ದೇವರು

ಬೃಗು ಮಹರ್ಷಿಯ ನಡವಳಿಕೆಯಿಂದ ಕೋಪಗೊಂಡ ಲಕ್ಷ್ಮೀ ದೇವಿ , ವಿಷ್ಣುವಿನ ಕೋಪದ ಕೆಂಗಣ್ಣಿಗೆ ಗುರಿಯಾದ ಚೋಳ ರಾಜ

ಭೂಮಿಗೆ ಬಂದ ನಂತರ ವಿಷ್ಣು ದೇವನು ಚೋಳ ರಾಜನಿಗೆ ಶಾಪ ಕೊಟ್ಟ ಕಥೆ.

 

ಲಕ್ಷ್ಮೀ ದೇವಿ ಮತ್ತು ಮಹಾ ವಿಷ್ಣು ದೇವನ ಮಧ್ಯೆ ಶತ್ರುತ್ವ ಬೆಳೆಯುತ್ತದೆ.

 

ಶ್ರೀ ಲಕ್ಷ್ಮೀದೇವಿಯು ವಿಷ್ಣುವಿನ ಈ ವರ್ತನೆಯಿಂದ ಅಂದರೆ ಭೃಗು ಮಹರ್ಷಿಗಳು ವಿಷ್ಣು ದೇವನ ಎದೆಯ ಮೇಲೆ ತನ್ನ ಕಾಲನ್ನು ಇಟ್ಟರೂ ಸಹ ವಿಷ್ಣುವು  ಭೃಗು ಮಹರ್ಷಿಗಳ ಕಾಲನ್ನು ತೆಗೆದು ಗಮನಿಸಲಿಲ್ಲ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಕ್ಕಾಗಿ ಭೃಗು ಮಹರ್ಷಿಗಳ ಮೇಲೆ ಯಾವುದೇ ಕೋಪವನ್ನು ತೋರಿಸದ ಕಾರಣ ಇದನ್ನು ಕಂಡ ಲಕ್ಷ್ಮೀ ದೇವಿಯ ಅವನ ಗಂಡನ ಈ ರೀತಿಯ ವರ್ತನೆಯು ಲಕ್ಷ್ಮೀದೇವಿಗೆ ಸರಿ ಎನಿಸಲಿಲ್ಲ .ಆದ್ದರಿಂದ ಲಕ್ಷ್ಮೀ ದೇವಿಯೂ ಕೋಪಗೊಂಡು ಸತ್ಯವೇನೆಂದು ಸಹ ತಿಳಿಯದೆ ಕೋಪಗೊಳ್ಳುತ್ತಾಳೆ. ವಿಷ್ಣುವು ಲಕ್ಷ್ಮೀದೇವಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ .

 

ಲಕ್ಷ್ಮೀ ದೇವಿಯು ವೈಕುಂಠವನ್ನು ತೊರೆದು ಹೋಗುತ್ತಾಳೆ.

 

ಶ್ರೀ ಮಹಾವಿಷ್ಣು  ಲಕ್ಷ್ಮೀ ದೇವಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ ಅದರೂ ಲಕ್ಷ್ಮೀ ದೇವಿಯು  ಶಾಂತವಾಗದೆ ಕೋಪಗೊಂಡು ಮತ್ತು  ದುಃಖಿತಳಾಗಿ ವೈಕುಂಠವನ್ನು ತೊರೆದು ಹೋಗುತ್ತಾಳೆ.

 

 ಲಕ್ಷ್ಮೀ ದೇವಿಯ ಕೊಲ್ಹಾಪುರದಲ್ಲಿ ತಪಸ್ಸನ್ನು ಮಾಡಲು ಹೋಗುತ್ತಾಳೆ.

 

ತ್ರಿಮೂರ್ತಿಗಳು ಮತ್ತು ಋಷಿ ಮುನಿಗಳ ಗುಂಪು ಎಲ್ಲರೂ ಬಂದು ಲಕ್ಷ್ಮೀದೇವಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಾರೆ. ಸತ್ಯವೇನೆಂದು ತಿಳಿಸಲು ಹೊರಡುತ್ತಾರೆ. ಆದರೆ ಲಕ್ಷ್ಮೀ  ದೇವಿಯೂ ಇವರು ಹೇಳುವ ಯಾವ ಮಾತನ್ನೂ ಸಹ ಕೇಳದೇ ಕೊಲ್ಹಾಪುರಕ್ಕೆ ಹೋಗಿ ತಪಸ್ಸಿನಲ್ಲಿ ತಲ್ಲೀನಳಾಗುತ್ತಾಳೆ.

 

ಶ್ರೀ ಮಹಾವಿಷ್ಣು ವರಾಹ ಶಿಖರಕ್ಕೆ ಬರುತ್ತಾನೆ.

 

ಲಕ್ಷ್ಮೀ ದೇವಿಯು ವೈಕುಂಠವನ್ನು ತೊರೆದು ಹೋದ ನಂತರ ಮಹಾವಿಷ್ಣುವು ಸಹ ಬೇಸತ್ತು ವೈಕುಂಠವನ್ನು ತೊರೆದು ವರಾಹ ಶಿಖರಕ್ಕೆ ಬರುತ್ತಾನೆ . ಅವನು ಸಹ ಭೂಮಿಯ ಮೇಲೆ ವರಾಹ ಮೂರ್ತಿಯ ಅವತಾರವನ್ನು ತಾಳಿ ವರಾಹ ಶಿಖರಕ್ಕೆ ಬಂದು ನೆಲೆಸುತ್ತಾನೆ.

 

ಶ್ರೀ ಮಹಾವಿಷ್ಣುವು ವರಾಹ ಮೂರ್ತಿಗೆ ಸ್ಥಳವನ್ನು ಕೇಳುತ್ತಾನೆ.

 

ಶ್ರೀ ಮಹಾವಿಷ್ಣುವು ಅವನ ವರಹಾ ಮೂರ್ತಿಯ ಅವತಾರದಿಂದ ಸಮಾಧಾನವಾಗಿ. ಅವನಿಗೆ ವರಹಾ ಶಿಖರದಲ್ಲಿ ನೆಲೆಗೊಳ್ಳಲು  ಸ್ಥಳವೂ ಸಿಗುವುದು. ನಂತರ ತಪಸ್ಸನ್ನು  ಮಾಡಲು  ಕುಳಿತುಕೊಳ್ಳುತ್ತಾನೆ.

 

ಪಾರ್ವತಿ ದೇವಿಯು ಹಸು ಕರುಗಳನ್ನು ಚೋಳರಾಜನಿಗೆ ಮಾರಲು ಬರುತ್ತಾಳೆ.

 

ಮಹಾವಿಷ್ಣು ಭೂಮಿಗೆ ಬಂದು ತಪಸ್ಸನ್ನು ಶುರು ಮಾಡಿದ ನಂತರ ಅವನು ತಪಸ್ಸನ್ನು ಆಚರಿಸುವಾಗ ಅವನಿಗೆ ಹಸಿವು ಮತ್ತು ನಿದ್ರೆ ಎರಡೂ ಸಹ ಇಲ್ಲದೆ ತತ್ತರಿಸಿ ಹೋಗುತ್ತಾನೆ. ನಾರದ ಋಷಿಗಳು ಇದನ್ನು ಪಾರ್ವತಿ ದೇವಿಗೆ ತಿಳಿಸಿ ಹೇಳುತ್ತಾರೆ. ಪಾರ್ವತಿ ದೇವಿಯ ಪ್ರಾರ್ಥನೆಯಿಂದ ಬ್ರಹ್ಮ ಮತ್ತು ಶಿವನು ಹಸು ಮತ್ತು ಕರುಗಳ ಅವತಾರವಾಗಿ ಬದಲಾಗುತ್ತಾರೆ. ಪಾರ್ವತಿ ದೇವಿಯು ಆ ಹಸು ಮತ್ತು ಕರುವಿನ ಜೊತೆಗೆ ಬಂದು ಭೂಮಿಯಲ್ಲಿ ವಾಸಿಸುತ್ತಿರುವ ಚೋಳ ರಾಜನಿಗೆ ಹಸು ಮತ್ತು ಕರು ಎರಡನ್ನೂ ಮಾರುತ್ತಾಳೆ.

 

 ಹಸುವು ಮಹಾವಿಷ್ಣು ವಾಸಿಸುವ ಜಾಗಕ್ಕೆ ಬಂದು ಪ್ರತಿದಿನ ಹಾಲನ್ನು ಕೊಡುತ್ತಿತ್ತು.

 

ವರಹಾ ಪರ್ವತವು ಚೋಳ ರಾಜನ ಸಾಮ್ರಾಜ್ಯದ ಒಂದು ಭಾಗವೇ ಆಗಿತ್ತು. ಚೋಳನು ಹಸುಗಳು ಸಹ ಈ ಕಾಡಿನ ಸ್ಥಳದಲ್ಲಿಯೇ ಬಂದು ಆಹಾರವನ್ನು ಸೇವಿಸುತ್ತಿದ್ದವು.ಶಿವ ದೇವನು ಮತ್ತು ಬ್ರಹ್ಮ ದೇವನು ಹಸು ಮತ್ತು ಕರುವಿನ ಅವತಾರದಲ್ಲಿದ್ದರೂ ಸಹ ಅದೇ ಕಾಡಿನಲ್ಲಿ ಬಂದು ಬೇರೆ ಹಸುಗಳ ಗುಂಪಿನ ಜೊತೆಯಲ್ಲಿ ತಿರುಗಾಡುತ್ತಾ ಮಹಾವಿಷ್ಣು ಇರುವ ಸ್ಥಳಕ್ಕೆ ಬಂದು ಹಸುವು ಹಾಲನ್ನು ಪ್ರತಿದಿನ ಕೊಟ್ಟು ಹೋಗುತ್ತಿತ್ತು.ಹೀಗಿರುವಾಗ  ಆ ಸ್ಥಳಕ್ಕೆ  ಹೋಗಿ ಹಾಲನ್ನು ಕೊಡುತ್ತಿದ್ದುದನ್ನು ಒಂದು ದಿನ ಹಸುಗಳನ್ನು ಕಾಯುವ ದನ ಕಾಯುವವನು ರಾಜನ ಬಳಿ ಹೋಗಿ ಈ  ವಿಷಯವನ್ನು ತಿಳಿಸಿದನು.

 

ಮಹಾವಿಷ್ಣು ಚೋಳ ರಾಜನಿಗೆ ಶಾಪ ನೀಡುತ್ತಾನೆ.

 

 

ಮರುದಿನ ಚೋಳರಾಜನ  ಅಲ್ಲಿಗೆ  ಆ ಸ್ಥಳದ ಬಳಿಯಲ್ಲಿ ಬಂದು ಅಡಗಿ ಕುಳಿತು ಹಸುವು ಹಾಲು ಕೊಡುತ್ತಿರುವುದನ್ನು ಗಮನಿಸುತ್ತಾನೆ.ಈ ದೃಶ್ಯವನ್ನು ಕಂಡ ತಕ್ಷಣವೇ ಚೋಳ ರಾಜನು ತನ್ನ ಕತ್ತಿಯಿಂದ ಆ ಹಸುವನ್ನು ಕತ್ತರಿಸಲು  ಮುಂದಾಗುತ್ತಾನೆ. ಆಗ ಅಲ್ಲಿಂದ ವಿಷ್ಣುವು ಹೊರಬರಲು ಪ್ರಯತ್ನಿಸುತ್ತಿರುತ್ತಾನೆ. ವಿಷ್ಣುವಿಗೆ ಇದರಿಂದ ಗಾಯವಾಗುತ್ತದೆ. ಆ ಗಾಯದಿಂದ ರಕ್ತವು ಜೋರಾಗಿ ಹರಿಯ ತೊಡಗುತ್ತದೆ.ದನ ಕಾಯುವವನು ಇದನ್ನೆಲ್ಲಾ ಕಂಡು ಮೂರ್ಛೆ ಹೋಗುತ್ತಾನೆ.

ಜೋಳ ರಾಜನು  ವಿಷ್ಣುವಿನ ಕಾಲಿಗೆ ಬಿದ್ದು ತಪ್ಪಾಯಿತು ಎಂದು ಕ್ಷಮೆ ಕೇಳುತ್ತಾನೆ. ಆದರೆ ವಿಷ್ಣು ದೇವನು ಯಾವ ದಯೆ ಮತ್ತು ಕರುಣೆಯನ್ನು ಸಹ ತೋರಿಸದೆ. ನೀನು ಪ್ರೇತಾತ್ಮವಾಗು ಎಂದು ಶಾಪ ನೀಡುತ್ತಾನೆ. ನಂತರ ಅವನು ಮುಂದಿನ ಜನ್ಮದಲ್ಲಿ ಆಕಾಶ ರಾಜನಾಗಿ ಜನ್ಮ ಪಡೆಯುವೆ ಎಂದು ಹೇಳಿದನು. ನಂತರ ವಿಷ್ಣುವು ಆಕಾಶ ರಾಜನಾದ ನಂತರ ನಿನ್ನ ಮಗಳಾದ ಪದ್ಮಾವತಿಯನ್ನು ವಿವಾಹವಾಗುವೆನು ಎಂದು ವರವನ್ನು ನೀಡುತ್ತಾನೆ .

ದನ ಕಾಯುವವನು ಇದೆಲ್ಲವನ್ನೂ ಪ್ರಪ್ರಥಮವಾಗಿ ಈ ಭೂಮಿಯ ಮೇಲೆ ಕಂಡನು. ಆದ್ದರಿಂದ ಅವನು ಇದೆಲ್ಲವನ್ನೂ ನೋಡಿ ಮೂರ್ಛೆ ಹೋದನು. ಹೀಗೆ ವಿಷ್ಣುವಿನಿಂದ ಚೋಳ ರಾಜನಿಗೆ ಪ್ರೇತಾತ್ಮವಾಗಿ ನಂತರ ಮುಂದಿನ ಜನ್ಮದಲ್ಲಿ ಆಕಾಶ ರಾಜನಾಗಿ ಪುನರ್ಜನ್ಮ ವಾಗುವ ಶಾಪ ದೊರೆಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top