಿ (Dhanu)

 

ಈ ವಾರ ದ್ರವ್ಯಗಳಿಂದ ಲಾಭ ಲಭಿಸಲಿದೆ, ನಾನಾ ವಿಚಾರಗಳಲ್ಲಿ ಆಸಕ್ತಿ ಮೂಡಲಿದೆ, ಮಂಗಳ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ, ಮಹಿಳೆಯರಿಗೆ ವಿಶೇಷವಾಗಿ ಲಾಭವಾಗಲಿದೆ, ಅತಿಯಾದ ಮುಂಗೋಪ , ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಅಭಿವೃದ್ಧಿ ಕುಂಠಿತವಾಗುತ್ತದೆ, ಶತ್ರುಗಳ ಬಾಧೆಗೆ ಒಳಗಾಗಲಿದ್ದೀರಿ .

ಪರಿಹಾರ.

“ ಓಂ ದಕ್ಷಿಣಾ ಮೂರ್ತಾಯೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ ಕಡಲೆಕಾಳಿನ ಹಾರವನ್ನು ದಕ್ಷಿಣ ಮೂರ್ತಿ ದೇವರಿಗೆ ಅರ್ಪಿಸಿ ನಮಸ್ಕಾರ ಮಾಡಿ.

 

ಮಕರ (Makara)

 

ಈ ವಾರ ಶುಭ ಫಲ ಕಾಣಲಿದ್ದೀರಿ , ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ,  ವಿವಿಧ ಮೂಲಗಳಿಂದ ಧನಾಗಮನವಾಗಲಿದೆ, ಮಿತ್ರರಿಂದ ಬೆಂಬಲ , ಸ್ಥಿರಾಸ್ತಿ ಖರೀದಿ ಮಾಡುವುದಕ್ಕೆ ಬಹಳಷ್ಟು ಓಡಾಟವನ್ನು ಮಾಡುತ್ತೀರಾ,  ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಶುಭಯೋಗ, ಆರೋಗ್ಯದಲ್ಲಿ ವಾರಾಂತ್ಯದಲ್ಲಿ ಏರುಪೇರು ಉಂಟಾಗಲಿದೆ .

ಪರಿಹಾರ.

ಪ್ರತಿನಿತ್ಯ “ಲಕ್ಷ್ಮೀ ಹೃದಯ ಸ್ತೋತ್ರ” ಪಾರಾಯಣ ಮಾಡಿ ಶುಕ್ರವಾರ ಸುಮಂಗಲಿಯರಿಗೆ ಅರಿಶಿನ, ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ಕುಂಭರಾಶಿ (Kumbha)

 

ಈ ವಾರ ಕೈಗಾರಿಕೋದ್ಯಮಿಗಳಿಗೆ ಯಶಸ್ಸು , ಮಾನಸಿಕ ನೆಮ್ಮದಿ  ಮತ್ತು ಶಾಂತಿ ದೊರೆಯಲಿದೆ, ವಿದ್ಯಾರ್ಥಿಗಳಲ್ಲಿ ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಲಿದೆ, ಶತ್ರುಗಳ ಬಾಧೆ, ಚೋರ ಭಯ, ಕೃಷಿಕರಿಗೆ ನಷ್ಟ, ದಾಂಪತ್ಯದಲ್ಲಿ ಪ್ರೀತಿ ಮತ್ತು ವಾತ್ಸಲ್ಯ  ಹೆಚ್ಚಾಗಲಿದೆ .

ಪರಿಹಾರ.

“ಓಂ ನಾರಾಯಣಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ ಶನಿವಾರ ಸಿಹಿ ನೈವೇದ್ಯವನ್ನು ಮಾಡಿ ವಿನಿಯೋಗವನ್ನು ಮಾಡಿ .

 

ಮೀನರಾಶಿ (Meena)

 

ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೆಮ್ಮದಿ, ದಾಯಾದಿಗಳ ಜೊತೆ ಕಲಹ ಉಂಟಾಗಲಿದೆ, ಗಣ್ಯ ವ್ಯಕ್ತಿಗಳ ಭೇಟಿ ಮಾಡಲಿದ್ದೀರಿ, ಯತ್ನ ಕಾರ್ಯಗಳಲ್ಲಿ ಜಯ, ಇತರರ ಮಾತಿಗೆ ಮರುಳಾಗಬೇಡಿ, ಆದಷ್ಟು ಎಚ್ಚರವಾಗಿರಿ , ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ.

ಪರಿಹಾರ.

ಪ್ರತಿನಿತ್ಯ ಕನಕಧಾರಾ ಸ್ತೋತ್ರವನ್ನು ಪಾರಾಯಣ ಮಾಡಿ , ಮಂಗಳವಾರ ಒಟು ಬ್ರಾಹ್ಮಣನಿಗೆ ಸ್ವಯಂ ಪಾಕವನ್ನು ನೀಡಿ, ನಮಸ್ಕಾರವನ್ನು ಮಾಡಿ, ಆಶೀರ್ವಾದವನ್ನು ಪಡೆಯಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top