ದೇವರು

ಅಪಮೃತ್ಯು  ದೋಷದಿಂದ ಪದೇ ಪದೇ ಆಕಸ್ಮಿಕ ಅಪಘಾತಗಳು ಆಗ್ತಾ ಇದ್ರೆ, ಜೊತೆಗೆ ಜಾತಕ ದೋಷ, ಗ್ರಹಚಾರ ದೋಷ ಇದ್ರೆ ಶಾಸ್ತ್ರದ ಈ ಪರಿಹಾರ ಮಾಡ್ಕೊಳ್ಳಿ

ಅಪಮೃತ್ಯು  ದೋಷ ಇದ್ದರೆ ಪದೇ ಪದೇ ಆಕಸ್ಮಿಕ  ಅಪಘಾತಗಳು ಸಂಭವಿಸುತ್ತಿದ್ದರೆ , ಜೊತೆಗೆ ಜಾತಕ ದೋಷ, ಗ್ರಹಚಾರ ದೋಷ, ಇದಕ್ಕೆ ಪ್ರಮುಖವಾಗಿ ಕಾರಣ ಅಂತ ಹೇಳಲಾಗುತ್ತದೆ.ಇದಕ್ಕೆ  ಪರಿಹಾರ ಏನು ?

ಮುಖ್ಯವಾಗಿ ಇತ್ತೀಚೆಗಷ್ಟೇ ನಾವು ನೋಡ್ತಾ ಇದ್ದೇವೆ… ಸಾರ್ವಜನಿಕ ಕ್ಷೇತ್ರದಲ್ಲಿ  ವ್ಯವಸ್ಥಿತವಾಗಿ ಪಾಪ ಬಹಳಷ್ಟು ಆಸೆಗಳನ್ನು ಜನರು ಇಟ್ಟುಕೊಂಡಿರುತ್ತಾರೆ. ಮನೆ ಬಿಟ್ಟು ಹೋಗಿದ್ದರೆ ಬರತಕ್ಕಂತಹ  ಸಮಯದಲ್ಲಿ ಅಥವಾ ಹೊರಗೆ ಹೋದ  ಸಮಯದಲ್ಲಿ ಬಹಳಷ್ಟು ಅಪಘಾತಗಳ ಆಗುತ್ತವೆ. ಇದಕ್ಕೆ  ಕಾರಣ ಏನು ? ಯಾಕೆ ಈ ರೀತಿ ಆಗ್ತಾ ಇದೆ ?

 

 

 

ಅದಕ್ಕೆ ಹೇಳುವುದು ನಾವು ಯಾವುದೇ ಪೂಜೆ ಕಾರ್ಯಗಳನ್ನು ಮಾಡಿದರೂ ಭಕ್ತಿ,ಶ್ರದ್ದೆ, ಏಕಾಗ್ರತೆಯಿಂದ ಮಾಡಬೇಕು . ಈ ಶ್ರದ್ದೆ,  ಭಕ್ತಿ , ಏಕಾಗ್ರತೆ ಎನ್ನುವುದನ್ನು ಎಲ್ಲೋ ಕಳೆದು ಕೊಳ್ಳುತ್ತಾ ಇದ್ದಾರೆ ಇತ್ತೀಚಿನ ಕಾಲದ ಜನಗಳಲ್ಲಿ ಈಗ ಇದ್ಯಾವುದೂ ಇಲ್ಲ.ಕಡಿಮೆಯಾಗುತ್ತಾ ಬರುತ್ತಿದೆ.

ವ್ಯವಸ್ಥಿತವಾಗಿ ಲಗ್ನದಿಂದ 8ನೇ ಮನೆಯನ್ನು ಮೃತ್ಯು ಕ್ಷೇತ್ರ ಎಂದು ಕರೆಯುತ್ತೇವೆ. ಆ ಮೃತ್ಯು ಕ್ಷೇತ್ರಕ್ಕೆ ಅಧಿಪತಿಯಾಗಿರುವ ಗ್ರಹದ ದೆಶೆಯು ನೆಡೆಯುತ್ತಿರುವ ಸಮಯದಲ್ಲಿ  ರಾಹು ಭುಕ್ತಿ ಅಥವಾ ಕೇತು ಭುಕ್ತಿ  ಏನಾದರೂ ಬಂದರೆ ಅವರಿಗೆ ಈ ಒಂದು ಅಪಘಾತಗಳ ಆಗುವ  ಸಾಧ್ಯತೆಗಳು ಇರುತ್ತದೆ.

ಇದರ ಜೊತೆಗೆ ಚಂದ್ರ ಮತ್ತು ರಾಹು,  ಚಂದ್ರ ಮತ್ತು ಕುಜ,  ಅಂದರೆ ಚಂದ್ರ ಮತ್ತು ಕೇತು  ಹೀಗೆ ಸಂಯೋಗದಲ್ಲಿ ಇದ್ದರೆ ಇದೂ ಕೂಡ ಅಪಘಾತಗಳಾಗುವ   ಸಾಧ್ಯತೆ ಇದೆ.

ಪುರುಷ ಸೂಕ್ತದಲ್ಲಿ ಇರುವ ಒಂದು ಸಾಲನ್ನು ನಾವು ಹೇಳುತ್ತೇವೆ ಚಂದ್ರ ಮನಸೋ ಜಾತಃ ಅಂದ್ರೆ ಮನುಷ್ಯನ ಮನಸ್ಸನ್ನು ಪರಿಶುದ್ಧತೆಯನ್ನು ಮಾಡುವವನು  ಚಂದ್ರ. ಆ  ಚಂದ್ರನ ಬಲ ಎನ್ನುವುದು ಬರುತ್ತೆ.

 

 

ಸೋಮವಾರದ ದಿನ ಅನ್ನವನ್ನು ತ್ಯಜಿಸುತ್ತಾರೆ. ಈ ಸೋಮವಾರದಲ್ಲಿ ಎಷ್ಟೋ ಜನ ತಿಳಿದಿರುತ್ತಾರೆ ಅನ್ನವನ್ನು ದೇವರಿಗೆ  ಅರ್ಪಣೆಯನ್ನು ಮಾಡುವ  ಕೆಲಸವನ್ನು ಮಾಡುತ್ತಾರೆ. ನೋಡಿ ಅಂತವರು ಸ್ವಲ್ಪ ಆರೋಗ್ಯದಲ್ಲಿ ವ್ಯವಸ್ಥಿತವಾಗಿ ಹಂತ ಹಂತವಾಗಿ ಅಭಿವೃದ್ಧಿಯತ್ತ ಬರ್ತಾ ಇರ್ತಾರೆ ಮತ್ತೆ ಅಪಘಾತಗಳು ಕೂಡ ಅವರಿಗೆ ತುಂಬಾ ಕಡಿಮೆ ಆಗುತ್ತವೆ.

ಪರಿಹಾರ.

ಈ ರೀತಿ ಏನಾದರೂ ನಿಮಗೆ ದೋಷ ಇದ್ದರೆ ನೀವು ಮೊದಲು ಮಾಡಬೇಕಾಗಿರುವ ಕೆಲಸ ಇಷ್ಟೇ ಸೋಮವಾರ ಪರಮೇಶ್ವರನಿಗೆ ಶಾಲಿಯಾನ್ನವನ್ನು  ನೈವೇದ್ಯವನ್ನು ಮಾಡಬೇಕು .

ನಿಮ್ಮ ಮನೆಯಲ್ಲಿ ವ್ಯವಸ್ಥಿತವಾಗಿ ಶ್ರೀ ಚಕ್ರ ಇರಬಹುದು, ಆಥವಾ ಸರಸ್ವತಿ ಯಂತ್ರ, ಚಕ್ರ ಇರಬಹುದು ಅಥವಾ ಲಕ್ಷ್ಮೀ ನಾರಾಯಣ ಹೃದಯ ಚಕ್ರ ಇರಬಹುದು ಅಥವಾ ವ್ಯವಸ್ಥಿತವಾಗಿ ಸುದರ್ಶನ ಚಕ್ರ ಇರಬಹುದು ಇಂಥಹ ಒಂದು ಚಕ್ರಗಳನ್ನು ಒಳಗೋಡೆಗೆ, ನಿಮ್ಮ ಮನೆಯಲ್ಲಿ ಲಕ್ಷ್ಮಿ ನಾರಾಯಣ ಸಾಲಿಗ್ರಾಮ.

 

 

ಈ ಲಕ್ಷ್ಮಿ ನಾರಾಯಣ ಸಾಲಿಗ್ರಾಮವನ್ನು ಇಟ್ಟು ಪ್ರತಿ ಬುಧವಾರ, ಪ್ರತಿ ಸೋಮವಾರ, ಪ್ರತಿ ಶನಿವಾರ ಕ್ಷೀರಾಭಿಷೇಕ, ಜಲಾಭಿಷೇಕವನ್ನು ಮಾಡಿ ಅದರಲ್ಲಿ  ಬರುವ  ಒಂದು ಉದ್ಧರಣೆ ತೀರ್ಥವನ್ನು   ನಿಮ್ಮ ಶರೀರಕ್ಕೆ  ಪ್ರಾಶನ್ನವನ್ನು  ಮಾಡಿ,ಅಂದರೆ ಸೇವಿಸಿ.

ಜೊತೆಗೆ   ಪ್ರಾತಃ  ಕಾಲದಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿ,  ಜೊತೆಗೆ ಧ್ಯಾನವನ್ನು  ಮಾಡಿಕೊಳ್ಳುವುದು ,  ಮನಸ್ಸಿನಲ್ಲಿರುವ   ಕಲ್ಮಶಗಳನ್ನು ತೆಗೆದು ನಿರಾಳವನ್ನು ಮಾಡಿಕೊಳ್ಳುವುದು, ಮನಃಶಾಂತಿಯನ್ನು ಕಾಪಾಡಿಕೊಳ್ಳಬೇಕು. ಏಕಾಗ್ರತೆಯಿಂದ ವಾಹನವನ್ನು  ಚಾಲನೆಯನ್ನು ಮಾಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top